Cheteshwar Pujara Retirement: ಕ್ರಿಕೆಟ್ ಜಗತ್ತಿನಲ್ಲಿ ತಾಳ್ಮೆ, ದೃಢತೆ ಮತ್ತು ಅಚಲ ನಿರ್ಧಾರಕ್ಕೆ ಮತ್ತೊಂದು ಹೆಸರೇ ಚೇತೇಶ್ವರ್ ಪೂಜಾರ(Cheteshwar Pujara). ಭಾರತದ ಟೆಸ್ಟ್ ಕ್ರಿಕೆಟ್ ತಂಡದ ಪ್ರಮುಖ ಆಧಾರಸ್ತಂಭವಾಗಿದ್ದ ಪೂಜಾರ(Cheteshwar Pujara) ಈಗ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ರಾಹುಲ್ ದ್ರಾವಿಡ್ ನಂತರ ಟೆಸ್ಟ್ ಕ್ರಿಕೆಟ್ ನಂಬರ್ 3 ಸ್ಥಾನವನ್ನು ಭದ್ರವಾಗಿ ಕಾಪಾಡಿದ್ದ ಪೂಜಾರ(Cheteshwar Pujara), ತಮ್ಮ ವಿಶಿಷ್ಟ ಬ್ಯಾಟಿಂಗ್ ಶೈಲಿಯಿಂದ ಭಾರತಕ್ಕೆ ಅನೇಕ ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಅವರ ನಿವೃತ್ತಿಯೊಂದಿಗೆ ಒಂದು ಅದ್ಭುತ ಯುಗಾಂತ್ಯವಾಗಿದೆ. ಈ ಸಾಧಕನ ಅಂತರರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ ಜೀವನದ ಪ್ರಮುಖ ಮೈಲಿಗಲ್ಲುಗಳನ್ನು ಇಲ್ಲಿ ನೋಡೋಣ.
ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಖ್ಯಾತಿಯ ಚೇತೇಶ್ವರ್ ಪೂಜಾರ ಅವರು ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ(Cheteshwar Pujara Retirement). ಆವರು 2006ರಲ್ಲಿ ನಡೆದ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಮುನ್ನೆಲೆಗೆ ಬಂದರು.
2012ರಲ್ಲಿ ರಾಹುಲ್ ದ್ರಾವಿಡ್(Rahul Dhravid) ವಿದಾಯದ ನಂತರ ಭಾರತ ಟೆಸ್ಟ್ ಕ್ರಿಕೆಟ್ ತಂಡ ನಂಬರ್ 3 ಸ್ಥಾನವನ್ನು ಅವರಂತೆಯೇ ಭದ್ರವಾಗಿ ನೆಲೆಯೂರಿ ನಿಂತು ಕಾಪಾಡಿದ ಆಟಗಾರ. 2023ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಂತರ ಪೂಜಾರ ಭಾರತ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿಲ್ಲ ಮತ್ತು ಇಲ್ಲಿಯವರೆಗೆ ಭಾರತ ತಂಡ ನಂಬರ್ 3ನಲ್ಲಿ ಹೆಚ್ಚು ಕಡಿಮೆ 10 ಆಟಗಾರರನ್ನ ಬದಲಿಸಿದೆ. ಇದು ಪೂಜಾರ ಅವರು ತಂಡದಲ್ಲಿಲ್ಲದ ಕೊರತೆ ಸ್ಪಷ್ಟವಾಗಿ ಕಾಣುತ್ತಿದೆ.
ಪೂಜಾರ ಕುರಿತು ಪ್ರಮುಖ ಮಾಹಿತಿ
ಪೂರ್ಣ ಹೆಸರು : ಚೇತೇಶ್ವರ್ ಅರವಿಂದ್ ಪೂಜಾರ
ಜನನ: 25 ಜನವರಿ 1988 ರಾಜಕೋಟ್ ಗುಜರಾತ್
ಪ್ರತಿನಿಧಿಸಿದ ಪ್ರಮುಖ ತಂಡಗಳು: ಭಾರತ, ಸೌರಾಷ್ಟ್ರ (ರಣಜಿ), ಡರ್ಬಿಶೈರ್, ಯಾರ್ಕ್ ಶೈರ್ ಮತ್ತು ನಾಟಿಂಗ್ ಹ್ಯಾಮ್ ಶೈರ್ (ಕೌಂಟಿ) ಕೋಲ್ಕತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಐಪಿಎಲ್)
ಪ್ರಮುಖ ಸಾಧನೆಗಳು
• 2006ರ ಅಂಡರ್-19 ತಂಡದ ಗರಿಷ್ಠ ರನ್ ಸ್ಕೊರರ್
• ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪರ 7000 ರನ್
• 2013ರಲ್ಲಿ ಭಾರತ ಕ್ರಿಕೆಟ್ ತಂಡ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ದದ (4-0)ಸರಣಿ ವೈಟ್ ವಾಷ್ ಮಾಡಿ ಸರಣಿ ಗೆದ್ದ ತಂಡದ ಸದಸ್ಯ
• ಆಸ್ಟ್ರೇಲಿಯಾ ವಿರುದ್ಧ 2018-19 ಮೊದಲ ಬಾರಿಗೆ ಅವರದ್ದೇ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿದಾಗ 3 ಶತಕ ಸಹಿತ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ
• 2021ರ ಆಸ್ಟ್ರೇಲಿಯಾ ಟೂರ್ ನಲ್ಲಿ ಅನಾನುಭವಿ ಭಾರತ ತಂಡ ಬಲಿಷ್ಠ ಆಸೀಸ್ ವಿರುದ್ಧ ಮತ್ತೆ ಟೆಸ್ಟ್ ಸರಣಿ ಗೆಲ್ಲಲು ಪ್ರಮುಖ ಕಾರಣವಾದ ಆಟಗಾರ.
ಟೆಸ್ಟ್ ಕ್ರಿಕೆಟ್ನಲ್ಲಿ ಸಾಧನೆ
• 2010ರಲ್ಲಿ ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ವಿವಿಎಸ್. ಲಕ್ಷ್ಮಣ್ ಅವರು ಗಾಯಗೊಂಡ ಕಾರಣ ಅವರ ಬದಲಿಗೆ ತಂಡ ಸೇರಿದ್ದ ಪೂಜಾರ ಮೊದಲ ಪಂದ್ಯದಲ್ಲೇ 72 ರನ್ ಗಳಿಸಿ ತಮ್ಮ ತಾಳ್ಮೆಯ ಆಟಕ್ಕೆ ಹೆಸರಾದರು.
• 2012 ಇಂಗ್ಲೆಂಡ್ ವಿರುದ್ಧ ಮೊದಲ ದ್ವಿಶತಕ ಅಹಮದಾಬಾದ್ ನಲ್ಲಿ 206* ರನ್.
• 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ 204 ರನ್ ಹೈದ್ರಾಬಾದ್ ನಲ್ಲಿ
• 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ 202 ರನ್ ರಾಂಚಿಯಲ್ಲಿ ಮತ್ತು 11ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿದ ಸಾಧನೆ.
ವಿಶೇಷತೆಗಳು
• 103 ಟೆಸ್ಟ್ ಪಂದ್ಯ
• ಟೆಸ್ಟ್ ಕ್ರಿಕೆಟ್ ನಲ್ಲಿ 7000 ರನ್
• 19 ಶತಕ 35 ಅರ್ಧಶತಕ ಮತ್ತು 3 ದ್ವಿಶತಕ
• ಟೆಸ್ಟ್ ಪಂದ್ಯವೊಂದರಲ್ಲಿ ದೀರ್ಘಾವಧಿ ಇನ್ನಿಂಗ್ಸ್ (ಆಸ್ಟ್ರೇಲಿಯಾ ವಿರುದ್ಧ 202ರನ್ 525 ಎಸೆತ)
• ಫಾಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ 20000ಕ್ಕೂ ಹೆಚ್ಚು ರನ್
• ಮೊದಲ ಬಾರಿ ಭಾರತ ಗಾಬ್ಬದಲ್ಲಿ ಟೆಸ್ಟ್ ಪಂದ್ಯ ಗೆಲುವಿನ ಪ್ರಮುಖ ರೂವಾರಿ.
• ಫಾಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ 278 ಪಂದ್ಯ 457 ಇನ್ನಿಂಗ್ಸ್
• 21301 ರನ್ 66 ಶತಕ 51.98ರ ಸರಾಸರಿ
ಭಾರತ ಕ್ರಿಕೆಟ್ ತಂಡದ 2ನೇ ಗೋಡೆ ಎಂದೇ ಖ್ಯಾತಿ ಪಡೆದ ಆಟಗಾರ.
ಪೂಜಾರ ಬ್ಯಾಟಿಂಗ್ ಶೈಲಿಯೆಂದರೆ ಶತಕ ಗಳಿಸುವುದಕ್ಕಿಂತ ಹೆಚ್ಚು ತಾಳ್ಮೆ ಮತ್ತು ಸಂಯಮದ ಆಟ.
ಧನ್ಯವಾದಗಳು ಚೇತೇಶ್ವರ್ ಪೂಜಾರ ನಿಮ್ಮ ಅದ್ಬುತ ಟೆಸ್ಟ್ ಕೆರಿಯರ್ ಮತ್ತು ಕ್ರಿಕೆಟ್ ಜೀವನಕ್ಕೆ
ನಾನು ನೋಡಿದ ಅದ್ಬುತ ಟೆಸ್ಟ್ ಇನ್ನಿಂಗ್ಸ್ ಗಳಲ್ಲಿ ಆನೇಕವು ಚೇತೇಶ್ವರ್ ಪೂಜಾರ ಬ್ಯಾಟ್ ನಿಂದ ಬಂದಿವೆ.
