Anjali Arora Reel to Real Life: ಗ್ಲಾಮರ್ ಲೋಕದ ಕನಸುಗಳು ಎಲ್ಲರಿಗೂ ಇರುತ್ತವೆ. ಆದರೆ, ಅವು ನನಸಾಗದಿದ್ದಾಗ ಜೀವನದ ಆಯ್ಕೆಗಳು ಹೇಗಿರುತ್ತವೆ? ಎಂಬ ಪ್ರಶ್ನೆಗೆ ಒಂದು ಜೀವಂತ ಉದಾಹರಣೆ ನಮ್ಮ ಮುಂದಿದೆ. ಒಂದು ಕಾಲದಲ್ಲಿ Social Media ತಾರೆಯಾಗಿ ಮಿಂಚಿ, ಸಿನಿಮಾ ಅವಕಾಶಗಳನ್ಕೊನು ಗಿಟ್ಟಿಸಿಕೊಂಡಿದ್ದ ನಟಿ, ಇದೀಗ ಅವಕಾಶಗಳ ಕೊರತೆಯಿಂದ, ಕೊನೆಗೆ ‘ಬಾರ್ ಡ್ಯಾನ್ಸರ್‘ ಆದ್ರಾ ಎಂಬುದು ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅಸಲಿಗೆ ಆ ಯುವತಿ ಬೇರೆ ಯಾರೂ ಅಲ್ಲ, ಅಂಜಲಿ ಆರೋರಾ (Anjali Arora).
ಇದನ್ನೂ ಓದಿ: Asia Cup 2025: ಭಾರತ ಪಾಕಿಸ್ತಾನ ಹೈ ವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧ
‘ಕಚ್ಚಾ ಬಾದಾಮ್ ಫೇಮ್ ಟು ‘ಫಾರಿನ್’ ಡ್ಯಾನ್ಸ್ ಕ್ಲಬ್
ಟಿಕ್ಟಾಕ್ನಲ್ಲಿ ಒಂದು ಕಾಲದಲ್ಲಿ ಮಿಂಚಿದ್ದ ಅಂಜಲಿ ಆರೋರಾ(Anjali Arora), ಪಶ್ಚಿಮ ಬಂಗಾಳದ ಭುಬನ್ ಭಡ್ಯಾಕರ್ ಅವರ ‘ಕಚ್ಚಾ, ಬಾದಾಮ್’ ಹಾಡಿಗೆ ಮಾಡಿದ ರೀಲ್ಸ್ ನಿಂದಾಗಿ ದೇಶಾದ್ಯಂತ ಖ್ಯಾತಿಗಳಿಸಿದ್ದರು. ಈ ಹಾಡು ಭುಬನ್ ಅವರಿಗೆ ಏನು ತಂದುಕೊಟ್ಟಿತು ಎಂಬುದು ಬೇರೆ ವಿಷಯ, ಆದರೆ ಅಂಜಲಿ ಆರೋರಾಗೆ(Anjali Arora) ರಾತ್ರೋರಾತ್ರಿ ಪ್ರಸಿದ್ಧಿ ತಂದುಕೊಟ್ಟಿತು. ಕೇವಲ 24ರ ವಯಸ್ಸಿನಲ್ಲಿಯೇ ಆಕೆ 4 ಕೋಟಿ ಮೌಲ್ಯದ ಮನೆಯ ಒಡತಿಯೂ ಆದರು.
ಇದನ್ನೂ ಓದಿ: Mysore Sandal Soap Ad: ತಮನ್ನಾ ಗೆ 6.20 ಕೋಟಿ, ಕನ್ನಡ ನಟಿಯರಿಗೆ 62.87ಲಕ್ಷ
ನೋಡ ನೋಡುತ್ತಿದ್ದಂತೆಯೇ ಅಂಜಲಿ ಆರೋರಾ(Anjali Arora) ‘ಲಾಕ್ ಅಪ್‘ ಮತ್ತು ‘ಬಿಗ್ ಬಾಸ್‘ನಂತಹ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಆದರೆ ಬೇಗ ಸಿಕ್ಕ ಯಶಸ್ಸು ತುಂಬಾ ದಿನ ಇರುವುದಿಲ್ಲ ಎಂದು ಹೇಳುತ್ತಾರೆ. ಅದರಂತೆಯೇ ಅಂಜಲಿ ಆರೋರ(Anjali Arora) ಅವರ ಜೀವನ ಹಾಗೆ ಆದಂತಿದೆ. ಈಗ, ಅವರು ಥಾಯ್ಲೆಂಡ್ನ ಒಂದು ಡ್ಯಾನ್ಸ್ ಕ್ಲಬ್ನಲ್ಲಿ Batla House ಚಿತ್ರದ ‘ಓ ಸಾಕಿ ಸಾಕಿ ರೇ’ ಹಾಡಿಗೆ ಸೊಂಟ ಬಳುಕಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ಜನರಲ್ಲಿ ಹಲವು ರೀತಿಯ ಅಭಿಪ್ರಾಯಗಳನ್ನು ಹುಟ್ಟುಹಾಕಿದೆ.
‘ರೀಲ್ ಟು ರಿಯಲ್’
ಈ ವಿಡಿಯೋ ನೋಡಿದ ಕೆಲವರು, ‘ವೈರಲ್ ಆದ ಮಾತ್ರಕ್ಕೆ ಜೀವನ ಬದಲಾಗುವುದಿಲ್ಲ. ಒಂದೆರಡು ವರ್ಷ ಖ್ಯಾತಿ ಇರುತ್ತದೆ, ಅಷ್ಟರಲ್ಲಿಯೇ ಏನಾದರೂ ಸ್ವಂತ ಉದ್ಯಮ ಪ್ರಾರಂಭಿಸಬೇಕು ಇಲ್ಲವಾದರೆ ಹೀಗೆ ವಿದೇಶಗಳಿಗೆ ತೆರಳಿ ಡ್ಯಾನ್ಸ್ ಮಾಡುವುದು ಅನಿವಾರ್ಯವಾಗುತ್ತದೆ’ ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಆದರೆ ಅಂಜಲಿ ಆರೋರಾ(Anjali Arora)ಪರ ನಿಂತಿರುವವರು, ‘ಡ್ಯಾನ್ಸ್ ಮಾಡುವುದು ಅವಳಿಗೆ ಇಷ್ಟ ಇದರಲ್ಲಿ ಆಕೆ ಪರಿಣತಿ ಹೊಂದಿದ್ದಾಳೆ. ಪ್ರಾಮಾಣಿಕವಾಗಿ ಜೀವನ ನಡೆಸಲು ತನ್ನ ಪ್ರತಿಭೆಯನ್ನು ಬಳಸಿಕೊಳ್ಳುತ್ತಿದ್ದಾಳೆ ಇದರಲ್ಲಿ ತಪ್ಪೇನಿದೆ?’ ಎಂದು ಪ್ರಶ್ನಿಸುತ್ತಿದ್ದಾರೆ.
