India GDP Growth: ಇತ್ತೀಚೆಗೆ, ಅಮೆರಿಕ(America) ಭಾರತದ(India) ಮೇಲೆ ಭಾರೀ ಸುಂಕಗಳನ್ನು ಹೇರುವ ಮೂಲಕ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡಿತ್ತು. ಅಷ್ಟೇ ಅಲ್ಲದೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್,(America President Donald Trump) ಭಾರತ ಒಂದು ‘ಡೆಡ್ ಎಕಾನಮಿ'(Dead Economy) ಎಂದು ತೀವ್ರವಾಗಿ ಟೀಕಿಸಿದ್ದರು. ಆದರೆ ಈಗ ಭಾರತ ಟ್ರಂಪ್ ಮಾತಿಗೆ ಉತ್ತರವನ್ನು ಮಾತಿನಿಂದಲ್ಲ, ಜಿಡಿಪಿ(Indian GDP Grouth) ಏರಿಕೆಯ ಮೂಲಕ ತೋರಿಸಿಕೊಟ್ಟಿದೆ.
ಇದನ್ನೂ ಓದಿ: ದಸರಾ ಉದ್ಘಾಟನೆ ವಿವಾದ: ಇದು ನಾಡ ಹಬ್ಬ, ಧಾರ್ಮಿಕ ಹಬ್ಬವಲ್ಲ ಎಂದ ಅಬ್ದುಲ್ ರಜಾಕ್
ಅಮೆರಿಕದ ಸುಂಕಗಳ(America Tariff) ಪರಿಣಾಮಗಳ ನಡುವೆಯೂ, ಭಾರತದ ಆರ್ಥಿಕತೆ(Indian Economy) ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ (2025-26) ಅದ್ಭುತವಾಗಿ ಬೆಳೆದಿದೆ. ಜೂನ್ನಲ್ಲಿ ಮುಗಿದ ಮೊದಲ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ 7.8% ಕ್ಕೆ ತಲುಪಿದೆ ಎಂದು ಕೇಂದ್ರ ಸರ್ಕಾರದ ಅಂಕಿ-ಅಂಶಗಳ ಇಲಾಖೆ (NSO) ತಿಳಿಸಿದೆ. ಕಳೆದ ಐದು ತ್ರೈಮಾಸಿಕಗಳಲ್ಲಿ ಇದು ಅತಿ ಹೆಚ್ಚು ಬೆಳವಣಿಗೆ ಕಂಡಿದೆ.
ಈ ಹೊಸ ಜಿಡಿಪಿ(GDP) ಅಂಕಿ-ಅಂಶಗಳು ಅಮೆರಿಕ(America) ಮತ್ತು ಟ್ರಂಪ್ ಗೆ(Donald Trump) ಒಂದು ದಿಟ್ಟ ಉತ್ತರ ನೀಡಿದಂತಿದೆ. ಕಳೆದ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ 7.4% ಇತ್ತು. ಅದಕ್ಕೂ ಹಿಂದಿನ ವರ್ಷ ಇದೇ ತ್ರೈಮಾಸಿಕದಲ್ಲಿ ಅದು 6.7% ಆಗಿತ್ತು ಭಾರತೀಯ ಉತ್ಪನ್ನಗಳ ಮೇಲೆ 50% ಸುಂಕ ವಿಧಿಸುವ ಟ್ರಂಪ್ ಅವರ ನಿರ್ಧಾರದ ಕೆಲವೇ ದಿನಗಳಲ್ಲಿ ಈ ಅಂಕಿ-ಅಂಶಗಳು ಹೊರಬಿದ್ದಿರುವುದು ಗಮನಾರ್ಹ. ಟ್ರಂಪ್ ಅವರು ಭಾರತದ ಆರ್ಥಿಕತೆಯನ್ನು ‘ಡೆಡ್ ಎಕಾನಮಿ’ ಎಂದು ಕರೆದದ್ದು ರಾಜಕೀಯ ಲಾಭಕ್ಕಾಗಿ ನೀಡಿದ ಆಧಾರರಹಿತ ಹೇಳಿಕೆ ಎಂದು ಭಾರತ ಸಾಬೀತುಪಡಿಸಿದೆ.
ಸ್ಥಿರ ಬೆಲೆಗಳ ಆಧಾರದ ಮೇಲೆ, ಈ ವರ್ಷ ಏಪ್ರಿಲ್ನಿಂದ ಜೂನ್ವರೆಗೆ ದೇಶದ ನಿಜವಾದ ಜಿಡಿಪಿ ₹47.89 ಲಕ್ಷ ಕೋಟಿ ಇತ್ತು ಎಂದು NSO ಹೇಳಿದೆ. ಇದು ಕಳೆದ ವರ್ಷ ಇದೇ ಅವಧಿಯಲ್ಲಿ ₹44.42 ಲಕ್ಷ ಕೋಟಿ ಇತ್ತು, ಇದೀಗ 7.8% ಬೆಳವಣಿಗೆಯನ್ನು ತೋರಿಸುತ್ತಿದೆ. ಪ್ರಸ್ತುತ ಬೆಲೆಗಳ ಆಧಾರದ ಮೇಲೆ ನಾಮಮಾತ್ರ ಜಿಡಿಪಿ ₹86.05 ಲಕ್ಷ ಕೋಟಿಯಾಗಿದ್ದು, ಕಳೆದ ವರ್ಷದ ₹79.08 ಲಕ್ಷ ಕೋಟಿಗೆ ಹೋಲಿಸಿದರೆ 8.8% ರಷ್ಟು ಬೆಳವಣಿಗೆ ದಾಖಲಾಗಿದೆ.
ಕೃಷಿ ವಲಯದಲ್ಲಿ(Agriculture Sector) 3.7%, ಉತ್ಪಾದನಾ ವಲಯದಲ್ಲಿ 7.7%, ಮತ್ತು ಸೇವಾ ವಲಯದಲ್ಲಿ 9.3% ಬೆಳವಣಿಗೆ ಕಂಡುಬಂದಿದೆ. ಹಣಕಾಸು, ರಿಯಲ್ ಎಸ್ಟೇಟ್, ಮತ್ತು ವ್ಯತ್ತಿವರ ಸೇವಾ ವಲಯಗಳು 9.5% ರಷ್ಟು ಬೆಳವಣಿಗೆ ಸಾಧಿಸಿವೆ. ಈ ಬೆಳವಣಿಗೆಗಳು ಭಾರತೀಯ ಆರ್ಥಿಕತೆ ಬಲವಾಗಿದೆ ಎಂಬುದನ್ನು ಜಗತ್ತಿಗೆ ತೋರಿಸಿವೆ.
ಇದನ್ನೂ ಓದಿ: ಉತ್ತರ ಭಾರತ ವಿಶ್ವದ ಅತ್ಯಂತ ಕಲುಷಿತ ಪ್ರದೇಶ: ಭಾರತದಲ್ಲಿ ವಾಯುಮಾಲಿನ್ಯ ಹೆಚ್ಚಳ- ಹೊಸ ವರದಿ
ಭಾರತದ ಆರ್ಥಿಕತೆಯ ನಿಜವಾದ ಶಕ್ತಿ ದೇಶೀಯ ಬೇಡಿಕೆ
ಭಾರತವು(India) 7.8% ರಷ್ಟು ಬಲವಾದ ಜಿಡಿಪಿ(GDP) ಬೆಳವಣಿಗೆಯನ್ನು ಸಾಧಿಸಿರುವುದು ಕೇವಲ ಆಶ್ಚರ್ಯಕರ ಸಂಗತಿಯಲ್ಲ. ಇದು ಭಾರತದ ಆರ್ಥಿಕತೆಯ ಮೂಲ ಶಕ್ತಿಯನ್ನು ತೋರಿಸುತ್ತದೆ. ಅಮೆರಿಕದ ಸುಂಕಗಳು ಮತ್ತು ಜಾಗತಿಕ ಆರ್ಥಿಕ ಒತ್ತಡಗಳ ಹೊರತಾಗಿಯೂ ಈ ಬೆಳವಣಿಗೆ ಸಾಧ್ಯವಾಗಿದೆ. ಇದಕ್ಕೆ ಮುಖ್ಯ ಕಾರಣ, ಭಾರತವು ರಫ್ತು, ಆಧಾರಿತ ಆರ್ಥಿಕತೆಯಾಗಿಲ್ಲದಿರುವುದು.
ನಮ್ಮ ದೇಶದ ಜಿಡಿಪಿಯಲ್ಲಿ(GDP) ಶೇ.60 ಕ್ಕಿಂತ ಹೆಚ್ಚು ಪಾಲು ದೇಶೀಯ ಬೇಡಿಕೆ, ಅಂದರೆ ನಮ್ಮ ದೇಶದ ಜನರ ಬಳಕೆಯಿಂದಲೇ ಬರುತ್ತದೆ. ಈ ಕಾರಣದಿಂದಾಗಿ, ವಿದೇಶಿ ವಹಿವಾಟಿನ ಮೇಲೆ ಉಂಟಾಗುವ ಸಮಸ್ಯೆಗಳು ನಮ್ಮ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುವುದಿಲ್ಲ.
