ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ(Traffic Rules Violations) ಮಾಡಿ ದಂಡಪಾವತಿಸದ ವಾಹನ ಸವಾರರಿಗೆ ಮತ್ತೆ ಸಿಹಿಸುದ್ದಿ ಬಂದಿದೆ. ಕಳೆದ ವರ್ಷದಂತೆ ಈ ವರ್ಷವೂ ಸಂಚಾರ ಪೊಲೀಸರು ಶೇ.50ರಷ್ಟು ರಿಯಾಯಿತಿ(Traffic Fine Discount) ಘೋಷಿಸಿದ್ದಾರೆ. ಈ ವಿಶೇಷ ರಿಯಾಯಿತಿ ಅವಕಾಶವೂ ಆಗಸ್ಟ್ 23 ರಿಂದ ಆರಂಭಗೊಂಡು ಸೆಪ್ಟೆಂಬರ್ 12ರ ವರೆಗೆ ಲಭ್ಯವಿರಲಿದೆ. ಇದು 2023 ರ ಫೆಬ್ರವರಿ 11ರವರೆಗೆ ದಾಖಲಾಗಿರುವ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತದೆ.
ಇದನ್ನೂ ಓದಿ: Shreyas Iyer ಗೆ ಜಾಕ್ ಪಾಟ್: Asia Cup ನಿಂದ ಹೊರಗಿದ್ದರೂ ನಾಯಕತ್ವದ ರೇಸ್ ನಲ್ಲಿ ಮುಂಚೂಣಿ
ಕಳೆದ ಬಾರಿ ಈ ಯೋಜನೆಯಿಂದ ಕೋಟ್ಯಂತರ ರೂಪಾಯಿ ದಂಡ ಸಂಗ್ರಹವಾಗಿದ್ದು, ಈ ಬಾರಿಯೂ ಹೆಚ್ಚಿನ ಸಂಖ್ಯೆಯ ವಾಹನ ಸವಾಲು ಈ ರಿಯಾಯಿತಿ ಸದುಪಯೋಗಪಡಿಸಿಕೊಳ್ಳುವ ನಿರೀಕ್ಷೆ ಇದೆ. ಬೆಂಗಳೂರು ಸಂಚಾರ ಪೊಲೀಸರು(Bengaluru Traffic Police) ದಂಡಪಾವತಿ ಮಾಡಬಹುದಾದ ಸ್ಥಳ ಮತ್ತು ಆನ್ಲೈನ್ ಮಾರ್ಗಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ದಂಡ ಬಾಕಿಯನ್ನು ಪರಿಶೀಲಿಸುವುದು ಮತ್ತು ಪಾವತಿಸಲು ಹೀಗೆ ಮಾಡಿ
ನಿಮ್ಮ ವಾಹನದ ಮೇಲೆ ದಂಡದ ಬಾಕಿ ಇದೆಯೇ ಎಂದು ಮೊದಲು ಪರಿಶೀಲಿಸಿಕೊಳ್ಳಿ. ಆನ್ಲೈನ್ ಮತ್ತು ಆಫ್ಲೈನ್ ಎರಡು ರೀತಿಯಲ್ಲೂ ದಂಡಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಆನ್ಲೈನ್ ಪಾವತಿ ವಿಧಾನ
ಮೊಬೈಲ್ ಅಪ್ಲಿಕೇಶನ್ಗಳು: ಕರ್ನಾಟಕ ಸ್ಟೇಟ್ ಪೊಲೀಸ್ ಕೆ ಎಸ್ ಪಿ ಆಪ್(KSPF) ಅಥವಾ ಬಿಟಿಪಿ ಅಸ್ತ್ರಂ (BTP Astram)App ಅನ್ನು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ.
ವಾಹನ ಸಂಖ್ಯೆಯ ನಮೂದಿಸಿ: ಆಪ್ ತೆರೆದ ನಂತರ ನಿಮ್ಮ ವಾಹನದ ನೊಂದಣಿ ಸಂಖ್ಯೆಯನ್ನು ನಮೂದಿಸಿ.
ಇದನ್ನೂ ಓದಿ: Pink Line Metro: ಬೆಂಗಳೂರಿನ ಟ್ರಾಫಿಕ್ ಗೆ ಶಾಶ್ವತ ಪರಿಹಾರ, 68 ಕಿಲೋಮೀಟರ್ ಮಾರ್ಗ ನಿರ್ಮಾಣ
ದಂಡದ ವಿವರಗಳು: ಅಲ್ಲಿ ನಿಮ್ಮ ವಾಹನದ ಮೇಲೆ ಇರುವ ಎಲ್ಲಾ ಬಾಕಿ ದಂಡಗಳ ವಿವರಗಳು ಕಾಣಿಸುತ್ತವೆ.
ಪಾವತಿಗೆ ಮುಂದುವರೆಯಿರಿ: ನೀವು ಪಾವತಿಸಲು ಬಯಸುವ ದಂಡದ ಮೊತ್ತವನ್ನು ಆಯ್ಕೆ ಮಾಡಿದರೆ ಅಲ್ಲಿ ಶೇ.50 ರಷ್ಟು ರಿಯಾಯಿತಿ ಅನ್ವಯವಾದ ಅಂತಿಮ ಮೊತ್ತ ಕಾಣಿಸುತ್ತದೆ.
ಪಾವತಿ: ನಂತರ ನಿಮ್ಮ ಆದ್ಯತೆಯ ಆನ್ಲೈನ್ ಪಾವತಿ ವಿಧಾನ (ಫೋನ್ ಪೇ, ಗೂಗಲ್ ಪೇ, ನೆಟ್ ಬ್ಯಾಂಕಿಂಗ್ ಇತ್ಯಾದಿ)ಬಳಸಿ ಪಾವತಿ ಮಾಡಿ
ದಂಡಪಾವತಿಗೆ ವೆಬ್ಸೈಟ್ಗಳು
Karnataka one ಅಥವಾ Bengaluru one ವೆಬ್ ಸೈಟ್ಗಳ ಮೂಲಕ ದಂಡಪಾವತಿಸಬಹುದು.
ಆಫ್ ಲೈನ್ ಪಾವತಿ ವಿಧಾನ
ಪೊಲೀಸ್ ಠಾಣೆಗೆ ಭೇಟಿ ನೀಡಿ: ನಿಮ್ಮ ಹತ್ತಿರದ ಯಾವುದೇ ಸಂಚಾರ ಪೊಲೀಸ್ ಠಾಣೆ ಅಥವಾ ಸಂಚಾರ ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಿ.
ವಾಹನ ಸಂಖ್ಯೆ ನೀಡಿ: ಅಲ್ಲಿರುವ ಸಿಬ್ಬಂದಿಗೆ ನಿಮ್ಮ ವಾಹನದ ನೋಂದಣಿ ಸಂಖ್ಯೆಯನ್ನು ತಿಳಿಸಿ
ರಿಯಾಯಿತಿ ದಂಡಪಾವತಿ: ಅವರು ರಿಯಾಯಿತಿಯ ನಂತರದ ಮೊತ್ತವನ್ನು ತಿಳಿಸುತ್ತಾರೆ ಅದನ್ನು ಪಾವತಿಸಿ ರಶೀದಿ ಪಡೆಯಬಹುದು.
ಈ ಸುವರ್ಣ ಅವಕಾಶವನ್ನು ಬಳಸಿ ನಿಮ್ಮ ಮೇಲಿರುವ ದಂಡದ ಬಾಕಿಯನ್ನು ಸುಲಭವಾಗಿ ಮತ್ತು ಕಡಿಮೆ ಹಣದಲ್ಲಿ ಮುಕ್ತಗೊಳಿಸಿಕೊಳ್ಳಬಹುದು ದಂಡಪಾವತಿಸಿ ಸಂಚಾರ ನಿಯಮಗಳನ್ನ ಪಾಲಿಸಿ.
