Virat Kohli IPL Retirement: ವಿರಾಟ್ ಕೊಹ್ಲಿಯ(Virat Kohli) ಐಪಿಎಲ್ ನಿವೃತ್ತಿ ಬಗ್ಗೆ ಸಹ ಆಟಗಾರ ಸ್ವಸ್ತಿಕ್ ಚಿಕಾರ ಅವರು ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. 2025ರ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಆರ್.ಸಿ.ಬಿ (RCB) ತಂಡದ ಐಕಾನ್ ಪ್ಲೇಯರ್ ವಿರಾಟ್ ಕೊಹ್ಲಿ ನಿವೃತ್ತಿಯ(Virat Kohli Retirement) ಬಗ್ಗೆ ಯುವ ಆಟಗಾರ ಸ್ವಸ್ತಿಕ್ ಜೊತೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ‘ಕಚ್ಚಾ ಬಾದಾಮ್’ ಟು ‘ಡ್ಯಾನ್ಸ್ ಕ್ಲಬ್’: ರೀಲ್ಸ್ ಲೋಕದ ತಾರೆಯ ಬದುಕಿನ ಕಥೆ!
ರೇವ್ ಸ್ಪೋರ್ಟ್ಸ್ ಚಾನಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಚಿಕಾರ ನಾನು ಕೊಹ್ಲಿ(Virat Kohli) ಅಣ್ಣನ ಜೊತೆ ಮಾತನಾಡಿದಾಗ ಅವರು “ನಾನು ಫಿಟ್ ಇರುವವರೆಗೂ ಅಡುತ್ತೇನೆ ಯಾವುದೇ ಕಾರಣಕ್ಕೂ ಇಂಫಾಕ್ಟ್ ಪ್ಲೇಯರ್ ಆಗಿ ಆಡುವುದಿಲ್ಲ ಅಂತ ದಿನ ಬಂದರೆ ನಾನು ನಿವೃತ್ತಿಹೊಂದುತ್ತೇನೆ(Virat Kohli Retirement)” ಎಂದು ತನ್ನ ಬಳಿ ತಿಳಿಸಿದ್ದಾಗಿ ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಈ ಆವೃತ್ತಿಯಲ್ಲಿ ತಂಡ ಟ್ರೋಫಿ ಗೆಲ್ಲುವಲ್ಲಿ ವಿರಾಟ್ ಕೊಹ್ಲಿ(Virat Kohli) ಪ್ರಮುಖ ಪಾತ್ರವಹಿಸಿದ್ದಾರೆ. ಅವರು ಈ ಆವೃತ್ತಿಯಲ್ಲಿ 15 ಪಂದ್ಯದಲ್ಲಿ 54.75ರ ಸರಸರಿಯಲ್ಲಿ 657 ರನ್ ಗಳಿಸಿದ್ದಾರೆ. ಇದರಲ್ಲಿ ಗರಿಷ್ಠ ಸ್ಕೊರ್ ಅಜೇಯ 73 ರನ್ ಗಳಿಸಿದ್ದಾರೆ.
ಇಂಫಾಕ್ಟ್ ಪ್ಲೇಯರ್ ನಿಯಮ
2023ರ ಐಪಿಎಲ್ ನಲ್ಲಿ ಈ ನಿಯಮ ಜಾರಿಗೊಳಿಸಲಾಯಿತು. ಈ ನಿಯಮದ ಪ್ರಕಾರ ತಂಡವು 5 ಬದಲಿ ಆಟಗಾರರನ್ನು ಹೆಸರಿಸಬಹುದು ಮತ್ತು ತಂಡ ಬಯಸಿದರೆ ಪಂದ್ಯದ ಯಾವುದೇ ಸಮಯದಲ್ಲಿ ಒಬ್ಬ ಆಟಗಾರನನ್ನು ಬದಲಿ ಆಟಗಾರನಾಗಿ ಬಳಸಬಹುದು. ಅವರು ಬೌಲರ್ ಬ್ಯಾಟ್ಸ್ಮನ್ ಅಥವಾ ಆಲ್ರೌಂಡರ್ ಆಗಿರಬಹುದು. ಈ ನಿಯಮವನ್ನು 2027ರ ಐಪಿಎಲ್ ವರೆಗೆ ಮುಂದುವರೆಸುವುದಾಗಿ ಐಪಿಎಲ್ ಮಂಡಳಿ ತಿಳಿಸಿದೆ.
ಇದನ್ನೂ ಓದಿ: Mysore Sandal Soap Ad: ತಮನ್ನಾ ಗೆ 6.20 ಕೋಟಿ, ಕನ್ನಡ ನಟಿಯರಿಗೆ 62.87ಲಕ್ಷ
ವಿರಾಟ್ ಕೊಹ್ಲಿ ಅಂಕಿಅಂಶಗಳು
ವಿರಾಟ್ ಕೊಹ್ಲಿ(Virat Kohli) ಅವರು ಇದುವರೆಗೆ ಒಟ್ಟು 267 ಪಂದ್ಯದಲ್ಲಿ 39.55ರ ಸಾರಸರಿ ಮತ್ತು 132.86ರ ಸಾರಸರಿಯಲ್ಲಿ 8661 ರನ್ ಗಳಿಸಿದ್ದಾರೆ. ಕೊಹ್ಲಿ ಐಪಿಎಲ್ ನಲ್ಲಿ 8ಶತಕ ಮತ್ತು 63 ಅರ್ಧಶತಕ ಸಿಡಿಸಿದ್ದಾರೆ.
ಐಪಿಎಲ್ ನಲ್ಲಿ ಅತಿಹೆಚ್ಚು ರನ್ ಗಳಿಸಿದ ಧಾಖಲೆ ವಿರಾಟ್ ಕೋಹ್ಲಿ ಹೆಸರಿನಲ್ಲಿದೆ.
ಈಗಾಗಲೇ ಟೆಸ್ಟ್ ಮತ್ತು ಟಿ20 ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿ(Virat Kohli) ಏಕದಿನ ಪಂದ್ಯಗಳಲ್ಲಿ ಮತ್ತು ಐಪಿಎಲ್ ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಅವರು ಇನ್ನು ಕೆಲ ವರ್ಷಗಳ ಕಾಲ ಐಪಿಎಲ್ ನಲ್ಲಿ ಆಡುತ್ತಾರೆ. ಮತ್ತು 2027ರ ಏಕದಿನ ವಿಶ್ವಕಪ್ ಟೂರ್ನಿಯವರೆಗೆ ಅವರು ಭಾರತ ಕ್ರಿಕೆಟ್ ತಂಡದ ಪರ ಆಡುವ ವಿಶ್ವಾಸ ಅಭಿಮಾನಿಗಳಲ್ಲಿದೆ.
