Daisy Shah controversy: ಬಹುಭಾಷಾ (Daisy Shah) ಅವರು ಕನ್ನಡ ಚಿತ್ರರಂಗದ ಕುರಿತು ನೀಡಿರುವ ಒಂದು ಹೇಳಿಕೆ ಇದೀಗ ದೊಡ್ಡ ವಿವಾದಕ್ಕೆ(Controversy) ಕಾರಣವಾಗಿದೆ. ಈ ಹಿಂದೆ ಪ್ರಜ್ವಲ್ ದೇವರಾಜ್ ಅವರ ‘ಭದ್ರ ಮತ್ತು ಜಗ್ಗೇಶ್ ಅವರ ‘ಬಾಡಿಗಾರ್ಡ್ ಚಿತ್ರಗಳಲ್ಲಿ ನಟಿಸಿದ್ದ ಡೈಸಿ(Daisy Shah), ನಂತರ ಸಲ್ಮಾನ್ ಖಾನ್ ಅವರ ಜೈ ಹೋ ಚಿತ್ರದ ಮೂಲಕ ಬಾಲಿವುಡ್ಗೆ ಕಾಲಿಟ್ಟು ಜನಪ್ರಿಯತೆ ಗಳಿಸಿದ್ದರು. ಇತ್ತೀಚೆಗೆ ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಅವರು ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಒಳಗಾಗಿದೆ.
ಇದನ್ನೂ ಓದಿ: 300 ಕೋಟಿ ಕ್ಲಬ್ನತ್ತ ‘Mahavatar Narasimha’: ಹಿಂದಿ ಒಂದರಲ್ಲೇ 164 ಕೋಟಿ ಕಲೆಕ್ಷನ್
ಹೀಗಿದೆಯಾ ಕನ್ನಡ ಸಿನಿಮಾದಲ್ಲಿ ಕೆಲಸ ಮಾಡುವ ಅನುಭವ?
ಹಾಟರ್ ಫ್ಲೈ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಡೈಸಿ ಶಾ(Daisy Shah) ತಮ್ಮ ಹಳೆಯ ಅನುಭವವನ್ನು ಹಂಚಿಕೊಂಡಿದ್ದಾರೆ. ಕನ್ನಡ ಚಿತ್ರದಲ್ಲಿ ಕೆಲಸ ಮಾಡುವಾಗ, ಪುರುಷ ನಟರಿಗೆ ಅವರ ಪಾತ್ರಗಳ ಹಿನ್ನೆಲೆ ಮತ್ತು ಭಾವನೆಗಳ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲಾಗುತ್ತಿತ್ತು. ಆದರೆ ನಾಯಕಿಯರಾದ ನಮಗೆ ಇಲ್ಲಿ ನಗಬೇಕು. ಇಲ್ಲಿ ಅಳಬೇಕು ಇಲ್ಲಿ ಹೀಗಿರಬೇಕು ಎಂದಷ್ಟೇ ಹೇಳುತ್ತಿದ್ದರು” ಎಂದು ಡೈಸಿ ಹೇಳಿದ್ದಾರೆ. ಬಹುಶಃ ಆಗ ಕನ್ನಡ ಭಾಷೆ ನನಗೆ ಸರಿಯಾಗಿ ಬರುತ್ತಿರಲಿಲ್ಲ. ಹಾಗಾಗಿ ಹೀಗಾಗಿರಬಹುದು ಎಂದು ಅವರು
ಫ್ರೂಟ್ ಸಲಾಡ್ ವಿವಾದ
ಆದರೆ ಈ ಸಂದರ್ಶನದಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಗ್ರಾಸವಾದ ಭಾಗವೆಂದರೆ ನಾಯಕಿಯರ ಚಿತ್ರೀಕರಣದ ಬಗ್ಗೆ, ಅವರು ಹೇಳಿದ ಮಾತು. “ನಾನು ಕನ್ನಡ ಸಿನಿಮಾ ಮಾಡುವಾಗ, ಬಿಡುವಿನ ಸಮಯದಲ್ಲಿ ಟಿವಿ ನೋಡುತ್ತಿದ್ದ ನಾನು ನೋಡಿದ ಹೆಚ್ಚಿನ ಎಲ್ಲಾ ಹಾಡುಗಳಲ್ಲಿ ಒಬ್ಬರೇ ನಟ ಇದ್ದರು ಅವರ ಎಲ್ಲಾ ಹಾಡುಗಳಲ್ಲಿ ನಾಯಕಿಯ ಹೊಕ್ಕಳಿನ ಮೇಲೆ ಫ್ರೂಟ್ ಸಲಾಡ್ ಅಥವಾ ತರಕಾರಿ ಸಲಾಡ್ ಅನ್ನು ಹಾಕಿ. ಕ್ಲೋಸ್ ಅಪ್ ಶಾಟ್ಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಕೆಲವೊಮ್ಮೆ ಐಸ್ ಮತ್ತು ನೀರನ್ನು ಸಹ ಸುರಿಯಲಾಗುತ್ತಿತ್ತು. ಎಂದು ಹೇಳಿದ್ದಾರೆ.
ಈ ಹೇಳಿಕೆ ಕೇಳಿ ಕನ್ನಡ ಸಿರಿ ಪ್ರಿಯರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ ಡೈಸಿ (Daisy Shah) ಯಾವ ನಟರ ಬಗ್ಗೆ ಹೀಗೆ ಹೇಳಿದ್ದಾರೆ ಎಂಬ ಕುತೂಹಲ ಮೂಡಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಜನರು ನಾನಾ ರೀತಿಯಲ್ಲಿ ಚರ್ಚಿಸುತ್ತಿದ್ದಾರೆ. ಕೆಲವು ಹಿರಿಯ ಕಲಾವಿದರ ಹಾಡುಗಳಲ್ಲಿ ಇಂಥ ದೃಶ್ಯಗಳು ಸಾಮಾನ್ಯವಾಗಿ ಇದ್ದವು ಎಂದು ಕೆಲವರು ಒಪ್ಪಿಕೊಂಡರೆ, ಇದು ಕನ್ನಡ ಚಿತ್ರರಂಗವನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಎಂದು ಕೆಲವರಿಗೆ ವಿರೋಧಿಸಿದ್ದಾರೆ.
ಇದನ್ನೂ ಓದಿ: ‘ಕಚ್ಚಾ ಬಾದಾಮ್’ ಟು ‘ಡ್ಯಾನ್ಸ್ ಕ್ಲಬ್’: ರೀಲ್ಸ್ ಲೋಕದ ತಾರೆಯ ಬದುಕಿನ ಕಥೆ!
ಡೈಸಿ ಶಾ(Daisy Shah) ಕೊನೆದಾಗಿ 2023ರಲ್ಲಿ ಬಿಡುಗಡೆಯಾದ ‘ಮಿಸ್ಟರ್ ಆಫ್ ಟ್ಯಾಟು‘ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಸಲ್ಮಾನ್ ಖಾನ್ ಅವರ ‘ಬಿಗ್ ಬಾಸ್ 19‘ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳದಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಡೈಸಿ ಷಾ ಅವರ ಈ ವಿವಾದಾತ್ಮಕ ಹೇಳಿಕೆ ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.
