Richest Chief Ministers in India : ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳು (Richest Chife Minister List) ಯಾರು? ಯಾವ ರಾಜ್ಯದ ಮುಖ್ಯಮಂತ್ರಿ ಎಷ್ಟು ಆಸ್ತಿ ಹೊಂದಿದ್ದಾರೆ? ಈ ಕುರಿತ ಇತ್ತೀಚಿನ ವರದಿಯನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಸಂಸ್ಥೆ ಬಿಡುಗಡೆ ಮಾಡಿದೆ. ದೇಶಾದ್ಯಂತ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 30 ಮುಖ್ಯಮಂತ್ರಿಗಳ ಆಸ್ತಿ ವಿವರಗಳನ್ನು(Richest Chife Minister List) ವಿಶ್ಲೇಷಿಸಿ ಈ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ‘ಕಚ್ಚಾ ಬಾದಾಮ್’ ಟು ‘ಡ್ಯಾನ್ಸ್ ಕ್ಲಬ್’: ರೀಲ್ಸ್ ಲೋಕದ ತಾರೆಯ ಬದುಕಿನ ಕಥೆ!
ಶ್ರೀಮಂತ ಸಿಎಂಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 3ನೇ ಸ್ನಾನ
ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ(Richest Chife Minister List) ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ(Chif Minister Siddaramaiah) ಅವರು ಮೂರನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು(ChandraBhabu Naidu) ಇದ್ದಾರೆ. ಇವರ ಒಟ್ಟು ಆಸ್ತಿ ಬರೋಬ್ಬರಿ 931 ಕೋಟಿ ರೂಪಾಯಿ! ಇದರಲ್ಲಿ 810 ಕೋಟಿ ಚರ ಮತ್ತು 121 ಕೋಟಿ ಸ್ಥಿರ ಆಸ್ತಿಯಾಗಿದೆ.
ಎರಡನೇ ಸ್ಥಾನದಲ್ಲಿ ಅರುಣಾಚಲ ಪ್ರದೇಶದ ಸಿಎಂ(Arunachal Pradesh CM) ಪೇಮಾ ಖಂಡು ಇದ್ದಾರೆ, ಅವರ ಆಸ್ತಿ 332 ಕೋಟಿ ರೂಪಾಯಿ. ಇನ್ನು ನಮ್ಮ ಕರ್ನಾಟಕದ ಸಿಎಂ ಸಿದ್ದರಾಮಯ್ಯ (Chif Minister Siddaramaiah) ಅವರು 51 ಕೋಟಿ ಆಸ್ತಿ ಹೊಂದಿದ್ದು, ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅವರ ಆಸ್ತಿಯಲ್ಲಿ 21 ಕೋಟಿ ಚರ ಮತ್ತು 30 ಕೋಟಿ ಸ್ಥಿರ ಆಸ್ತಿ ಸೇರಿದೆ.
ADR ವರದಿಯ ಪ್ರಕಾರ, ದೇಶದ 30 ಮುಖ್ಯಮಂತ್ರಿಗಳ ಒಟ್ಟು ಆಸ್ತಿ ಸುಮಾರು 1,632 ಕೋಟಿ ರೂಪಾಯಿ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಆಸ್ತಿ ಕೇವಲ ಚಂದ್ರಬಾಬು ನಾಯ್ತು ಅವರ ಬಳಿಯೇ ಇದೆ ಎಂಬುದು ವಿಶೇಷ.
ಕಡಿಮೆ ಆಸ್ತಿ ಹೊಂದಿರುವ ಸಿಎಂಗಳು
ದೇಶದಲ್ಲಿ ಅತ್ಯಂತ ಕಡಿಮೆ ಆಸ್ತಿ ಹೊಂದಿರುವ ಮುಖ್ಯಮಂತ್ರಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ.(CM Mamta Banerjee) ಅವರ ಒಟ್ಟು ಆಸ್ತಿ ಕೇವಲ 15.38 ಲಕ್ಷ ರೂಪಾಯಿ ಮಾತ್ರ. ಅವರಿಗೆ ಯಾವುದೇ ಸ್ಥಿರ ಆಸ್ತಿ ಇಲ್ಲ. ಇವರ ನಂತರ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (55.24 ಲಕ್ಷ ರೂ.) ಮತ್ತು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinaraye Vijayn) (1.18 ಕೋಟಿ ರೂ.) ಇದ್ದಾರೆ.
ನಂತರ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ(Omer Abdulla) (55.24 ಲಕ್ಷ ರೂ.) ಮತ್ತು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (1.18 ಕೋಟಿ ರೂ.) ಇದ್ದಾರೆ.
ಇದನ್ನೂ ಓದಿ: Asia Cup 2025: ಭಾರತ ಪಾಕಿಸ್ತಾನ ಹೈ ವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧ
ಇನ್ನು ಕೆಲವು ರಾಜ್ಯಗಳ ಸಿಎಂಗಳ ಆಸ್ತಿ ವಿವರ ಹೀಗಿದೆ:
ತೆಲಂಗಾಣದ ರೇವಂತ್ ರೆಡ್ಡಿ: 30 ಕೋಟಿ ರೂ. (7ನೇ ಸ್ಥಾನ)
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್: 1.54 ಕೋಟಿ ರೂ.
ಬಿಹಾರದ ನಿತೀಶ್ ಕುಮಾರ್: 1.64 ಕೋಟಿ ರೂ.
ಪಂಜಾಬ್ನ ಭಗವಂತ್ ಮಾನ್: 1.97 ಕೋಟಿ ರೂ.
ಒಡಿಶಾದ ಮೋಹನ್ ಚರಣ್ ಮಾಝಿ: 197 ಕೋಟಿ ರೂ
ಹೆಚ್ಚು ಸಾಲ ಹೊಂದಿರುವ ಸಿಎಂಗಳು
ಆಸ್ತಿ ಮಾತ್ರವಲ್ಲ, ಕೆಲವು ಮುಖ್ಯಮಂತ್ರಿಗಳ ಮೇಲೆ ದೊಡ್ಡ ಪ್ರಮಾಣದ ಸಾಲವೂ ಇದೆ. ಅರುಣಾಚಲ ಪ್ರದೇಶದ ಸಿಎಂ ಪೇಮಾ ಖಂಡು ಅವರ ಹೆಸರಿನಲ್ಲಿ 180 ಕೋಟಿ ರೂ. ಸಾಲವಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅವರು 23 ಕೋಟಿ ರೂ. ಸಾಲ ಮಾಡಿದ್ದಾರೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ತು ಅವರೂ ಕೂಡ 10 ಕೋಟಿಗೂ ಹೆಚ್ಚು ಸಾಲ ಘೋಷಿಸಿಕೊಂಡಿದ್ದಾರೆ. ಈ ಎಲ್ಲಾ ಮಾಹಿತಿಗಳು ಚುನಾವಣಾ ಸಮಯದಲ್ಲಿ ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್ಗಳನ್ನು ಆಧರಿಸಿವೆ.
