ಬೆಂಗಳೂರು: ವಿಧಾನಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(RSS) ಗೀತೆಯನ್ನ ಉಲ್ಲೇಖಿಸಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DCM D K Shivkumar)ಮಾತನಾಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು ಸ್ವತಃ ಕಾಂಗ್ರೆಸ್ ಪಕ್ಷದವರೇ ಅಕ್ಷಯ್ ಪ ವ್ಯಕ್ತಪಡಿಸಿದ ನಂತರ ಇದೀಗ ಡಿಕೆ ಶಿವಕುಮಾರ್(D K Shivkumar)ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಒಂದು ವೇಳೆ ನನ್ನ ಮಾತುಗಳಿಂದ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ನನ್ನ ಪಕ್ಷನಿಷ್ಠೆ ಪ್ರಶ್ನಿಸುವವರು ಮೂರ್ಖರು
ನಾನು ಹುಟ್ಟಿದ್ದೆ ಕಾಂಗ್ರೆಸ್ಸಿಗನಾಗಿ, ಸಾಯುವುದು ಕಾಂಗ್ರೆಸ್ಸಿಗನಾಗಿಯೇ. ನನ್ನ ಪಕ್ಷ ನಿಷ್ಠೆಯನ್ನು ಯಾರು ಪ್ರಶ್ನಿಸಲು ಸಾಧ್ಯವಿಲ್ಲ, ಒಂದು ವೇಳೆ ಪ್ರಶ್ನೆಸಿದರೆ ಅವರು ಮೂರ್ಖರು. ಎಂದು ಡಿಕೆ ಶಿವಕುಮಾರ್(DCM D K Shivkumar) ತಮ್ಮ ಎದುರಾಳಿ ಸ್ವಪಕ್ಷೀಯರಿಗೆ ಖಾರವಾಗಿ ಹೇಳಿದ್ದಾರೆ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್(R Ashok) ಅವರಿಗೆ ಉತ್ತರ ನೀಡುವಾಗ, ಆರ್ ಎಸ್ ಎಸ್(RSS) ಸಿದ್ದಾಂತದ ಬಗ್ಗೆ ತಮಗೆ ಅರಿವಿದೆ ಎಂದು ಹೇಳಿದ್ದು ಅಷ್ಟೇ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು. ರಾಜಕಾರಣಕ್ಕೆ ಬರುವ ಮೊದಲು ತಾನು ಎಲ್ಲಾ ಪಕ್ಷಗಳಾದ ಕಮ್ಯುನಿಸಂ, ಬಿಜೆಪಿ, ಆರ್ ಎಸ್ ಎಸ್, ದಳದ ಬಗ್ಗೆ ಅಧ್ಯಯನ ಮಾಡಿದ್ದೇನೆ. ಮುಸ್ಲಿಂ ಲೀಗ್ ಸಮಾವೇಶದಲ್ಲಿ ಭಾಗಿಯಾಗಿ ಅವರ ಶಿಸ್ತಿಗೆ ಬೆರಗಾಗಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: Russia Visa For indians: ವಿದೇಶಿ ಉದ್ಯೋಗದ ಕನಸು ಕಂಡ ಭಾರತೀಯರಿಗೆ ರಷ್ಯಾ ಗುಡ್ ನ್ಯೂಸ್ : ವೀಸಾ ನಿಯಮಗಳು ಇನ್ನಷ್ಟು ಸರಳ
ನಾನು ಧರ್ಮವನ್ನು ಯಾವುದೇ ಕಾರಣಕ್ಕೂ ಬಿಡಲ್ಲ
ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ ಎಂಬುದು ಎಷ್ಟು ಸತ್ಯವೋ, ನಾನು ನನ್ನ ಧರ್ಮ ಬಿಡುವುದಿಲ್ಲ ಎಂಬುದು ಅಷ್ಟೇ ಸತ್ಯ. ಇತರ ಧರ್ಮಗಳ ಬಗ್ಗೆಯೂ ನನಗೆ ನಂಬಿಕೆ ಇದೆ. ಎಲ್ಲಾ ಧರ್ಮಗಳಿಗಿಂತಲೂ ಮಾನವ ಧರ್ಮದ ಮೇಲೆ ನಾನು ಹೆಚ್ಚು ನಂಬಿಕೆ ಇಟ್ಟಿದ್ದೇನೆ ಎಂದು ಡಿಕೆ ಶಿವಕುಮಾರ್(DCM D K Shivkumar) ತಿಳಿಸಿದರು.
ಇದನ್ನೂ ಓದಿ: Dharmastala Case: ತಿಮರೋಡಿ ಜೊತೆಗಿನ ನಂಟಿನ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಚಿನ್ನಯ್ಯ
ಕ್ಷಮೆ ಕೇಳುತ್ತೇನೆ ಆದರೆ ನನಗೆ ಹೈಕಮಾಂಡ್ ಏನನ್ನು ಹೇಳಿಲ್ಲ
ತಮ್ಮ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ಧ ಎಂದು ಡಿಕೆ ಶಿವಕುಮಾರ್(DCM D K Shivkumar) ತಿಳಿಸಿದ್ದಾರೆ. ಬಿಕೆ ಹರಿಪ್ರಸಾದ್(B K Hariprasad) ಅವರಿಗೂ ಕ್ಷಮೆ ಕೇಳೋಣ ಎಂದು ಹೇಳುವ ಮೂಲಕ ತಮ್ಮ ಪಕ್ಷದೊಳಗಿನ ಭಿನ್ನಮತವನ್ನು ಶಮನಗೊಳಿಸಲು ಪ್ರಯತ್ನಿಸಿದ್ದಾರೆ. ಆದರೆ ತಾವು ಕ್ಷಮೆ ಕೇಳುತ್ತಿರುವುದು ಯಾರಿಗೂ ಹೆದರಿ ಅಲ್ಲ ಎಂದು ಸಹ ಸ್ಪಷ್ಟಪಡಿಸಿದ್ದಾರೆ.
ಯಾರು ನನ್ನನ್ನು ಪ್ರಶ್ನೆ ಮಾಡಿಲ್ಲ ಹೈಕಮಾಂಡ್(Congress High Command) ಕೂಡ ಕೇಳಿಲ್ಲ ಈ ವಿಚಾರ ಇಲ್ಲಿಗೆ ಮುಗಿಸೋಣ ಎಂದು ಹೇಳಿ ನನ್ನ ಮತ್ತು ಕಾಂಗ್ರೆಸ್ ಸಂಬಂಧ ಭಕ್ತ ಮತ್ತು ಭಗವಂತನ ಸಂಬಂಧದಂತೆ ಎಂದು ಡಿಸಿಎಂ ಡಿಕೆ ಶಿವಕುಮಾರ್(D K Shivkumar) ಬಣ್ಣಿಸಿದ್ದಾರೆ.
