ಬೆಂಗಳೂರು: ಈ ಬಾರಿಯ ಮೈಸೂರು ದಸರಾವನ್ನು ಉದ್ಘಾಟಿಸಲು ಕನ್ನಡ ಬುಕರ್ ಪ್ರಶಸ್ತಿ(Booker Prize) ತಂದುಕೊಟ್ಟ ಲೇಖಕಿ ಬಾನು ಮುಸ್ತಾಕ್(Bhanu Mushtaq) ಅವರನ್ನು ಸರ್ಕಾರ ಆಯ್ಕೆ ಮಾಡಿದೆ. ಆದರೆ, ಈ ನಿರ್ಧಾರಕ್ಕೆ ಬಿಜೆಪಿ ಮತ್ತು ಕೆಲವು ಹಿಂದೂ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದಸರಾವನ್ನು(Dasara) ಒಬ್ಬ ಹಿಂದೂ ವ್ಯಕ್ತಿಯೇ ಉದ್ಘಾಟಿಸಬೇಕು ಎಂದು ಆಗ್ರಹಿಸಿವೆ. ಆದರೆ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್(Abdul Razzaq) ಬಾನು ಮುಸ್ತಾಕ್(Bhanu Mushtaq) ಅವರ ಪರ ನಿಂತಿದ್ದಾರೆ.
ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಮುಸ್ಲಿಂ ಮುಖಂಡರು, ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್, ದಸರಾ ಕೇವಲ ಧಾರ್ಮಿಕ ಹಬ್ಬವಲ್ಲ, ಇದು ನಾಡಹಬ್ಬ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಉತ್ತರ ಭಾರತ ವಿಶ್ವದ ಅತ್ಯಂತ ಕಲುಷಿತ ಪ್ರದೇಶ: ಭಾರತದಲ್ಲಿ ವಾಯುಮಾಲಿನ್ಯ ಹೆಚ್ಚಳ- ಹೊಸ ವರದಿ
ಅಬ್ದುಲ್ ರಜಾಕ್(Abdul Razzaq) ಅವರು ಈ ಕುರಿತು ಕೆಲವು ಐತಿಹಾಸಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ದಸರಾಕ್ಕೆ ಈ ಹಿಂದಿನಿಂದಲೂ ಮುಸ್ಲಿಮರ ಕೊಡುಗೆ ಇದೆ. 1442ರಲ್ಲಿ ಮೊದಲ ಬಾರಿಗೆ ದಸರಾ ಬಗ್ಗೆ ದಾಖಲಿಸಿದವರು ಮುಸ್ಲಿಮರು.
ಬಹು ಹಿಂದಿನಿಂದಲೂ ಅಂಬಾರಿ ಕಟ್ಟುವವರು ಮುಸ್ಲಿಮರೇ. ದಸರಾ ಆನೆಗಳಿಗೆ ಅಂಬಾರಿ ಕಟ್ಟುವ ಕೆಲಸವನ್ನು ಇಂದಿಗೂ ಮುಸ್ಲಿಂ ಬಾಂಧವರು ಮಾಡುತ್ತಿದ್ದಾರೆ. ಇನ್ನು ರಾಜರ ಕಾಲದಲ್ಲಿ ಯುದ್ಧಕ್ಕೆ ಹೊರಡುವ ಮೊದಲು ಇಮಾಮ್ ದರ್ಗಾಕ್ಕೆ ಬಂದು ಆಶೀರ್ವಾದ ಪಡೆಯುವ ಪದ್ಧತಿ ಇತ್ತು. ದಸರಾಕ್ಕೂ ಮೊದಲು ಆನೆಗಳು ದರ್ಗಾಕ್ಕೆ ಬಂದು ಹೋಗುವುದು ಒಂದು ಸಂಪ್ರದಾಯ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸೆಪ್ಟೆಂಬರ್ ಆರಂಭದಲ್ಲೇ ಜೇಬಿಗೆ ಕತ್ತರಿ: LPG ದರ, ಎಸ್ಬಿಐ ಕಾರ್ಡ್, ಎಟಿಎಂ ಶುಲ್ಕ ಹೆಚ್ಚಳ
ಬಾನು ಮುಸ್ತಾಕ್(Bhanu Mushtaq) ಅವರನ್ನು “ಕನ್ನಡಕ್ಕೆ ಬೂಕರ್ ಪ್ರಶಸ್ತಿ(Booker Prize) ತಂದುಕೊಟ್ಟ ಹೆಮ್ಮೆಯ ಕನ್ನಡತಿ” ಎಂದು ಹಾಡಿ ಹೊಗಳಿದ ರಜಾಕ್, “ಅಂತಹ ಅಂತರಾಷ್ಟ್ರೀಯ ಮಟ್ಟದ ಗೌರವ ತಂದ ಮಹಿಳೆಯನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವುದು ಸರಿಯಾದ ನಿರ್ಧಾರ” ಎಂದರು ಬಿಜೆಪಿ ಮುಖಂಡ ಪ್ರತಾಪ್ ಸಿಂಹ ಅವರು ಸುದ್ದಿಯಲ್ಲಿ ಇರಬೇಕೆಂದು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ವಿರುದ್ಧ ರಜಾಕ್ ಕಿಡಿಕಾರಿದ್ದಾರೆ.
ಇನ್ನೋರ್ವ ಮುಖಂಡ ಹಜರತ್ ಮೌಲಾನಾ ಡಾ. ಮಕ್ಯೂದ್ ಇಮ್ರಾನ್ ಮಾತನಾಡಿ, ಬಾನು ಮುಸ್ತಾಕ್ ದಸರಾ ಉದ್ಘಾಟನೆಗೆ ಹೋಗಬಾರದು ಎಂದು ಹೇಳುವುದು ತಪ್ಪು ಇದು ಯಾವುದೇ ಧಾರ್ಮಿಕ ನಿಯಮ ಉಲ್ಲಂಘನೆಯಲ್ಲ ಎಂದು ಅವರು ಸ್ಪಷ್ಟಪಡಿಸಿದರು. “ಇಲ್ಲಿ ಯಾರು ಬೇಕಾದರೂ ಮಸೀದಿಗೆ ಹೋಗಬಹುದು, ದೇವಸ್ಥಾನಕ್ಕೆ ಹೋಗಬಹುದು. ಅದರಿಂದ ಅವರ ಧರ್ಮ ಬದಲಾಗುವುದಿಲ್ಲ. ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಸ್ತಾಕ್ ಅವರನ್ನು ಆಹ್ವಾನಿಸಿದ್ದಾರೆ. ಹೋಗುವುದು, ಬಿಡುವುದು ಅವರ ವೈಯಕ್ತಿಕ ಇಷ್ಟ” ಎಂದು ಹೇಳಿದರು.
ಆದರೆ ಭಾನು ಮುಸ್ತಾಕ್(Bhanu Mushtaq)!ಅವರ ಆಯ್ಕೆಯ ಬಗ್ಗೆ ಮುಸ್ಲಿಂ ಮುಖಂಡರಾದ ಸಾಧಿಕ್ ಪಾಷಾ ಅಸಮಾಧಾನ ಹೊರ ಹಾಕಿದ್ದಾರೆ. ಭಾನು ಮುಸ್ತಾಕ್ ಅವರ ಮೇಲೆ ಫತ್ವಾ ಹೊರಡಿಸದಂತೆ ಮುಸ್ಲಿಂ ಮೌಲ್ವಿಗಳ ಮೇಲೆ ಸಿದ್ದರಾಮಯ್ಯ, ಡಿ ಸಿ ಎಂ ಡಿ ಕೆ ಶಿವಕುಮಾರ್, ಜಮೀರ್ ಅಹಮದ್ ಒತ್ತಡ ಏರುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ.
ಒಂದು ವೇಳೆ ನಮ್ಮ ಧರ್ಮದ ವಿಚಾರದಲ್ಲಿ ಬೇರೆ ಯಾವುದೇ ಧರ್ಮದ ವ್ಯಕ್ತಿ ಆಡಳಿತ ಮಾಡಲು ಬಂದರೆ ಅಂತಹ ಸರ್ಕಾರವೇ ನಮಗೆ ಬೇಡ ಎಂದು ಖಾಸಗಿ ಸುದ್ದಿ ವಾಹಿನಿಯಲ್ಲಿ ಹೇಳಿಕೆಯನ್ನು ನೀಡಿದ್ದಾರೆ.
