ವಾಷಿಂಗ್ಟನ್: ಭಾರತ(India) ಮತ್ತು ಅಮೆರಿಕ(America) ನಡುವಿನ ವ್ಯಾಪಾರ ಸಂಬಂಧದಲ್ಲಿ ಇದೀಗ ಬಿರುಗಾಳಿ ಎದ್ದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump Tariffs) ಭಾರತದ ಸರಕುಗಳ ಮೇಲೆ ಶೇಕಡ 50ರಷ್ಟು ಸುಂಕ(50 Persent Tariff) ವಿಧಿಸಲು ನಿರ್ಧರಿಸಿದ್ದು ಅಮೆರಿಕಾದ ಕಸ್ಟಮ್ ಮತ್ತು ಗಡಿರಕ್ಷಣೆ(CBP) ಈ ಕುರಿತು ಕರಡು ಸೂಚನೆ ಹೊರಡಿಸಿದೆ. ಹೊಸ ನಿಯಮ ನಾಳೆಯಿಂದ ಜಾರಿಗೆ ಬರಲಿದೆ. ಇದು ಅಮೆರಿಕಾದ “America First” ನೀತಿಯ ಮುಂದುವರಿದ ಭಾಗವಾಗಿದ್ದು, ಜಾಗತಿಕ ವ್ಯಾಪಾರದಲ್ಲಿ ರಕ್ಷಣಾ ನೀತಿಯನ್ನು ಬಲಪಡಿಸುತ್ತಿದೆ ಎಂದು CBP ತಿಳಿಸಿದೆ.
ಸುಂಕದ ಹೆಚ್ಚಳದ ಹಿಂದಿನ ಕಾರಣ
ಈ ವ್ಯಾಪಾರ ನಿರ್ಧಾರವು ಆರಂಭದಲ್ಲಿ ಶೇ. 25ರಷ್ಟು ದಂಡನಾತ್ಮಕ ಸುಂಕದೊಂದಿಗೆ ಪ್ರಾರಂಭವಾಗಿತ್ತು. ಇದು 90ಕ್ಕೂ ಹೆಚ್ಚು ದೇಶಗಳ ಮೇಲಿನ ವಿಶಾಲ ವ್ಯಾಪಾರ ಯುದ್ಧದ ಭಾಗವಾಗಿತ್ತು. ಆದರೆ ಕಳೆದ ತಿಂಗಳು ಡೊನಾಲ್ಡ್ ಟ್ರಂಪ್(Donald Trump Tariffs) ಭಾರತವು ರಷ್ಯಾದಿಂದ ಇಂಧನ ಖರೀದಿಸಿದ್ದಕ್ಕಾಗಿ ಹೆಚ್ಚುವರಿಗೆ 25% ರಷ್ಟು ಸುಂಕವನ್ನು ಸೇರಿಸಿದರು. ಇದರೊಂದಿಗೆ ಭಾರತೀಯ ಸರಕುಗಳ ಮೇಲೆ ಒಟ್ಟು ಸುಂಕ ಶೇ.50ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: Women employment in India: ದೇಶ ಕಟ್ಟುವಲ್ಲಿ ಮಹಿಳೆಯರ ಪಾತ್ರ ಮಹತ್ತರ: ಶೇ. 40.3ಕ್ಕೆ ಏರಿದ ಉದ್ಯೋಗ ಪಾಲ್ಗೊಳ್ಳುವಿಕೆ
ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಟ್ರಂಪ್(Donald Trump) ಭಾರತವು ಯಾವುದೇ ದೇಶಕ್ಕಿಂತ ಅತ್ಯಂತ ಕಠಿಣವಾದ ವ್ಯಾಪಾರ ಅಡೆತಡೆಗಳನ್ನು ಹೊಂದಿದೆ ಎಂದು ಆರೋಪಿಸಿದ್ದರು. ಅಲ್ಲದೆ ರಷ್ಯಾದೊಂದಿಗಿನ(Russia) ಭಾರತದ ಇಂದಿನ ಸಂಬಂಧಗಳ ಬಗ್ಗೆಯೂ ಬಹಿರಂಗವಾಗಿ ಟೀಕಿಸಿದ್ದರು. ಬಿಸಿ ಬಿಸಿ ಹೊರಡಿಸಿರುವ ಸೂಚನೆಯು ರಷ್ಯಾದಿಂದ ಯುನೈಟೆಡ್ ಸ್ಟೇಟ್ಸ್(United States) ಭದ್ರತೆಗೆ ಇರುವ ಬೆದರಿಕೆಗಳನ್ನು ನಿಭಾಯಿಸಲು ಹೊರಡಿಸಿದ ಕಾರ್ಯನಿರ್ವಾಹಕ ಆದೇಶದ ಅಡಿಯಲ್ಲಿ ಈ ಸುಂಕಗಳು ಜಾರಿಯಾಗಲಿವೆ ಎಂದು ಸ್ಪಷ್ಟಪಡಿಸಿದೆ.
ಭಾರತದ ಆರ್ಥಿಕತೆಯ ಮೇಲೆ ಇದರ ಪರಿಣಾಮ
ಶೇಕಡ 50ರಷ್ಟು ಸುಂಕದ ಏರಿಕೆಯು ಭಾರತದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕಾ(America) ಭಾರತ ಅತಿ ದೊಡ್ಡ ರಫ್ತು ಮಾರುಕಟ್ಟೆಯಾಗಿದ್ದು, ಬಟ್ಟೆ ಆಭರಣ ಕೃಷಿ ಉತ್ಪನ್ನಗಳು ಮತ್ತು ಐಟಿ ಸೇವೆಗಳಂತಹ ಪ್ರಮುಖ ವಲಯಗಳಿಗೆ ಈ ನಿರ್ಧಾರ ಬಾರಿ ನಷ್ಟ ಉಂಟು ಮಾಡಬಹುದು. ಇದರಿಂದ ರಫ್ತು ಕಡಿಮೆಯಾಗಿ ಭಾರತದ ಉದ್ಯಮಗಳ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಬೀಳಲಿದೆ.
ಇದನ್ನೂ ಓದಿ: ಯಾರಿವನು?: ನಿಂದಿಸಿದರೂ ನಗುವವನು, ಮುಟ್ಟಲೋದರೆ ಸಿಗದವನು
ಭಾರತದ ಮುಂದಿನ ನಡೆ
ಅಮೆರಿಕಾದ(United States) ಈ ನಿರ್ಧಾರಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದ ಪ್ರಧಾನಿ ನರೇಂದ್ರ ಮೋದಿ(Prime Minister Modi) ವಾಷಿಂಗ್ಟನ್(Washington) ಆರ್ಥಿಕ ಒತ್ತಡ ಎಷ್ಟೇ ಇದ್ದರೂ ತಮ್ಮ ಸರ್ಕಾರ ಎದುರಿಸಲು ಒಂದು ಮಾರ್ಗವನ್ನು ಕೊಂಡುಕೊಳ್ಳುತ್ತದೆ ಎಂದು ಹೇಳಿದ್ದರು. ಸದ್ಯಕ್ಕೆ ಭಾರತ ಸರ್ಕಾರವು ಈ ಪರಿಸ್ಥಿತಿಯನ್ನು ನಿಭಾಯಿಸಲು ಹಲವು ಮಾರ್ಗಗಳನ್ನು ಅನುಸರಿಸುವ ಸಾಧ್ಯತೆ ಇದೆ.
ರಾಜತಾಂತ್ರಿಕ ಮಾತುಕತೆ: ಅಮೆರಿಕ ಸರ್ಕಾರದೊಂದಿಗೆ ನೇರ ಮಾತುಕತೆ ನಡೆಸಿ ಸುಂಕಗಳನ್ನ ಹಿಂಪಡೆಯಲು ಮನವಿ ಮಾಡಬಹುದು.
ಪ್ರತೀಕಾರದ ಸುಂಕ: ಅಮೆರಿಕಾದ ಕೆಲವು ಉತ್ಪನ್ನಗಳ ಮೇಲೆ ಭಾರತವು ಕೂಡ ಸುಂಕಗಳನ್ನ ಹೆಚ್ಚಿಸುವ ಸಾಧ್ಯತೆ.
ಪರ್ಯಾಯ ಮಾರುಕಟ್ಟೆಗಳು: ಯುರೋಪ್(Europe) ಸೇರಿದಂತೆ ಏಷ್ಯಾದ ಇತರ ದೇಶಗಳೊಂದಿಗೆ(Asian Countries) ವ್ಯಾಪಾರ ಒಪ್ಪಂದಗಳನ್ನು ಬಲಪಡಿಸುವ ಮೂಲಕ ಪರ್ಯಾಯ ಮಾರುಕಟ್ಟೆಗಳನ್ನು ಕೊಂಡುಕೊಳ್ಳುವ ಸಾಧ್ಯತೆ ಇದೆ.
ಒಟ್ಟಾರೆಯಾಗಿ ಈ ವ್ಯಾಪಾರ ವಿವಾದವು ಭಾರತದ ಆರ್ಥಿಕತೆಗೆ(Indian Economy) ಒಂದು ದೊಡ್ಡ ಸವಾಲಾಗಿ ಪರಿಣಮಿಸಿದ ಪ್ರಸ್ತುತ ಈ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ ಭಾರತ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
