ಮಂಗಳೂರು: ರಾಜ್ಯದಲ್ಲಿ ದೊಡ್ಡ ವಿವಾದ ಸೃಷ್ಟಿಸಿದ್ದ ಧರ್ಮಸ್ಥಳದಲ್ಲಿ(Dharmastala Case) ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣ ಈಗ ಹೊಸ ದಿಕ್ಕಿನಲ್ಲಿ ಸಾಗುತ್ತಿದೆ. ಪ್ರಮುಖ ಆರೋಪಿಯಾಗಿದ್ದ ಚಿನ್ನಯ್ಯನನ್ನು ಬಂಧಿಸಿ, ಅಧಿಕಾರಿಗಳು ನಡೆಸಿದ ವಿಚಾರಣೆಯಲ್ಲಿ ಅತ ಹಲವಾರು ಆಘಾತಕಾರಿ ಮಾಹಿತಿಗಳನ್ನು ಹೊರ ಹಾಕಿದ್ದಾನೆ. ಈ ಹೇಳಿಕೆಗಳು ಮಹೇಶ್ ಶೆಟ್ಟಿ ತಿಮರೋಡಿ ಅವರ ಪಾತ್ರದ ಮೇಲೆ ಬೆಳಕು ಚೆಲ್ಲಿದ್ದು, ಪ್ರಕರಣದ ತನಿಖೆ ಮಹತ್ವದ ಹಂತ ತಲುಪಿದೆ.
ಇದನ್ನೂ ಓದಿ: Trump Tariffs India: ಭಾರತಕ್ಕೆ ಟ್ರಂಪ್ ಶಾಕ್: ಇಂದಿನಿಂದ ಸರಕುಗಳ ಮೇಲೆ ಶೇ.50 ರಷ್ಟು ಸುಂಕಜಾರಿ
ಚಿನ್ನಯ್ಯನ(Chinnayya) ಹೇಳಿಕೆಯ ಪ್ರಕಾರ, ಮಹೇಶ್ ತಿಮರೋಡಿ(Timarodi) ಮತ್ತು ಅವರ ತಂಡ ಚಿನ್ನಯ್ಯನನ್ನು ಪುಣೆಯ ಓರ್ವ ವಕೀಲರನ್ನು ಮತ್ತು ರಾಜ್ಯದ ಒಬ್ಬ ಪ್ರಖ್ಯಾತ ಸ್ವಾಮೀಜಿಯನ್ನು ಭೇಟಿ ಮಾಡಲು ಕರೆದುಕೊಂಡು ಹೋಗಿದ್ದಾರೆ. ಈ ಎಲ್ಲಾ ಭೇಟಿಗಳ ವಿಡಿಯೋ ರೆಕಾರ್ಡ್ ಮಹೇಶ್ ತಿಮರೋಡಿ(Mahesh Shetty Timarodi) ಅವರ ಮನೆಯಲ್ಲಿದೆ ಎಂದು ಚಿನ್ನಯ್ಯ(Chinnayya) ಬಾಯಿಬಿಟ್ಟಿದ್ದಾನೆ. ಸುಮಾರು ಎರಡು ತಿಂಗಳ ಕಾಲ ಬೆಳ್ತಂಗಡಿ ತಾಲೂಕಿನ ಉದುರಿಯಲ್ಲಿರುವ ತಿಮ್ಮರೋಡಿ ಮನೆಯಲ್ಲೇ ಚಿನ್ನಯ್ಯ ಆಶ್ರಯ ಪಡೆದಿದ್ದ ಎಂಬ ವಿಷಯವೂ ತನಿಖೆಯಿಂದ ಬಯಲಾಗಿದೆ. ಅಲ್ಲಿಂದಲೇ ಮಾಧ್ಯಮಗಳಿಗೆ ಸುಮಾರು 20 ರಿಂದ 25ಕ್ಕೂ ಹೆಚ್ಚು ಸಂದರ್ಶನಗಳನ್ನು ನೀಡಿದ್ದ.
ಇದನ್ನೂ ಓದಿ: Women employment in India: ದೇಶ ಕಟ್ಟುವಲ್ಲಿ ಮಹಿಳೆಯರ ಪಾತ್ರ ಮಹತ್ತರ: ಶೇ. 40.3ಕ್ಕೆ ಏರಿದ ಉದ್ಯೋಗ ಪಾಲ್ಗೊಳ್ಳುವಿಕೆ
ಚಿನ್ನಯ(Chinnayya) ನೀಡಿದ ಈ ಮಹತ್ವದ ಮಾಹಿತಿಯ ಬೆನ್ನಲ್ಲೇ SIT ಅಧಿಕಾರಿಗಳು ನ್ಯಾಯಾಲಯದಿಂದ ಸರ್ಚ್ ವಾರೆಂಟ್ (Search Warrent) ಪಡೆದು ತಿಮರೋಡಿ(Timarodi) ಮತ್ತು ಅವರ ಸಹೋದರರ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಚಿನ್ನಯ್ಯನ(Chinnayya) ಮೊಬೈಲ್ ಆತ ಬಳಸುತ್ತಿದ್ದ ಇತರ ವಸ್ತುಗಳು ಮತ್ತು ತಿಮರೋಡಿ ಮನೆಯ ಸಿಸಿಟಿವಿ ಹಾರ್ಡ್ ಡಿಸ್ಕ್ ಅನ್ನು ಎಸ್ ಐ ಟಿ(SIT) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇದೇ ವೇಳೆ ಉತ್ಕನದ ವಿಫಲವಾದ ನಂತರ ಚಿನ್ನಯ್ಯ(Chinnayya) ಮತ್ತು ಹೋರಾಟಗಾರರ ಗುಂಪಿನ ನಡುವೆ ವಾಗ್ವಾದ ನಡೆದಿತ್ತು ಎಂಬುದನ್ನು ಚಿನ್ನಯ್ಯ ತಿಳಿಸಿದ್ದಾನೆ. ಗುರುತಿಸಿದ್ದ ಸ್ಥಳದಲ್ಲಿ ಯಾವುದೇ ಶವ ಸಿಗದಿದ್ದಾಗ ಮಾತಿನ ಚಕಮಕಿ ನಡೆದಿತ್ತು ಎಂದು ಚಿನ್ನಯ್ಯ ತಿಳಿಸಿದ್ದಾನೆ. ಈ ಎಲ್ಲಾ ಹೊಸ ಅಂಶಗಳು ಪ್ರಕರಣಕ್ಕೆ ಮತ್ತೊಂದು ಆಯಾಮ ನೀಡಿವೆ.
