Mahavatar Narsimha Movie Poster
ಬೆಂಗಳೂರು: ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಕನ್ನಡದ ಅನಿಮೇಷನ್ ಸಿನಿಮಾ ‘ಮಹಾವತಾರ ನರಸಿಂಹ'(Mahavatar Narsimha) ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಕರ್ನಾಟಕದಲ್ಲಿ ನಿರ್ಮಾಣವಾದ ಈ ಚಿತ್ರ ಜಾಗತಿಕವಾಗಿ 300 ಕೋಟಿ ರೂಪಾಯಿಗಳ ಭರ್ಜರಿ ಗಳಿಕೆಯತ್ತ ದಾಪುಗಾಲಿಟ್ಟಿದೆ. ಒಂದು ಅನಿಮೇಷನ್ ಚಿತ್ರ ಈ ಮಟ್ಟದ ಯಶಸ್ಸು ಗಳಿಸಿದ್ದು ಭಾರತೀಯ ಚಿತ್ರರಂಗದಲ್ಲಿಯೇ ವಿರಳ.
ಇದನ್ನೂ ಓದಿ: ‘ಕಚ್ಚಾ ಬಾದಾಮ್’ ಟು ‘ಡ್ಯಾನ್ಸ್ ಕ್ಲಬ್’: ರೀಲ್ಸ್ ಲೋಕದ ತಾರೆಯ ಬದುಕಿನ ಕಥೆ!
ಅಶ್ವಿನ್ ಕುಮಾರ್ ನಿರ್ದೇಶನದ ಮತ್ತು ಹೊಂಬಾಳೆ ಫಿಲಂಸ್ ಸಂಸ್ಥೆ ಪ್ರಸ್ತುತಪಡಿಸಿದ ಈ ‘ಮಹಾವತಾರ ನರಸಿಂಹ'(Mahavatar Narsimha) ಚಿತ್ರ ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಸದ್ಯ 4 ವಾರಗಳನ್ನು ಯಶಸ್ವಿಯಾಗಿ ಪೂರೈಸಿ 5ನೇ ವಾರಕ್ಕೆ ಕಾಲಿಟ್ಟಿರುವ ಈ ಸಿನಿಮಾ, ವಿಶ್ವಾದ್ಯಂತ ಬರೋಬ್ಬರಿ 278 ಕೋಟಿ ರೂಪಾಯಿ ಗಳಿಸಿದೆ ಎಂದು ಹೊಂಬಾಳೆ ಸಂಸ್ಥೆ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತಿಳಿಸಿದೆ.
“ನರಸಿಂಹನ ಐತಿಹಾಸಿಕ ಘರ್ಜನೆ ಮುಂದುವರೆದಿದೆ, ವೈಭವದ 5ನೇ ವಾರವನ್ನು ಪ್ರವೇಶಿಸುತ್ತಿದೆ” ಎಂದು ಅವರು ಟೀಟ್ ಮಾಡಿದ್ದಾರೆ.
ಹಿಂದಿ ಪ್ರೇಕ್ಷಕರನ್ನು ಗೆದ್ದ ಮಹಾವತಾರ!
‘ಮಹಾವತಾರ ನರಸಿಂಹ’(Mahavatar Narsimha) ಚಿತ್ರದ ಹಿಂದಿ ಅವತರಣಿಕೆ ಹಿಂದಿ ಭಾಷಿಕ ರಾಜ್ಯಗಳಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಪ್ರಖ್ಯಾತ ಬಾಕ್ಸ್ ಆಫೀಸ್ ವಿಶ್ಲೇಷಕ ತರಣ್ ಆದರ್ಶ್ ನೀಡಿರುವ ಮಾಹಿತಿ ಪ್ರಕಾರ, ಚಿತ್ರವು ಕೇವಲ ಹಿಂದಿಯಲ್ಲೇ 164.49 ಕೋಟಿ ರೂಪಾಯಿ ಗಳಿಸಿದೆ. ಇದು ಬಾಲಿವುಡ್ನ ಹಲವು ದೊಡ್ಡ ಬಜೆಟ್ ಚಿತ್ರಗಳಿಗಿಂತ ಹೆಚ್ಚಿನ ಗಳಿಕೆಯಾಗಿದೆ ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ, ರಾಷ್ಟ್ರ ಮಟ್ಟದಲ್ಲಿಯೂ ಚಿತ್ರದ ಗುಣಮಟ್ಟಕ್ಕೆ ಸಿಕ್ಕಿರುವ ಪ್ರಶಂಸೆಗೆ ಇದು ಸಾಕ್ಷಿಯಾಗಿದೆ.
ಇದನ್ನೂ ಓದಿ: Asia Cup 2025: ಭಾರತ ಪಾಕಿಸ್ತಾನ ಹೈ ವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧ
ಯಶಸ್ಸಿನ ಹಿಂದಿನ ಶಕ್ತಿ
ಅದ್ಭುತ ಅನಿಮೇಷನ್: ಭಾರತೀಯ ಅನಿಮೇಷನ್ ಸಿನಿಮಾಗಳಲ್ಲಿ ಇಷ್ಟೊಂದು ಸುಧಾರಿತ ತಂತ್ರಜ್ಞಾನ ಮತ್ತು ವಿಎಫ್ಎಕ್ಸ್ ಗುಣಮಟ್ಟವನ್ನು ನೋಡುವುದು ಅಪರೂಪ ಭಗವಾನ್ ನರಸಿಂಹನ ರೂಪಾಂತರ ಮತ್ತು ಹಿರಣ್ಯಕಶಿಪುವಿನೊಂದಿಗಿನ ಯುದ್ಧದ ದೃಶ್ಯಗಳು ಪ್ರೇಕ್ಷಕರಿಗೆ ರೋಮಾಂಚನ ನೀಡಿದ್ದು, ಇದುವೇ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.
ಧಾರ್ಮಿಕ ಮತ್ತು ಭಾವನಾತ್ಮಕ ಕಥೆ: ಸನಾತನ ಧರ್ಮದ ಆಳವಾದ ಪುರಾಣ ಕಥೆಯನ್ನು ಆಧರಿಸಿದ
ಈ ಚಿತ್ರವು ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಸೆಳೆದಿದೆ. ಪ್ರಹ್ಲಾದನ ಅಚಲ ಭಕ್ತಿ ಮತ್ತು ನರಸಿಂಹನ ಅವತಾರದ ದೃಶ್ಯಗಳು ಪ್ರೇಕ್ಷಕರ ಮನಸ್ಸಿನಲ್ಲಿ ಆಳವಾಗಿ ಉಳಿದುಕೊಂಡಿವೆ.
ಹೊಂಬಾಳೆ ಫಿಲಂಸ್ ನಿರ್ಮಾಣ: ‘ಕೆಜಿಎಫ್‘, ‘ಕಾಂತಾರ’ದಂತಹ ಬ್ಲಾಕ್ಬಸ್ಮರ್ಗಳನ್ನು ನೀಡಿದ ಹೊಂಬಾಳೆ ಸಂಸ್ಥೆಯು ಈ ಚಿತ್ರಕ್ಕೆ ಬೆಂಬಲ ನೀಡಿದ್ದರಿಂದ, ಚಿತ್ರದ ಪ್ರಚಾರ ಮತ್ತು ಪ್ರದರ್ಶನವೂ ದೊಡ್ಡ ಮಟ್ಟದಲ್ಲಿ ನಡೆಯಿತು. ಇದು ಯಶಸ್ಸಿಗೆ ಮತ್ತೊಂದು ಕಾರಣವಾಗಿದೆ.
‘ಮಹಾವತಾರ ನರಸಿಂಹ(Mahavatar Narsimha) ಕೇವಲ ಒಂದು ಸಿನಿಮಾ ಅಲ್ಲ, ಇದು ಭಾರತೀಯ ಅನಿಮೇಷನ್ಗೆ ಹೊಸ ದಿಕ್ಕನ್ನು ತೋರಿಸಿದೆ. ಸ್ಟಾರ್ ನಟರಿಲ್ಲದೆ, ಕೇವಲ ಕಂಟೆಂಟ್ ಮತ್ತು ಗುಣಮಟ್ಟದ ಆಧಾರದ ಮೇಲೆ ಒಂದು ಚಿತ್ರ ಈ ಮಟ್ಟದ ಯಶಸ್ಸು ಗಳಿಸಬಹುದೆಂದು ಇದು ಸಾಬೀತುಪಡಿಸಿದೆ.
