Indian Cricket: ಭಾರತೀಯ ಕ್ರಿಕೆಟ್ ತಂಡದಲ್ಲಿ(indian Cricket Team)ನಾಯಕತ್ವ ಬದಲಾವಣೆಯ ಕುರಿತು ಬಿರುಸಿನ ಚರ್ಚೆಗಳು ನಡೆಯುತ್ತಿವೆ ಭಾರತದ ಭವಿಷ್ಯದ ನಾಯಕ ಯಾರು ಎಂಬ ಪ್ರಶ್ನೆಗೆ ಈಗ ಶ್ರೇಯಸ್ ಅಯ್ಯರ್(Shreyas Iyer) ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ ಪ್ರಸ್ತುತ ರೋಹಿತ್ ಶರ್ಮ( Rohith Sharma) ಅವರು ಏಕದಿನ ಕ್ರಿಕೆಟ್ ನಾಯಕರಾಗಿದ್ದು ಅವರ ಉತ್ತರಾಧಿಕಾರಿಯಾಗಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ.
ರೋಹಿತ್ ನಂತರದ ಭವಿಷ್ಯದ ನಾಯಕತ್ವ ಯೋಜನೆ
ಮಾಧ್ಯಮಗಳ ವರದಿಯ ಪ್ರಕಾರ ರೋಹಿತ್ ಶರ್ಮ(Rohit Sharma) ಅವರು ತಮ್ಮ ಕ್ರಿಕೆಟ್(cricket) ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಂಡ ನಂತರ ಬಿಸಿಸಿಐ(BCCI) ಅವರನ್ನು ಏಕದಿನ ತಂಡದ ನಾಯಕನನ್ನಾಗಿ ಮಾಡಲು ನಿರ್ಧರಿಸಿದೆ. ರೋಹಿತ್ ಶರ್ಮ(Rohit Sharma) ಅವರು ಟಿ20(T20) ಮೇ ತಿಂಗಳಿನಲ್ಲಿ ಟೆಸ್ಟ್ ಕ್ರಿಕೆಟ್ಗೆ(Test cricket) ವಿದಾಯ ಹೇಳದಲಿದ್ದಾರೆ. ಮುಂದಿನ ಏಕದಿನ ವಿಶ್ವಕಪ್ 2027ರಲ್ಲಿ ನಡೆಯಲಿರುವುದರಿಂದ ರೋಹಿತ್ ಶರ್ಮ(Rohith Sharma)ಅಲ್ಲಿಯವರೆಗೆ ನಾಯಕನಾಗಿ ಮುಂದುವರೆಯುವುದು ಅಸಂಭವ, ಈ ಹಿನ್ನೆಲೆಯಲ್ಲಿ ಬಿಸಿಸಿಐ ಭವಿಷ್ಯದ ಬಗ್ಗೆ ಚಿಂತನೆ ನಡೆಸಿದೆ.
ಇದನ್ನೂ ಓದಿ: Pink Line Metro: ಬೆಂಗಳೂರಿನ ಟ್ರಾಫಿಕ್ ಗೆ ಶಾಶ್ವತ ಪರಿಹಾರ, 68 ಕಿಲೋಮೀಟರ್ ಮಾರ್ಗ ನಿರ್ಮಾಣ
ಶುಬ್ಮನ್ ಗಿಲ್ ಮತ್ತು ಇತರ ಆಟಗಾರರ ಭವಿಷ್ಯ
ಮೂಲಗಳ ಪ್ರಕಾರ ಬಿಸಿಸಿಐ(BCCI) ಪ್ರತಿ ಫಾರ್ಮೆಟ್ ಗೆ ಪ್ರತ್ಯೇಕ ನಾಯಕರನ್ನು ನೇಮಿಸಲು ಯೋಜಿಸುತ್ತಿದೆ. ಶುಬ್ಮನ್ ಗಿಲ್(Shubman Gil)ಅವರಿಗೆ ಟೆಸ್ಟ್ ನಾಯಕತ್ವ ಮತ್ತು ಟಿ20 ಉಪ ನಾಯಕತ್ವ ನೀಡಲಾಗಿದೆ. ಅವರನ್ನು ಭವಿಷ್ಯದ ಟಿ20(T20) ನಾಯಕ ಎಂದು ಪರಿಗಣಿಸಲಾಗಿದೆ. ಒಬ್ಬ ಆಟಗಾರ ಮೂರು ಮಾದರಿಗಳಲ್ಲಿ ತಂಡವನ್ನು ಮುನ್ನಡೆಸುವುದು ಅಸಾಧ್ಯ ಎಂಬ ತೀರ್ಮಾನಕ್ಕೆ ಬಿಸಿಸಿಐ ಬಂದಿದೆ ಎನ್ನಲಾಗಿದೆ.
ಅಯ್ಯರ್ ಗೆ ನಾಯಕತ್ವದ ಅನುಭವ
ಶ್ರೇಯಸ್ ಅಯ್ಯರ್(Shreyas Iyer) ಅವರಿಗೆ ಭಾರತ ತಂಡದ ನಾಯಕತ್ವ ಅನುಭವವಿಲ್ಲದಿದ್ದರೂ ದೇಶಿಯ ಮತ್ತು ಐಪಿಎಲ್(IPL) ಕ್ರಿಕೆಟ್ನಲ್ಲಿ ಅವರು ಯಶಸ್ವಿ ನಾಯಕನಾಗಿ ಹೊರಹೊಮ್ಮಿದ್ದಾರೆ.
ದೇಶಿಯಾ ಕ್ರಿಕೆಟ್: 2024 25ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರು ಮುಂಬೈ(Mumbai Indians) ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಐದು ಪಂದ್ಯಗಳಿಂದ 325 ರನ್ ಗಳಿಸಿದ್ದರು. ಅದೇ ವರ್ಷ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ಮುಂಬೈ ತಂಡವನ್ನು ಪ್ರಶಸ್ತಿಗೆ ಮುನ್ನಡೆಸಿದ್ದರು.
ಐಪಿಎಲ್: 2024ರಲ್ಲಿ ಕೆಕೆಆರ್(KKR) ತಂಡವನ್ನು ಮೂರನೇ ಐಪಿಎಲ್(IPL) ಪ್ರಶಸ್ತಿಗೆ ಮುನ್ನಡೆಸಿದ್ದರು. ನಂತರ ಫ್ರಾಂಚೈಸಿ ಅವರನ್ನು ಬಿಡುಗಡೆ ಮಾಡಿತು. ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್(Punjab kings)ತಂಡದ ನಾಯಕ ರಾಗಿ 14 ಪಂದ್ಯಗಳಲ್ಲಿ ಒಂಬತ್ತು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು.
ಇದನ್ನೂ ಓದಿ: Dharmasthala Case: ಸ್ನೇಹಮಯಿ ಕೃಷ್ಣ ಎಂಟ್ರಿ, ನಾಲ್ವರ ವಿರುದ್ಧ ದೂರು ದಾಖಲು
ಮುಂದಿನ ಸರಣಿ ಮತ್ತು ಭವಿಷ್ಯದ ನಿರ್ಧಾರ
ರೋಹಿತ್ ಶರ್ಮಾ(Rohit Sharma)ಮತ್ತು ವಿರಾಟ್ ಕೊಹ್ಲಿ( virat kohli )ಅವರಿಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಕೊನೆಯದಾಗಿರಬಹುದು ಎಂಬ ವರದಿಗಳಿದ್ದವು. ಆದರೆ ಏಷ್ಯಾಕಪ್(Asia Cup) ನಂತರ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಸಭೆ ನಡೆಸಲಾಗುವುದು ಎಂದು ಮೂಲಗಳು ತಿಳಿಸುವೆ ರೋಹಿತ್(Rohit Sharma) ಅವರ ನಿರ್ಧಾರದ ಮೇಲೆ ಶ್ರೇಯಸ್ ಅಯ್ಯರ್(Shreyas Iyer)ಅವರ ನಾಯಕತ್ವದ ಭವಿಷ್ಯ ಅವಲಂಬಿತವಾಗಿದೆ.
ಒಟ್ಟಿನಲ್ಲಿ ಶ್ರೇಯಸ್(Shreyas Iyer)ಅವರ ಅದ್ಭುತ ಫಾರ್ಮ್ ಮತ್ತು ನಾಯಕತ್ವದ ಅನುಭವವನ್ನು ಗಮನಿಸಿದರೆ ಅವರು ಭಾರತದ ಭವಿಷ್ಯದ ನಾಯಕನಾಗಿ ಹೊರ ಹೊಮ್ಮುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಅಂತಿಮ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಳ್ಳಬೇಕಿದೆ.
