ಬೆಂಗಳೂರು: ಸರ್ಕಾರ ಈ ಬಾರಿಯ ನಾಡಹಬ್ಬ ಮೈಸೂರು ದಸರಾ(Mysore Dasara) ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್(Bhanu Mushtaq) ಅವರನ್ನು ಆಹ್ವಾನಿಸಿದ್ದು ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ ಈ ಕುರಿತು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಬಾನು ಮುಷ್ತಾಕ್(Bhanu Mushtaq) ಅವರು ಕಾರ್ಯಕ್ರಮದಿಂದ ಹೊರಗುಳಿಯಬೇಕು ಎಂದು ಮನವಿ ಮಾಡಿದ್ದಾರೆ. ಶೋಭಾ ಕರಂದ್ಲಾಜೆ(Shoba Karndlaje) ಅವರ ಈ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓಡಿ: BCCI ಬಿಗ್ ಶಾಕ್: ₹358 ಕೋಟಿ ಒಪ್ಪಂದ ರದ್ದು ಮಾಡಿಕೊಂಡ Dreem11
ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದವರು ದಸರಾ ಉದ್ಘಾಟನೆ ಮಾಡಬಹುದೇ?
ಬೆಂಗಳೂರಿನಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ(Shobha Karndlaje) ಅವರು ಯಾರಿಗೆ ಹಿಂದೂ ಧರ್ಮದ ಮೇಲೆ ಮೂರ್ತಿ ಪೂಜೆಯ ಮೇಲೆ ನಂಬಿಕೆ ಇಲ್ಲವೋ ಅವರು ದಸರಾ ಉದ್ಘಾಟನೆಗೆ ಬಂದು ಏನು ಮಾಡುತ್ತಾರೆ? ಸರ್ಕಾರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತದೆ ಬಾನು ಮುಷ್ತಾಕ್(Bhanu Mushtaq) ಅವರು ಚಾಮುಂಡಿ(Chamundi) ಬೆಟ್ಟ ಹತ್ತಬಾರದು ಅವರು ನಮ್ಮ ಭುವನೇಶ್ವರಿ ದೇವಿಯನ್ನು ಒಪ್ಪೋದಿಲ್ಲ. ಹಾಗಾದರೆ ತಾಯಿ ಚಾಮುಂಡೇಶ್ವರಿ ದೇವಿಯನ್ನು ಹೇಗೆ ಒಪ್ಪುತ್ತಾರೆ. ದಸರಾ(Mysore Dasara) ಕೇವಲ ಸಾಂಸ್ಕೃತಿಕ ಹಬ್ಬವಲ್ಲ ಇದೊಂದು ಧಾರ್ಮಿಕ ಉತ್ಸವ ಎಂದು ಹೇಳಿದರು.
ಈ ಹಿಂದೆ ಬಾನು ಮುಷ್ತಾಕ್(Bhanu Mushtaq) ಅವರು ನೀಡಿದ ಹೇಳಿಕೆಯ ಹಳೆಯ ವಿಡಿಯೋ ಒಂದನ್ನ ಹಚ್ಚಿಕೊಂಡಿರುವ ಸಚಿವೆ ಶೋಭಾ ಕರಂದ್ಲಾಜೆ(Shobha Karndlaje), ನಾವು ನಾಸ್ತಿಕರನ್ನು ಗೌರವಿಸುತ್ತೇವೆ. ಆದರೆ ನಂಬಿಕೆಯೇ ಇಲ್ಲದಾಗ ದೇವಿಗೆ ಹೇಗೆ ಪುಷ್ಪಾರ್ಚನೆ ಮಾಡುತ್ತೀರಿ? ಅವರು ಚಾಮುಂಡೇಶ್ವರಿ(Chamundi) ಮೇಲೆ ನಂಬಿಕೆ ಹೊಂದಿದ್ದರೆ ಬರಲಿ ನಮ್ಮ ವಿರೋಧವಿಲ್ಲ. ಎಂದು ತಿಳಿಸಿದ್ದಾರೆ. ಟಿಪ್ಪು(Tippu) ಮತ್ತು ಹೈದರಾಲಿ(Hydar alli)ಅಂತಹವರು ದಸರಾ(Dasara) ಆಚರಣೆ ಮಾಡದಿರಬಹುದು, ಆದರೆ ಅವರು ಎಂದು ತಾಯಿ ಚಾಮುಂಡೇಶ್ವರಿ ದೇವಿಗೆ ನಮಸ್ಕರಿಸಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Gowri Ganesha Festival: KSRTC ಯಿಂದ 1500 ವಿಶೇಷ ಬಸ್ ವ್ಯವಸ್ಥೆ, ಇಲ್ಲಿದೆ ವಿಶೇಷ ಬಸ್ಗಳ ಮಾರ್ಗಸೂಚಿ
ತುಷ್ಟಿಕರಣ ರಾಜಕಾರಣಕ್ಕೆ ಮತ್ತೊಂದು ಉದಾಹರಣೆ
ರಾಜ್ಯ ಸರ್ಕಾರವು(Karnataka Government) ತುಷ್ಟಿಕರಣ ರಾಜಕಾರಣದಲ್ಲಿ ತೊಡಗಿದೆ. ಇದೇ ಇಂಡಿ ಒಕ್ಕೂಟದ ಕೇರಳ ಸರ್ಕಾರ (Kerala Government) ಶಬರಿಮಲೆ(Sabarimala) ಕಾರ್ಯಕ್ರಮ ಉದ್ಘಾಟನೆಗೆ ದೇವರನ್ನು ನಂಬದ, ಹಿಂದೂ ವಿರೋಧಿಯಾಗಿರುವ ತಮಿಳುನಾಡು ಸಿಎಂ ಸ್ಟಾಲಿನ್ಗೆ ಆಹ್ವಾನ ನೀಡಿದೆ. ಇತ್ತ ಕರ್ನಾಟಕ ಸರ್ಕಾರವು(Karnataka Government) ಚಾಮುಂಡಿಯನ್ನು ನಂಬದ ಬಾನು ಮುಷ್ತಾಕ್ (Bhanu Mushtaq) ಅವರನ್ನು ಆಹ್ವಾನಿಸಿದೆ. ಇದು ಯಾವ ರೀತಿಯಾದ ರಾಜಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಸರಾ ಉದ್ಘಾಟನೆಯಿಂದ ಬಾನು ಮುಷ್ತಾಕ್ ಅವರನ್ನು ತಕ್ಷಣ ಸರ್ಕಾರವೇ ಕೈಬಿಡಬೇಕು ಎಂದು ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ
