ಮಾಸ್ಕೋ : ಅಮೆರಿಕಾ (America) ಸೇರಿದಂತೆ ಹಲವು ದೇಶಗಳು ವಲಸೆ ನಿಯಮಗಳನ್ನ ಇನ್ನಷ್ಟು ಕಠಿಣ ಗೊಳಿಸುತ್ತಿರುವ ಈ ಸಮಯದಲ್ಲಿ ರಷ್ಯಾ(Russia) ಮಾತ್ರ ಭಾರತೀಯರಿಗೆ ಶುಭ ಸುದ್ದಿಯೊಂದನ್ನು ನೀಡಿದೆ. ರಷ್ಯಾಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳು ಮತ್ತು ನುರಿತ ಕಾರ್ಮಿಕರಿಗಾಗಿ ವೀಸಾ(Visa) ನಿಯಮಗಳನ್ನು ಸರಳೀಕರಿಸಲು ರಷ್ಯಾ ಮುಂದಾಗಿದೆ.
ಹೆಚ್ಚಿದ ಬೇಡಿಕೆಯೇ ಇದಕ್ಕೆ ಕಾರಣ
ರಷ್ಯಾದ (Russia) ಹಲವು ಕ್ಷೇತ್ರಗಳಲ್ಲಿ ಭಾರತೀಯರಿಗೆ(Indians) ಬೇಡಿಕೆ ಹೆಚ್ಚಾಗಿದ್ದು ಸಾವಿರಾರು ಭಾರತೀಯರು ಉದ್ಯೋಗಕ್ಕಾಗಿ ರಷ್ಯಾ(Russia) ಕಡೆಗೆ ಮುಖ ಮಾಡುತ್ತಿದ್ದಾರೆ ಈ ಕುರಿತು ರಷ್ಯಾದಲ್ಲಿರುವ ಭಾರತದ ರಾಯಭಾರಿ ವಿನಯ್ ಕುಮಾರ್(Vinay Kumar) ಅವರು ಮಾತನಾಡಿ ರಷ್ಯಾದ ಜವಳಿ, ಯಂತ್ರೋಪಕರಣ, ನಿರ್ಮಾಣ ಮತ್ತು ಎಲೆಕ್ಟ್ರಾನಿಕ್ಸ್ ವಲಯಗಳಲ್ಲಿ ಭಾರತೀಯ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Dharmastala Case: ತಿಮರೋಡಿ ಜೊತೆಗಿನ ನಂಟಿನ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಚಿನ್ನಯ್ಯ
ಕಾರ್ಮಿಕರ ಕೊರತೆ ನೀಗಿಸಲು ಈ ವರ್ಷದ ಅಂತ್ಯದ ವೇಳೆಗೆ ಸುಮಾರು 10 ಲಕ್ಷ ನುರಿತ ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮಾಸ್ಕೋ ಆಸಕ್ತಿ ಹೊಂದಿದೆ ಎಂಬ ವರದಿಗಳು ಸಹ ಬಂದಿವೆ.
ಭಾರತೀಯ ರಾಯಭಾರಿ ಕಚೇರಿ ವಿಸ್ತರಣೆ
ರಷ್ಯಾ ಸರ್ಕಾರವು ವೀಸಾ(Visa) ಪ್ರಕ್ರಿಯೆ ಮತ್ತು ಪಾಸ್ಪೋರ್ಟ್(Pasport) ನಿಯಮಗಳನ್ನು ಸರಳೀಕರಿಸುತ್ತಿದೆ. ಈ ಮಧ್ಯೆ ರಷ್ಯಾದಲ್ಲಿ ಹೆಚ್ಚುತ್ತಿರುವ ಭಾರತೀಯರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರಾಯಭಾರಿ ಕಚೇರಿಯು(Indian Embassy) ತನ್ನ ಕೌನ್ಸುಲರ್ ಸೇವೆಗಳನ್ನು ವಿಸ್ತರಿಸಲು ಕ್ರಮ ಕೈಗೊಂಡಿದೆ. ಇದು ಪಾಸ್ಪೋರ್ಟ್ ನವೀಕರಣ(Pasport Update) ಮತ್ತು ಅನುಮೋದನೆಯಂತಹ ಸೇವೆಗಳನ್ನು ಇನ್ನಷ್ಟು ವೇಗಗೊಳಿಸಲಿದೆ.
ಪ್ರಸ್ತುತ ರಷ್ಯಾದಲ್ಲಿ(Russia) ಸುಮಾರು 14 ಸಾವಿರ ಭಾರತೀಯರು(Indian’s) ನಡೆಸಿದ್ದಾರೆ ಇದರಲ್ಲಿ ಸುಮಾರು 4500 ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ಪಡೆಯುತ್ತಿದ್ದಾರೆ ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗೆ ರಷ್ಯಾದ ಬಾಗಿಲು ತೆರೆದಿರುವುದು ಭಾರತ ಮತ್ತು ರಷ್ಯಾ (India and Russia Relations) ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ.
ಇದನ್ನೂ ಓದಿ: Trump Tariffs India: ಭಾರತಕ್ಕೆ ಟ್ರಂಪ್ ಶಾಕ್: ಇಂದಿನಿಂದ ಸರಕುಗಳ ಮೇಲೆ ಶೇ.50 ರಷ್ಟು ಸುಂಕಜಾರಿ
ವೀಸಾ ವಂಚನೆಯ ಬಗ್ಗೆ ರಾಯಭಾರಿ ಕಚೇರಿಯಿಂದ ಎಚ್ಚರಿಕೆ
ಭಾರತೀಯ ರಾಯಭಾರ ಕಚೇರಿಯು(indian Embassy Office) ಉದ್ಯೋಕಾಂಕ್ಷಿಗಳು ಮೋಸದ ಏಜೆಂಟ್ ಗಳಿಗೆ ಬಲಿಯಾಗದಂತೆ ಎಚ್ಚರಿಕೆ ರವಾನಿಸಿದೆ. ಭಾರತದ ಕೆಲವು ಏಜೆಂಟರು ರಷ್ಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅಕ್ರಮ ಪ್ರವಾಸಿ ಅಥವಾ ವ್ಯಾಪಾರ ವೀಸಾಗಳನ್ನು ನೀಡುತ್ತಿರುವ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ರಾಯಭಾರ ಕಚೇರಿ ತಿಳಿಸಿದೆ.
