ನವದೆಹಲಿ: ದೇಶದ ಆರ್ಥಿಕತೆಗೆ ಮಹಿಳೆಯರು ನಿಜವಾದ ಬೆನ್ನೆಲುಬಾಗಿ ನಿಂತಿದ್ದಾರೆ. ಒಂದು ಕಾಲದಲ್ಲಿ ಕೇವಲ ಮನೆಯ ಕೆಲಸಗಳಿಗೆ ಸೀಮಿತವಾಗಿದ್ದ ಮಹಿಳೆಯರು ಇಂದು ವ್ಯಾಪಾರ ಉದ್ಯೋಗಗಳಲ್ಲಿ ಪುರುಷರಿಗೆ ಸರಿಸಮನಾಗಿ ಇನ್ನೂ ಹೆಚ್ಚಾಗಿ ದುಡಿಯುತ್ತಿದ್ದಾರೆ. ಉದ್ಯೋಗ ಸಚಿವಾಲಯವು ಬಿಡುಗಡೆ ಮಾಡಿದ ಹೊಸ ಅಂಕಿ ಅಂಶಗಳ ಪ್ರಕಾರ ಕಳೆದ ಆರು ವರ್ಷಗಳಲ್ಲಿ ದೇಶದಲ್ಲಿ ಮಹಿಳಾ ಕಾರ್ಮಿಕರ(Women employment) ಪಾಲ್ಗೊಳ್ಳುವಿಕೆ ದರ ಬಹುತೇಕ ದ್ವಿಗುಣಗೊಂಡಿದೆ. ಇದು ನಿಜಕ್ಕೂ ಹೆಮ್ಮೆಪಡುವ ಸಂಗತಿಯಾಗಿದೆ.
ಎಲ್ಲಿ?, ಎಷ್ಟು? ಹೆಚ್ಚಳ
2017-18ರ ಆರ್ಥಿಕ ವರ್ಷದಲ್ಲಿ ಕೇವಲ 22% ಇದ್ದ ಮಹಿಳಾ ಉದ್ಯೋಗದರವು 2023-24ರ ವೇಳೆಗೆ 40.3ರಷ್ಟು ಏರಿಕೆ ಕಂಡಿದೆ.
ಗ್ರಾಮೀಣ ಭಾಗದಲ್ಲಿ(Rural india) ದೊಡ್ಡ ಸಾಧನೆ: ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳಾ ಉದ್ಯೋಗ(Women employment) ದರವು 24% ರಿಂದ ಬಾರಿ ಪ್ರಮಾಣದಲ್ಲಿ ಏರಿಕೆಯಾಗಿ 44.9% ತಲುಪಿದೆ. ಇದಕ್ಕೆ ಪ್ರಮುಖ ಕಾರಣ ಗ್ರಾಮೀಣ ಮಹಿಳೆಯರು( Rural womens) ಕೃಷಿ ವಲಯದಿಂದ ಹೊರಬಂದು ಸಣ್ಣ ಉದ್ಯಮಗಳು ಮತ್ತು ಸೇವಾ ವಲಯದ ಕಡೆಗೆ ಮುಖ ಮಾಡಿರುವುದು.
ಇದನ್ನೂ ಓದಿ: ಯಾರಿವನು?: ನಿಂದಿಸಿದರೂ ನಗುವವನು, ಮುಟ್ಟಲೋದರೆ ಸಿಗದವನು
ನಗರ ಪ್ರದೇಶಗಳಲ್ಲಿ ಉತ್ತಮ ಪ್ರಗತಿ: ನಗರ ಪ್ರದೇಶಗಳಲ್ಲಿಯೂ ಈ ಬೆಳವಣಿಗೆ ಆಶಾದಾಯಕವಾಗಿದೆ 2017 18 ರಲ್ಲಿ 17.5 ರಷ್ಟಿದ್ದ ಪಾಲ್ಗೊಳ್ಳುವಿಕೆದರವು ಈಗ 29.5 ರಷ್ಟಕ್ಕೆ ಏರಿಕೆಯಾಗಿದೆ.
ಈ ಬೆಳವಣಿಗೆ ಪ್ರಮುಖ ಕಾರಣಗಳೇನು?
ಈ ಸಕಾರಾತ್ಮಕ ಬದಲಾವಣೆಗೆ ಹಲವು ಕಾರಣಗಳಿವೆ. ಕೇಂದ್ರ ಸರ್ಕಾರವು ಜಾರಿಗೆ ತಂದ ಹಲವು ಯೋಜನೆಗಳು ಮಹಿಳೆಯರ ಸಬಲೀಕರಣಕ್ಕೆ ನೆರವು ನೀಡಿವೆ.
ಇದನ್ನೂ ಓದಿ: ದಸರಾ ವಿವಾದ : ಭಾನು ಮುಷ್ತಾಕರ ಹಳೆಯ ವಿಡಿಯೋ ಹರಿಬಿಟ್ಟ ಶೋಭಾ ಕರಂದ್ಲಾಜೆ- “ನಂಬಿಕೆ ಇಲ್ಲದವರಿಗೆ ಪುಷ್ಪಾರ್ಚನೆ ಏಕೆ”
ಸರ್ಕಾರಿ ಯೋಜನೆಗಳು: ಮುದ್ರಾ ಯೋಜನೆ(Pradhan Mantri Mudra Yojana), ಸ್ಟಾಂಡ್- ಆಫ್ ಇಂಡಿಯಾದಂತಹ ಯೋಜನೆಗಳ(stand of india scheme) ಮೂಲಕ ಮಹಿಳೆಯರು ಸುಲಭವಾಗಿ ಹಣಕಾಸು ನೆರವು ಪಡೆದು ತಮ್ಮದೇ ಸಣ್ಣ ವ್ಯಾಪಾರಿಗಳನ್ನು ಆರಂಭಿಸಲು ಸಾಧ್ಯವಾಗಿದೆ.
ಸ್ವ ಸಹಾಯ ಗುಂಪುಗಳು: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಮೂಲಕ ಸ್ವಸಹಾಯ ಗುಂಪುಗಳಿಗೆ ನೀಡಿದ ಪ್ರೋತ್ಸಾಹವು ಗ್ರಾಮೀಣ ಭಾಗದ ಮಹಿಳೆಯರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.
ಸಾಮಾಜಿಕ ಬದಲಾವಣೆ: ಇದರೆ ಜೊತೆಗೆ ಶಿಕ್ಷಣದ ಮಟ್ಟ ಹೆಚ್ಚಳ, ಕುಟುಂಬಗಳ ಮನಸ್ಥಿತಿಯಲ್ಲಿ ಬಂದಿರುವ ಬದಲಾವಣೆಗಳು ಮತ್ತು ತಂತ್ರಜ್ಞಾನದ ಸುಲಭ ಲಭ್ಯತೆಯೂ ಮಹಿಳೆಯರು ಆರ್ಥಿಕ ಸ್ವಾತಂತ್ರ್ಯಕ್ಕೆ ಕಾರಣವಾಗಿದೆ.
ಮಹಿಳೆಯರ ಹೊಸ ಯುಗ
ಕಳೆದ ಏಳು ವರ್ಷಗಳಲ್ಲಿ 1.56 ಕೋಟಿ ಮಹಿಳೆಯರು ದೇಶದ ಉಪಚಾರಿಕ ಉದ್ಯೋಗ ವಲಯಕ್ಕೆ ಸೇರ್ಪಡೆಗೊಂಡಿದ್ದಾರೆ. ಅಲ್ಲದೆ ಸುಮಾರು 16.69 ಕೋಟಿಗೂ ಅಧಿಕ ಅಸಂಘಟಿತ ವಲಯದ ಮಹಿಳಾ ಕಾರ್ಮಿಕರು ಈ ಶ್ರಂ(e shram) ಪೋರ್ಟ್ಲ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. 2017-18ರಲ್ಲಿ 51.9ರಷ್ಟಿದ್ದ ಮಹಿಳಾ ಸ್ವಯಂ ಉದ್ಯೋಗದ( SELF Employment) ಪ್ರಮಾಣ 2023 24ರ ವೇಳೆಗೆ 67.4% ಹೆಚ್ಚಳವಾಗಿದೆ. ಇದು ನಿಜವಾಗಿಯೂ ಮಹಿಳೆಯರು ಆತ್ಮ ನಿರ್ಭಾರರಾಗುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಮಹಿಳೆಯರು ಗಳಿಸುವುದರಿಂದ ಕುಟುಂಬದ ಆದಾಯ ಹೆಚ್ಚಾಗಿದ್ದು ಬಡತನ ಕಡಿಮೆಯಾಗುತ್ತಿದೆ ಜೊತೆಗೆ ಕುಟುಂಬದ ನಿರ್ಧಾರಗಳಲ್ಲಿಯೂ ಮಹಿಳೆಯರ ಪಾತ್ರ ಹೆಚ್ಚಾಗಿದ್ದು ಮಕ್ಕಳ ಶಿಕ್ಷಣ(childrens education) ಮತ್ತು ಆರೋಗ್ಯದಂತಹ ವಿಷಯಗಳಲ್ಲಿ ಉತ್ತಮ ಫಲಿತಾಂಶಗಳು ಕಂಡುಬರುತ್ತವೆ ಒಟ್ಟಾರೆಯಾಗಿ ಮಹಿಳೆಯರ ಆರ್ಥಿಕ ಪ್ರಗತಿಯು ದೇಶದ ಒಟ್ಟು ಆಂತರಿಕ ಉತ್ಪನ್ನ ಜಿಡಿಪಿ ಬೆಳವಣಿಗೆ ಗಣನೀಯವಾಗಿ ಕೊಡುಗೆ ನೀಡುತ್ತಿದೆ.
