Don’t argue just say OK: ವಿವಾದ ಮತ್ತು ಸಂವಾದ — ಇವೆರೆಡರ ನಡುವೆ ಒಂದು ಸೂಕ್ಷ್ಮ ಭೇದವಿದೆ. ಕೆಲವೊಮ್ಮೆ, ತರ್ಕ ಮಾಡುವ ಬದಲು ಸುಮ್ಮನೆ “ಓಕೆ” ಎಂದು ಹೇಳಿ ಮುಂದುವರೆಯುವುದು ಶ್ರೇಯಸ್ಕರ. ಇದು ಸಮಸ್ಯೆಯನ್ನು ತಕ್ಷಣ ಮುಕ್ತಾಯಗೊಳಿಸಲು ಸಹಕಾರಿ ಎನ್ನುವುದು ನಿಜ. ಆದರೆ, ಎಲ್ಲ ಸಂದರ್ಭದಲ್ಲಿ “ಓಕೆ” ಎನ್ನುವುದು ಸಮರ್ಥ ಪರಿಹಾರವಲ್ಲ.
ನಿಜವಾದ ಶಾಂತಿ ಎಂದರೆ ಮನಸ್ಸಿನಲ್ಲಿ ನೆಮ್ಮದಿ ಇರಬೇಕು. ಮಾತುಕತೆಗಳಿಂದ ಬರುವ ಸ್ಪಷ್ಟತೆ ಮತ್ತು ಅರ್ಥದಾರ್ಢ್ಯವೇ ಪರಸ್ಪರ ಬಾಂಧವ್ಯವನ್ನು ಬಲಪಡಿಸಬಹುದು. ಆದರೆ ಅನಗತ್ಯ ವಾದವಿವಾದಗಳಲ್ಲಿ ಸಿಕ್ಕಿಹಾಕಿಕೊಳ್ಳುವುದು ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
“ಓಕೆ” ಎಂದರೆ ಏಕಪಕ್ಷೀಯ ನಿರ್ಧಾರವನ್ನೊಪ್ಪಿಕೊಳ್ಳುವುದಲ್ಲ. ಅದು ಕೆಲವೊಮ್ಮೆ ತಾತ್ಕಾಲಿಕ ಶಾಂತಿಗೆ ದಾರಿ ಮಾಡಿಕೊಡಬಹುದು. ಆದರೆ, ಈ ಮಾತು ಭಾವನೆಗಳನ್ನು ಮುಚ್ಚಿಹಾಕುವುದಕ್ಕೂ, ಅಸಮಾಧಾನವನ್ನು ಒಳಗೇ ಕಟ್ಟಿ ಹಾಕುವುದಕ್ಕೂ ಕಾರಣವಾಗಬಾರದು.
ಇದನ್ನೂ ಓದಿ: ಗೌರೀ-ಗಣೇಶ ಪೂಜೆಯ ಮಹತ್ವ: ಮಣ್ಣಿನ ಪ್ರತಿಮೆಯಲ್ಲಿ ಪಂಚಭೂತಗಳ ಅನುಗ್ರಹ ಯಾಕೆ?
ಸಂಬಂಧಗಳು ಆರೋಗ್ಯಕರವಾಗಿ ಮುಂದುವರೆಯಬೇಕಾದರೆ, ಪರಸ್ಪರ ಪ್ರಾಮಾಣಿಕ ಸಂಭಾಷಣೆ ಅತ್ಯಗತ್ಯ. ಪ್ರತಿಯೊಬ್ಬರೂ ತಮ್ಮ ಭಾವನೆಗಳನ್ನು ಮನಪೂರ್ವಕವಾಗಿ ಹಂಚಿಕೊಳ್ಳಲು ಅವಕಾಶ ಕೊಡಬೇಕು. ವಾದವಿವಾದ ಎದುರಾದಾಗ, ತಾಳ್ಮೆಯಿಂದ ಕೇಳುವುದು ಮತ್ತು ಸಮರ್ಥವಾಗಿ ಉತ್ತರಿಸುವುದು ಉತ್ತಮ ಮಾರ್ಗ.
ಎಲ್ಲ ಸಾರಿ ಸಾರಿ ವಾದ ಮಾಡ್ತಾ ಕುಳಿತ್ಕೊಂಡು ಏನು ಪ್ರಯೋಜನ? ಒಂದೇ ವಿಷಯಕ್ಕೆ ಇಣುಕಾಡ್ತಾ, ತಿರುಗಾಡ್ತಾ ಕೂತ್ರೆ ಸಮಸ್ಯೆ ಬಗೆಹರಿಯೋದು? ಅಷ್ಟಕ್ಕೆ ಸುಮ್ಮನೆ “ಓಕೆ” ಅಂದ್ರೆ, ಮನಸ್ಸಿಗೆ ಶಾಂತಿ!
ಆದ್ರೆ ಅದೆಲ್ಲಾ ಎಲ್ಲ ಸಂದರ್ಭಕ್ಕೂ ಸರಿಯಾಗೋದು ಅಂತಲ್ಲ. ಕೆಲ್ಸಕ್ಕೇ ತಟ್ಟೋ ಸಮಸ್ಯೆಗಳೋ, ಸಂಬಂಧಗಳಲ್ಲಿ ಕಲಹಗಳೋ — “ಓಕೆ” ಅನ್ನೋದು ನಿಜಾನಂದರೆ ತಾತ್ಕಾಲಿಕ ದಾರಿ.
ಏನೋ ಸಲಹೆ ಕೊಡ್ತಾರೆ, ತಮಗೂ ತಕ್ಕಂಥ ಕಾರಣ ಇರಬಹುದು. ಅದನ್ನ ಕೇಳೋದು, ಅರ್ಥ ಮಾಡ್ಕೊಳ್ಳೋದು ಎಲ್ಲರ ಜವಾಬ್ದಾರಿ. ಹೀಗೆ ಮುಗಿಸೋದು ಬದಲು, ಒಂದ್ ಕ್ಷಣ ತಾಳ್ಮೆ ಇಟ್ಟು ಮಾತಾಡಿದ್ರೆ, ಎರಡೂ ಕಡೆ ನೆಮ್ಮದಿಯೇ!
ಆದ್ರೆ ಮಾತು ಅಡ್ಡ ಬಂದ್ರೆ, ಏನೂ ಸುಧಾರಿಸೋದು ಸಾಧ್ಯವಿಲ್ಲ ಅಲ್ವಾ? ಕೆಲವೊಮ್ಮೆ “ಓಕೆ” ಅನ್ನೋದು ಶ್ರೇಯಸ್ಕರ. ಅದು ದೊಡ್ಡ ಜಗಳವನ್ನ ತಪ್ಪಿಸಬಲ್ಲದು. ಮನಸ್ಸು ಚೂರು ಸಮಾಧಾನ ಪಡೀತು.
ಇದನ್ನೂ ಓದಿ: ಗೀತಾಸಾರ: ಒತ್ತಡ ರಹಿತ ಬದುಕು, ಯಶಸ್ವಿ ವೃತ್ತಿ ಜೀವನಕ್ಕೆ ದಾರಿ
ಆದರೆ ಈ “ಓಕೆ” ಜಡತೆಸತ್ತ, ಅಸಹಾಯಕ “ಓಕೆ” ಆಗಬಾರದು. ಹೃದಯದಿಂದ ಅರ್ಥ ಮಾಡಿಕೊಂಡು, ಪರಸ್ಪರ ಗೌರವದಿಂದ ಒಪ್ಪಿಕೊಂಡಾಗ “ಓಕೆ” ಅಂದ ಮೇಲೆ ಮನಸ್ಸು ಹಗುರ ಆಗ್ತದೆ.!
ಆದ್ದರಿಂದ, “ಡೋಂಟ್ ಆರ್ಗ್ಯೂ, ಜಸ್ಟ್ ಸೇ, ಓಕೆ..!!” ಎಂಬುದು ಯಾವಾಗಲೂ ಹಾದಿ ಪರಿಹಾರವಲ್ಲ. ಅಗತ್ಯವಿದ್ದಾಗ ಮಾತಾಡಿ, ಅರ್ಥಮಾಡಿಕೊಳ್ಳಿ, ಮತ್ತು ಸಮಸ್ಯೆಗಳಿಗೆ ಶಾಂತಿಯುತವಾಗಿ ಪರಿಹಾರ ಹುಡುಕಿ.
ನಿಜವಾದ “ಓಕೆ” ಎಂದರೆ ಮನಸ್ಸಿನಿಂದ ಒಪ್ಪಿಕೊಳ್ಳುವ ಸಮ್ಮತಿ. ಯಾರು ಹೇಳಿದ್ರೂ ಕೇಳಿದ್ರೂ, ತಾಳ್ಮೆ ಇಟ್ಟು ಕೇಳಿ, ಅರ್ಥ ಮಾಡ್ಕೊಳ್ಳಿ. ಅಲ್ಲಿ “ಓಕೆ” ಅನ್ನೋದು ಪ್ರಾಮಾಣಿಕ ಆಗಿರಬೇಕು. ಆಗ ಜೀವನವೂ ಸ್ವಚ್ಛ, ನಿರಾಳ ಮತ್ತು ಸಮಾಧಾನಕರ.
ಹೌದು, ಎಲ್ಲದರಲ್ಲೂ ಜಗಳ ಬೇಡ. “ಡೋಂಟ್ ಆರ್ಗ್ಯೂ, ಜಸ್ಟ್ ಸೇ, ಓಕೆ..!!” — ಆದರೆ ಮನದಾಳದಲ್ಲಿ ನೆಮ್ಮದಿ ಇರಬೇಕಷ್ಟೆ
ಲಿಖಿತ್ ಹೊನ್ನಾಪುರ

