ಬೆಂಗಳೂರು: ಯೆಲ್ಲೋ ಲೈನ್ ಮೆಟ್ರೋ(Yellow Line Metro) ಸಂಚಾರ ಆರಂಭವಾಗುತ್ತಿರುವ ಈ ಸಮಯದಲ್ಲಿ ಬೆಂಗಳೂರಿನ ಜನರಿಗೆ ಮತ್ತೊಂದು ಸಿಹಿ ಸುದ್ದಿ ಹೊರ ಬಿದ್ದಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಬಿಎಂಆರ್ಸಿಎಲ್ (BMRCL) ನಗರದಲ್ಲೇ ಅತಿ ಉದ್ದದ ಮೆಟ್ರೋ(Namma Metro) ಮಾರ್ಗ ನಿರ್ಮಿಸಲು ಸಿದ್ಧತೆ ನಡೆಸುತ್ತಿದೆ ಈ ಹೊಸ ಮಾರ್ಗವೂ ಬೆಂಗಳೂರಿನಲ್ಲಿರುವ ಐಟಿಬಿಟಿ(ITBT) ಮತ್ತು ಇಂಡಸ್ಟ್ರಿಯಲ್ ಪ್ರದೇಶಗಳನ್ನು(Industrial Area) ಸಂಪರ್ಕಿಸುವ ಮೂಲಕ ಸಂಚಾರದಟ್ಟಣೆಯ ಸಮಸ್ಯೆಯನ್ನ ಗಣನೀಯವಾಗಿ ತಗ್ಗಿಸಲಿದೆ.
ಇತಿಹಾಸದಲ್ಲೇ ಅತಿ ಉದ್ದದ ಮೆಟ್ರೋ ಮಾರ್ಗ
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಆರ್ ವಿ ರೋಡ್ ಮತ್ತು ಬೊಮ್ಮಸಂದ್ರ ನಡುವಿನ ಎಲ್ಲೋ ಲೈನ್ ಮೆಟ್ರೋಗೆ(Yellow Line Metro) ಹಸಿರು ಶಾಲೆ, ತೋರಿದ ಬೆನ್ನಲ್ಲೇ ಬಿ ಎಂ ಆರ್ ಸಿ ಎಲ್(BMRCL) ಅಧಿಕಾರಿಗಳು ಈಗ ಮತ್ತೊಂದು ದೊಡ್ಡ ಯೋಜನೆಯತ್ತ ಗಮನಹರಿಸಿದ್ದಾರೆ. ಪ್ರಸ್ತುತ ಕಾಮಗಾರಿ ನಡೆಯುತ್ತಿರುವ ಪಿಂಕ್ ಲೈನ್ ಮೆಟ್ರೋ(Pink Line Metro) ಮಾರ್ಗವನ್ನು ಕಾಳೇನ ಅಗ್ರಹಾರದಿಂದ ಕಾಡುಗೋಡಿ ಟ್ರೀ ಪಾರ್ಕ್ ವರೆಗೆ ವಿಸ್ತರಿಸಲು ಯೋಜಿಸಲಾಗಿದೆ. ಈ ವಿಸ್ತರಣೆ ಪೂರ್ಣಗೊಂಡರೆ ಇದು ಬೆಂಗಳೂರಿನಲ್ಲೇ ಅತಿ ಉದ್ದದ ಸುಮಾರು 68 ಕಿಲೋಮೀಟರ್ ಉದ್ದದ ಮೆಟ್ರೋ ಮಾರ್ಗವಾಗಲಿದೆ.
ಇದನ್ನೂ ಓದಿ: Dharmasthala Case: ಸ್ನೇಹಮಯಿ ಕೃಷ್ಣ ಎಂಟ್ರಿ, ನಾಲ್ವರ ವಿರುದ್ಧ ದೂರು ದಾಖಲು
ಪ್ರಸುತಾ ಪಿಂಕ್ ಲೈನ್(pink Line Metro) ಮಾರ್ಗದ ಶೇಕಡ 90ರಷ್ಟು ಕಾಮಗಾರಿಗಳು ಈಗಾಗಲೇ ಮುಗಿದಿದ್ದು ಮುಂದಿನ ವರ್ಷ 6 ಎಲಿವೇಟೆಡ್ ಮೆಟ್ರೋ ನಿಲ್ದಾಣಗಳನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಬಿಎಮ್ಆರ್ಸಿಎಲ್ (BMRCL) ಉದ್ದೇಶಿಸಿದೆ.
ಯಾವ ಮಾರ್ಗದಲ್ಲಿ ಸಂಚರಿಸಲಿದೆ?
ಪಿಂಕ್ ಲೈನ್ ಮೆಟ್ರೋ(Pink Line Metro) ಮಾರ್ಗವು ಕಾಳೇನ ಅಗ್ರಹಾರ, ಕೊಟ್ಟಗೆರೆ, ಜಿಗಣಿ, ಆನೇಕಲ್, ಹತ್ತಿಬೆಲೆ, ಸರ್ಜಾಪುರ, ವರ್ತೂರು ಮತ್ತು ಕಾಡುಗೋಡಿ ಟ್ರೀ ಪಾರ್ಕ್ ಈ ಪ್ರಮುಖ ಪ್ರದೇಶಗಳ ಮೂಲಕ ಹಾದು ಹೋಗಲಿದೆ. ಈ ಮಾರ್ಗವೂ ಐಟಿ ಮತ್ತು ಕೈಗಾರಿಕಾ ಪ್ರದೇಶಗಳ(Industrial Area) ಜೊತೆಗೆ ಹೊರವಲಯದ ನಗರಗಳಿಗೂ ಸಂಪರ್ಕ ಕಲ್ಪಿಸುವುದರಿಂದ ಲಕ್ಷಾಂತರ ಜನರ ಪ್ರಯಾಣವು ಸುಲಭವಾಗಲಿದೆ. ಈ ಮಹತ್ವದ ಯೋಜನೆಗಾಗಿ ಬಿಎಮ್ಆರ್ಸಿಎಲ್(BMRCL) ಈಗ ಕಾರ್ಯ ಸಾಧ್ಯತಾ ಅಧ್ಯಯನ ನಡೆಸಲು ಮುಂದಾಗಿದೆ.
ಮೆಟ್ರೋ ನಿಲ್ದಾಣಗಳ ಸಂಖ್ಯೆ ಮತ್ತು ಭವಿಷ್ಯದ ಯೋಜನೆ
ಸದ್ಯಕ್ಕೆ ಕಾಳೇನಾಗ್ರಹರದಿಂದ ನಾಗವಾರದವರೆಗಿನ 21.3 ಕಿಲೋಮೀಟರ್ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದೆ. ಇದರಲ್ಲಿ ಏಳು ಪಾಯಿಂಟ್ 5 ಕಿ.ಮೀ ಎಲಿವೇಟೆಡ್ ಮತ್ತು 13.8 ಕಿ.ಮೀ ಭೂಗತ (Under Ground) ಮಾರ್ಗ ಇರಲಿದೆ. ಈ ವಿಸ್ತೃತ ಪಿಂಕ್ ಲೈನ್(Pink Line Metro) ಮಾರ್ಗದಲ್ಲಿ ಸುಮಾರು 50 ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸಲು ಬಿಎಮ್ಆರ್ಸಿಎಲ್(BMRCL) ಯೋಚಿಸಿದೆ. ಕಾರ್ಯ ಸದತ ವರದಿಯ ನಂತರ ವಿಸೃತ ಯೋಜನಾ ವರದಿ ಡಿಪಿಸಿ ಯೋಜನೆಗೆ ವೇಗ ನೀಡಲಾಗುವುದು.
ಇದನ್ನೂ ಓದಿ: Letters to Daughter: ಮಗಳೇ, ಜಗತ್ತಿನ ಬಹುತೇಕ ಸುಂದರ ಸಂಗತಿಗಳು ಅತ್ಯಂತ ಸುಲಭವಾಗಿಯೇ ಕೈಗೆ ಎಟಕುತ್ತವೆ
ಇತ ಅತ್ತಿಬೆಲೆ ಬಳಿ 90,000 ಆಸನಗಳ ಸಾಮರ್ಥ್ಯ ಕ್ರೀಡಾಂಗಣ ನಿರ್ಮಿಸಲು ಕೆಎಚ್ ಬಿ ಚಿಂತನೆ ನಡೆಸಿದ ವಿಸ್ತರಣೆಯಿಂದ ಕ್ರೀಡಾಂಗಣಕ್ಕೆ ಬರುವ ಪ್ರೇಕ್ಷಕರಿಗೆ ಪ್ರಯಾಣ ಸುಲಭವಾಗಿದ್ದು ಈ ಯೋಜನೆಯಿಂದ ಸ್ಥಳೀಯರು ಸಂತಸ ಗೊಂಡಿದ್ದಾರೆ. ಈ ಪಿಂಕ್ ಲೈನ್(pink Line Metro) ಮೆಟ್ರೋ ಬೆಂಗಳೂರಿನ ಸಂಚಾರ ಸಮಸ್ಯೆಗೆ ಬಹುದೊಡ್ಡ ಪರಿಹಾರ ತರಲಿದೆ ಎಂದು ನಿರೀಕ್ಷಿಸಲಾಗಿದೆ
