ನವದೆಹಲಿ : ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಇದೊಂದು ಅನಿರೀಕ್ಷಿತ ಸುದ್ದಿ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ಟೀಮ್ ಇಂಡಿಯಾದ(Team India) ಪ್ರಮುಖ ಸ್ಪಾನ್ಸರ್ ಆಗಿದ್ದ Dream11 ನಡುವಿನ ಒಪ್ಪಂದವು ದಿಢೀರ್ ಎಂದು ರದ್ದಾಗಿದೆ. ಭಾರತ ಸರ್ಕಾರದ(indian Government) ಹೊಸ ಆನ್ಲೈನ್ ಗೇಮಿಂಗ್(Online Gaming) ಕಾನೂನಿನ ಕಾರಣದಿಂದಾಗಿ ಈ ₹358 ಕೋಟಿ ಮೌಲ್ಯದ ಒಪ್ಪಂದವು ಅರ್ಧಕ್ಕೆ ಕೊನೆಗೊಂಡಿದೆ. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಸ್ನಾನ್ಸರ್ಶಿಪ್(SponcerShip)ಕಂಪನಿಗಳು ಭಾರಿ ದಂಡ ಪಾವತಿಸಬೇಕಾಗುತ್ತದೆ, ಆದರೆ ಇಲ್ಲಿ ಹಾಗಾಗಿಲ್ಲ.
ಹೊಸ ಕಾನೂನಿಂದ ದಂಡ ತಪ್ಪಿತು
ಒಪ್ಪಂದದ ಪ್ರಕಾರ, ಸಮಯಕ್ಕೂ ಮೊದಲೇ ಹಿಂದೆ ಸರಿದರೆ ಡ್ರಿಮ್1 ಬಿಸಿಸಿಐಗೆ(BCCI) ದೊಡ್ಡ ಮೊತ್ತದ ದಂಡ ಪಾವತಿಸಬೇಕಿತ್ತು. ಆದರೆ ಹೊಸ ಕಾನೂನು ಆನ್ಲೈನ್ ಗೇಮಿಂಗ್ ಕಂಪನಿಯ ವ್ಯವಹಾರಕ್ಕೆ ದೊಡ್ಡ ಹೊಡೆತ ನೀಡಿದ್ದರಿಂದ, ಡೀಮ್11(Dream11) ತನ್ನ ಪ್ರಮುಖ ವ್ಯಾಪಾರವನ್ನು ನಿಲ್ಲಿಸಬೇಕಾಯಿತು. ಒಪ್ಪಂದದ ನಿಯಮಗಳ ಪ್ರಕಾರ, ಒಂದು ವೇಳೆ ಸಂಸ್ಥೆಯ ಮೂಲ ವ್ಯವಹಾರವೇ ನಿಂತುಹೋದರೆ, ಯಾವುದೇ ದಂಡವಿಲ್ಲದೆ ಅಥವಾ ಹೆಚ್ಚುವರಿ ಪಾವತಿಯಿಲ್ಲದೆ ಒಪ್ಪಂದವನ್ನು ರದ್ದುಪಡಿಸಬಹುದು. ಈ ನಿಯಮವೇ ಡೀಮ್11 ಕಂಪನಿಯನ್ನು(Dream11 Company) ದೊಡ್ಡ ಆರ್ಥಿಕ ನಷ್ಟದಿಂದ ಉಳಿಸಿದೆ.
ಇದನ್ನೂ ಓದಿ: Gowri Ganesha Festival: KSRTC ಯಿಂದ 1500 ವಿಶೇಷ ಬಸ್ ವ್ಯವಸ್ಥೆ, ಇಲ್ಲಿದೆ ವಿಶೇಷ ಬಸ್ಗಳ ಮಾರ್ಗಸೂಚಿ
ಬಿಸಿಸಿಐ(BCCI) ಮೂಲಗಳ ಪ್ರಕಾರ, “ಡ್ರೀಮ್ 11 (Dream11) ಪ್ರತಿನಿಧಿಗಳು ಬಿಸಿಸಿಐ ಕಚೇರಿಗೆ ಬಂದು, ಆನ್ಲೈನ್ ಗೇಮಿಂಗ್ ಬಿಲ್ನ ಕಾರಣದಿಂದಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ತಿಳಿಸಿದರು. ಏಷ್ಯಾ ಕಪ್ನಲ್ಲಿ(Asia Cup) ಇನ್ನು ಮುಂದೆ ಅವರು ತಂಡದ ಪ್ರಾಯೋಜಕರಾಗಿ ಇರುವುದಿಲ್ಲ ಶೀಘ್ರದಲ್ಲೇ ಬಿಸಿಸಿಐ(BCCI) ಹೊಸ ಟೆಂಡರ್ ಅನ್ನು ಬಿಡುಗಡೆ ಮಾಡಲಿದೆ” ಎಂದು ಹೇಳಲಾಗಿದೆ.
ಚಿಕ್ಕ ಲೀಗ್ಗಳಿಗೆ ದೊಡ್ಡ ನಷ್ಟ
ಡ್ರೀಮ್ 11(Dream11) ಕೇವಲ ಭಾರತದ ಕ್ರಿಕೆಟ್ಗೆ ಮಾತ್ರವಲ್ಲದೆ, ವಿಶ್ವಾದ್ಯಂತ ಅನೇಕ ಚಿಕ್ಕ ಲೀಗ್ಗಳು ಮತ್ತು ಆಟಗಾರರಿಗೂ ಆರ್ಥಿಕ ಬೆಂಬಲ ನೀಡುತ್ತಿತ್ತು ಆದ್ದರಿಂದ, ಈ ಸ್ನಾನ್ಸರ್ಶಿಪ್ ರದ್ದತಿಯು ಆರ್ಥಿಕವಾಗಿ ದುರ್ಬಲವಾಗಿರುವ ಸಣ್ಣ ಲೀಗ್ ಗಳಿಗೆ ತೀವ್ರ ಹೊಡೆತ ನೀಡುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭವಿಷ್ಯದಲ್ಲಿ ಐಪಿಎಲ್ ಮತ್ತು ರಾಜ್ಯ ಮಟ್ಟದ ಕ್ರಿಕೆಟ್ ಲೀಗ್ಗಳಿಗೆ(State Cricket League) ಹೊಸ ಪ್ರಾಯೋಜಕರು ಸಿಗದೇ ಹೋದರೆ ದೊಡ್ಡ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: Letters to Daughter:ಮಗಳೇ, ಬದಲಾಗಬೇಕು ನೀವು, ಕಾಲದೊಂದಿಗೆ ಚಲಿಸುತ್ತಾ ಇರಬೇಕು
2023ರಲ್ಲಿ ಬೈಜೂಸ್(Byjus) ಬದಲು ಟೀಮ್ ಇಂಡಿಯಾದ ಪ್ರಮುಖ ಸ್ಕ್ಯಾನ್ಸರ್ ಆಗಿ ಡೀಮ್ ಆಯ್ಕೆಯಾಗಿತ್ತು ಐಪಿಎಲ್ ಟೈಟಲ್ ಸ್ನಾನ್ಸರ್ ಆಗಿಯೂ Dream11 ಕಾರ್ಯನಿರ್ವಹಿಸಿತ್ತು. ಇದೀಗ Dream11 ನಿರ್ಗಮನವು ಭಾರತದ ಕ್ರಿಕೆಟ್ ಪ್ರಾಯೋಜಕತ್ವದಲ್ಲಿ ಒಂದು ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.
