ಗೀತಾಸಾರ: ಭಗವದ್ಗೀತೆಯು(Bhagavad Gita Lessons) ಕೇವಲ ಅರ್ಜುನನಿಗೆ ಮಾತ್ರ ಹೇಳಿದ ಉಪದೇಶವಲ್ಲ, ಅದು ಇಡೀ ಮನುಕುಲಕ್ಕೆ ಶ್ರೀಕೃಷ್ಣ(Shree Krishna) ನೀಡಿದ ಜೀವನ ಪಾಠ. ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಬಂಧು-ಬಾಂಧವರನ್ನು ಎದುರು ನೋಡಿದ ಅರ್ಜುನ (Arjuna) ಕಂಗೆಟ್ಟು ನಿಂತಾಗ, ಕೃಷ್ಣ ಪರಮಾತ್ಮನು ಅವನಿಗೆ ಬೋಧಿಸಿದ ಮಾತುಗಳು ಇಂದಿಗೂ ನಮ್ಮ ಬದುಕಿಗೆ ಮಾರ್ಗದರ್ಶನ ನೀಡುತ್ತವೆ. ಸಂತೋಷವಾಗಿ ಮತ್ತು ನೆಮ್ಮದಿಯಿಂದ ಇರಲು ಕೃಷ್ಣ(Shree Krishna) ಹೇಳಿದ ಕೆಲವು ಸರಳ ಸೂತ್ರಗಳು ಇಲ್ಲಿವೆ.
ಇದನ್ನೂ ಓದಿ: ಗೀತಾಸಾರ: ಒತ್ತಡ ರಹಿತ ಬದುಕು, ಯಶಸ್ವಿ ವೃತ್ತಿ ಜೀವನಕ್ಕೆ ದಾರಿ
ಯಾರನ್ನೂ ದೂರಬೇಡಿ, ನಿಮ್ಮ ಸಂತೋಷಕ್ಕೆ ನೀವೇ ಕಾರಣ
ಯಾರನ್ನಾದರೂ ದೂರಿದಾಗ ಅಥವಾ ಇನ್ನೊಬ್ಬರ ಬಗ್ಗೆ ದೂರು ಹೇಳಿದಾಗ ಮನಸ್ಸಿಗೆ ಕ್ಷಣಿಕ ಸಮಾಧಾನ ಸಿಗಬಹುದು. ಆದರೆ ಇದರಿಂದ ನಮ್ಮ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಭಗವದ್ಗೀತೆಯಲ್ಲಿ ಕೃಷ್ಣ(Shree Krishna) ಹೇಳುವಂತೆ, ಸಂತೋಷವಾಗಿರುವವರು ಎಂದಿಗೂ ಇನ್ನೊಬ್ಬರನ್ನು ಟೀಕಿಸುವುದಿಲ್ಲ ಅಸೂಯೆ ಮತ್ತು ದ್ವೇಷ ನಮ್ಮ ಮನಸ್ಸನ್ನು ದುರ್ಬಲಗೊಳಿಸುತ್ತವೆ, ಅದು ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ ಸಂತೋಷ ಬೇಕಿದ್ದರೆ, ನಮ್ಮ ಬಗ್ಗೆ, ನಾವು ಒಳ್ಳೆಯ ಭಾವನೆ ಇಟ್ಟುಕೊಳ್ಳಬೇಕು ಮತ್ತು ಎಲ್ಲರನ್ನೂ ಸಮಾನವಾಗಿ ಕಾಣಬೇಕು ನಮ್ಮ ಗಮನವನ್ನು ನಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿ, ಅದನ್ನು ಉತ್ಸಾಹದಿಂದ ಮಾಡಬೇಕು.
ನಿಮ್ಮ ಕರ್ತವ್ಯವನ್ನು ಮಾಡಿ. ಫಲದ ಬಗ್ಗೆ ಚಿಂತಿಸಬೇಡಿ
ಭಗವದ್ಗೀತೆಯ(Bhagavad Gita Lessons) ಅತ್ಯಂತ ಪ್ರಮುಖ ಮತ್ತು ಜಗತ್ತಿಗೆಲ್ಲ ತಿಳಿದಿರುವ ಸಂದೇಶ ಇದು. “ಕರ್ಮವಾಧಿಕಾರಸ್ತೇ ಮಾ ಫಲೇಷು ಕದಾಚನ” ಅಂದರೆ, ನಮ್ಮ ಕರ್ತವ್ಯವನ್ನು ನಿರ್ವಹಿಸುವುದು ಮಾತ್ರ ನಮ್ಮ ಕೈಯಲ್ಲಿದೆ, ಅದರ ಫಲಿತಾಂಶಗಳಲ್ಲ. ನಾವು ಮಾಡುವ ಕೆಲಸದ ಬಗ್ಗೆ ಸಂಪೂರ್ಣ ಗಮನಹರಿಸಬೇಕು, ಆದರೆ ಅದರ ಫಲದ ಬಗ್ಗೆ ನಿರಂತರವಾಗಿ ಯೋಚಿಸುತ್ತಾ ಹತಾಶೆಗೊಳ್ಳಬಾರದು. ನಾವು ನಮ್ಮ ಕೆಲಸವನ್ನು ನಿಸ್ವಾರ್ಥವಾಗಿ ಮತ್ತು ಪೂರ್ಣ ಶ್ರದ್ಧೆಯಿಂದ ಮಾಡಿದರೆ, ಉತ್ತಮ ಫಲಿತಾಂಶಗಳು ತಾನಾಗಿಯೇ ಬರುತ್ತವೆ. ಫಲದ ಬಗ್ಗೆ ಆಸಕ್ತಿ ಇಟ್ಟುಕೊಂಡರೆ, ಅದು ನಮ್ಮ ಗಮನವನ್ನು ಕೆಲಸದಿಂದ ಬೇರೆಡೆಗೆ ಸೆಳೆಯುತ್ತದೆ.
ಕಳೆದ ಘಟನೆಗಳ ಬಗ್ಗೆ ಚಿಂತಿಸಬೇಡಿ, ವರ್ತಮಾನದಲ್ಲಿ ಬದುಕಿ
ಹಿಂದೆ ನಡೆದ ಘಟನೆಗಳ ಬಗ್ಗೆ ಚಿಂತಿಸುವುದು ಸಂಪೂರ್ಣ ನಿಷ್ಟ್ರಯೋಜಕ. ಅದು ನಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತದೆ ಮತ್ತು ಯಾವುದೇ ಪ್ರಯೋಜನವಿಲ್ಲ. ಶ್ರೀಕೃಷ್ಣನ(Shree Krishna) ಪ್ರಕಾರ, ಹಿಂದಿನ ಘಟನೆಗಳು, ಸಂದರ್ಭಗಳು ಅಥವಾ ಸಂಬಂಧಗಳ ಬಗ್ಗೆ, ಯೋಚಿಸದೆ ವರ್ತಮಾನದಲ್ಲಿ ಸಂಪೂರ್ಣವಾಗಿ ಬದುಕುವುದೇ ನಿಜವಾದ ಸಂತೋಷ. ನಮ್ಮ ಈಗಿನ ಕ್ಷಣವನ್ನು ಪೂರ್ಣವಾಗಿ ಅನುಭವಿಸಿದರೆ ಮಾತ್ರ ನೆಮ್ಮದಿಯ ಜೀವನ ಸಾಧ್ಯ.
ಇದನ್ನೂ ಓದಿ: ಈತನ ರಾಮಭಕ್ತಿಯ ಕಂಡು ಆಂಜನೇಯನೆ ಮಾರುಹೋಗಿದ್ದ!
ದೇವರು ನಿರಾಕಾರ, ರೂಪ ಮುಖ್ಯವಲ್ಲ
ಭಗವದ್ಗೀತೆಯಲ್ಲಿ(Bhagavad Gita Lessons) ಶ್ರೀಕೃಷ್ಣ(Shree Krishna) ತಾನು ನಿರಾಕಾರನಾಗಿದ್ದಾನೆ ಎಂದು ಹೇಳುತ್ತಾನೆ. ಅಂದರೆ, ದೇವರಿಗೆ ಯಾವುದೇ ನಿರ್ದಿಷ್ಟ ರೂಪವಿಲ್ಲ. ನಾವು ಯಾವ ರೂಪದಲ್ಲಿ ದೇವರನ್ನು ಪೂಜಿಸುತ್ತೇವೆಯೋ, ಅದೇ ರೂಪದಲ್ಲಿ ಅವರು ನಮ್ಮನ್ನು ಆಶೀರ್ವದಿಸುತ್ತಾರೆ. ಇಲ್ಲಿ ಮುಖ್ಯವಾಗಿ ಬೇಕಾಗಿರುವುದು ಆಕಾರವಲ್ಲ, ಬದಲಾಗಿ ನಮ್ಮ ನಂಬಿಕೆ ಮತ್ತು ಶ್ರದ್ಧೆ ನಿಮ್ಮಲ್ಲಿರುವ ನಂಬಿಕೆಯೇ ನಿಮ್ಮನ್ನು ಸರಿಯಾದ ಹಾದಿಯಲ್ಲಿ ನಡೆಸುತ್ತದೆ ಎಂದು ಕೃಷ್ಣ ಹೇಳಿದ್ದಾನೆ.
