Hyderabad Murder Case: ನಗರದಲ್ಲಿ ನಡೆಯುತ್ತಿರುವ ಸರಣಿ ಭಯಾನಕ ಹತ್ಯೆಗಳು(Murders) ಜನರಲ್ಲಿ ಆತಂಕ ಸೃಷ್ಟಿಸುತ್ತಿವೆ. ಕೂಕಟ್ ಪಲ್ಲಿಯಲ್ಲಿ ಕ್ರಿಕೆಟ್ ಬ್ಯಾಟ್ಗಾಗಿ ಬಾಲಕಿಯನ್ನು ಕೊಲೆ(Murder) ಮಾಡಿದ ಘಟನೆ ಮಾಸುವ ಮುನ್ನವೇ, ಮೇಡ್ಕಲ್ ಜಿಲ್ಲೆಯಲ್ಲಿ ಮತ್ತೊಂದು ಘೋರ ಕೃತ್ಯ ನಡೆದಿದೆ.
ಇದನ್ನೂ ಓದಿ: ‘ಕಚ್ಚಾ ಬಾದಾಮ್’ ಟು ‘ಡ್ಯಾನ್ಸ್ ಕ್ಲಬ್’: ರೀಲ್ಸ್ ಲೋಕದ ತಾರೆಯ ಬದುಕಿನ ಕಥೆ!
ಗಂಡನೊಬ್ಬ ತನ್ನ ಗರ್ಭಿಣಿ ಹೆಂಡತಿಯನ್ನು(Pregnent Women) ಅತ್ಯಂತ ಕ್ರೂರವಾಗಿ ಕೊಂದು, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ಈ ಘಟನೆಯಿಂದಾಗಿ ಹೈದರಾಬಾದ್ (Hyderabad) ಜನರು ಬೆಚ್ಚಿಬಿದ್ದಿದ್ದಾರೆ. ಈ ಭಯಾನಕ ಕೃತ್ಯಕ್ಕೆ ಕಾರಣವೇನು? ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಸಂಪೂರ್ಣ ವಿವರಗಳು ಇನ್ನಷ್ಟೇ ಹೊರಬರಬೇಕಿದೆ.
ಈ ಹಿಂದೆ ಹೈದರಾಬಾದ್ನ(Hyderabad) ಕೂಕಟ್ ಪಲ್ಲಿಯಲ್ಲಿ ಕ್ರಿಕೆಟ್ ಬ್ಯಾಟ್ಗಾಗಿ 15 ವರ್ಷದ ಬಾಲಕನೊಬ್ಬ 10 ವರ್ಷದ ಸಹಸ್ರಾ ಎಂಬ ಬಾಲಕಿಯನ್ನು ಕೊಲೆಗೈದ(Murder) ಘಟನೆ ನೆನಪಿರಬಹುದು. ಬಾಲಕಿಯ ಮನೆಗೆ ನುಗ್ಗಿದ ಆರೋಪಿ, ಬ್ಯಾಟ್ ಕದಿಯುವಾಗ ಅಡ್ಡಿಯಾದ ಸಹಸ್ರಳನ್ನು ತಂದಿದ್ದ ಚಾಕುವಿನಿಂದ ಇಪ್ಪತ್ತು ಬಾರಿ ಇರಿದು ಕೊಲೆ(Murder) ಮಾಡಿದ್ದ.
ಆ ಘಟನೆ ಮಾಸುವ ಮುನ್ನವೇ, ನಗರದಲ್ಲಿ ಮತ್ತೊಂದು ಭೀಕರ ಕೃತ್ಯ ಬೆಳಕಿಗೆ ಬಂದಿದೆ. ತುಂಬು ಗರ್ಭಿಣಿ ಹೆಂಡತಿಯನ್ನು(Pregnant women) ಗಂಡನೊಬ್ಬ ನಿರ್ದಯವಾಗಿ ಕೊಂದಿದ್ದಾನೆ. ಆಕೆಯ ದೇಹವನ್ನು ರಂಪದಿಂದ ತುಂಡು ತುಂಡಾಗಿ ಕತ್ತರಿಸಿ ರಾಕ್ಷಸಿ ಕೃತ್ಯ ಎಸಗಿದ್ದಾನೆ. ಈ ಘಟನೆ ಮೇಡ್ಕಲ್ ಜಿಲ್ಲೆಯ ಮೇಡಿನಲ್ಲಿ ವ್ಯಾಪ್ತಿಯ ಬಾಲಾಜಿ ಹಿಲ್ಸ್ನಲ್ಲಿ ನಡೆದಿದೆ. ಮನೆಯಿಂದ ರಂಪದ ಶಬ್ದ ಕೇಳಿ ಅನುಮಾನಗೊಂಡ ನೆರೆಹೊರೆಯವರು ನೋಡಿದಾಗ ಈ ಭಯಾನಕ ಕೃತ್ಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ: Asia Cup 2025: ಭಾರತ ಪಾಕಿಸ್ತಾನ ಹೈ ವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧ
ಘಟನೆಯ ಬಗ್ಗೆ ವಿವರವಾಗಿ ನೋಡುವುದಾದರೆ, ವಿಕಾರಾಬಾದ್ ಜಿಲ್ಲೆಯ ಕಾಮಾರೆಡ್ಡಿ ಗೂಡ ಗ್ರಾಮದ ಮಹೇಂದರ್ ರೆಡ್ಡಿ, ಮತ್ತು ಸ್ವಾತಿ ಪ್ರೀತಿಸಿ ಮದುವೆಯಾಗಿದ್ದರು. ಇವರು ಬೋಡುಪ್ಪಲ್ ಎಂಬಲ್ಲಿ ವಾಸವಾಗಿದ್ದರು. ಇತ್ತೀಚಿಗೆ ಸ್ವಾತಿ ಗರ್ಭಿಣಿಯಾಗಿದ್ದರು.(Pregnant Women)
ಆದರೆ ಇಬ್ಬರ ನಡುವೆ ಅದೇನು ಜಗಳವಾಯಿತು ಏನೋ, ಇದ್ದಕ್ಕಿದ್ದಂತೆ ಮಹೇಂದರ್ ಕೋಪಗೊಂಡು ರಂಪದಿಂದ ಸ್ವಾತಿಯ ದೇಹವನ್ನು ನಿರ್ದಯವಾಗಿ ಕತ್ತರಿಸಿಹಾಕಿದ್ದಾನೆ. ನಂತರ, ಆ ದೇಹದ ಭಾಗಗಳನ್ನು ಕವರ್ ಗಳಲ್ಲಿ ತುಂಬಿಸಿ ಹೊರಗೆ ಎಸೆಯಲು ಸಿದ್ಧತೆ ನಡೆಸಿದ್ದ. ಆ ಸಮಯದಲ್ಲಿ ಕೋಣೆಯಿಂದ ಗರಗಸದ ಶಬ್ದ ಕೇಳಿಬಂದ ಕಾರಣ ಅನುಮಾನಗೊಂಡ ಪಕ್ಕದ ಮನೆಯವರು ಒಳಗೆ ಹೋಗಿ ನೋಡಿದ್ದಾರೆ. ಆಗ ಈ ಭೀಕರ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಆರೋಪಿ ಮಹೇಂದರ್ ರೆಡ್ಡಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Mysore Sandal Soap Ad: ತಮನ್ನಾ ಗೆ 6.20 ಕೋಟಿ, ಕನ್ನಡ ನಟಿಯರಿಗೆ 62.87ಲಕ್ಷ
ಘಟನಾ ಸ್ಥಳದಲ್ಲಿ ಪೊಲೀಸರಿಗೆ ಸ್ವಾತಿಯ ಎದೆಯ ಭಾಗ ಮಾತ್ರ ಲಭ್ಯವಾಗಿದೆ. ತಲೆ, ಕೈ-ಕಾಲುಗಳು, ಭುಜಗಳಂತಹ ದೇಹದ ಇತರ ಭಾಗಗಳನ್ನು ಆರೋಪಿ ಬೇರೆ ಬೇರೆ ಪ್ರದೇಶಗಳಲ್ಲಿ ಎಸೆದಿದ್ದಾನೆ ಎಂದು ತಿಳಿದುಬಂದಿದೆ. ಅವುಗಳನ್ನು ಪತ್ತೆಹಚ್ಚಲು ಪೊಲೀಸರು ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸ್ವಾತಿ ಮತ್ತು ಮಹೇಂದರ್ ಈ ಹಿಂದೆ ಇದೇ ಮನೆಯಲ್ಲಿ ಹತ್ತು ತಿಂಗಳ ಕಾಲ ಬಾಡಿಗೆಗೆ ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಅವರು 25 ದಿನಗಳ ಹಿಂದೆಯಷ್ಟೇ ಮತ್ತೆ ಇಲ್ಲಿಗೆ ಬಂದಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಕೊಲೆಗೆ ನಿಖರವಾದ ಕಾರಣ ಏನೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೌಟುಂಬಿಕ ಕಲಹ, ಆರ್ಥಿಕ ಸಮಸ್ಯೆಗಳು ಅಥವಾ ಅನೈತಿಕ ಸಂಬಂಧಗಳು ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಘಟನೆ ಸ್ಥಳೀಯರಿಗೆ ಸಾಕಷ್ಟು ಆತಂಕವನ್ನು ಸೃಷ್ಟಿಸಿದೆ
