New financial Rules on September: ನಿಮ್ಮ ಫೋನ್ ಬಿಲ್, ನಿಮ್ಮ ಗ್ಯಾಸ್ ಬಿಲ್, ಅಥವಾ ತಿಂಗಳ ಖರ್ಚುಗಳ ಲೆಕ್ಕ ಮಾಡುವಾಗ ಇನ್ನು ಮುಂದೆ ಕ್ಯಾಲ್ಕುಲೇಟರ್ ಅನ್ನು ಕೈಯಲ್ಲಿ ಹಿಡಿದುಕೊಳ್ಳಿ. ಏಕೆಂದರೆ ಸೆಪ್ಟೆಂಬರ್ 1ರಿಂದ(September 1) ನಿಮ್ಮ ಜೇಬಿನ ಮೇಲೆಯೇ ನೇರ ಪರಿಣಾಮ ಬೀರುವ ಕೆಲವು ಹೊಸ ನಿಯಮಗಳು ಜಾರಿಯಾಗುತ್ತಿವೆ.(New financial Rules on September) ಇವು ಬರೀ ನಿಯಮಗಳಲ್ಲ, ಬದಲಾಗಿ ನಮ್ಮ ದಿನನಿತ್ಯದ ಬದುಕಿನ ಭಾಗವಾಗಿವೆ. ಸೆಪ್ಟೆಂಬರ್ ತಿಂಗಳಲ್ಲಿ ನಿಮ್ಮ ಹಣಕಾಸು ನಿರ್ಧಾರಗಳನ್ನು ಹೇಗೆ ಬದಲಾಗುತ್ತವೆ ಎಂಬುದನ್ನು ತಿಳಿದುಕೊಳ್ಳಲು ನೀವು ರೆಡಿಯಾ?.
ಸೆಪ್ಟೆಂಬರ್ 1ರಿಂದ ದೇಶಾದ್ಯಂತ ಹಣಕಾಸು ನಿಯಮಗಳಲ್ಲಿ ಹಲವು ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳು ನಿಮ್ಮ ದಿನನಿತ್ಯದ ಖರ್ಚುಗಳು, ಮನೆ ಬಜೆಟ್ ಮತ್ತು ಹೂಡಿಕೆಗಳ ಮೇಲೆ ನೇರ ಪರಿಣಾಮ ಬೀರಲಿವೆ.
ಇದನ್ನೂ ಓದಿ: ಹೊಸ ಮನೆ ಕನಸು ನನಸು ಮಾಡಿಕೊಳ್ಳಿ!: ಬ್ಯಾಂಕ್ ಆಫ್ ಬರೋಡಾದಿಂದ ಕಡಿಮೆ ಬಡ್ಡಿಗೆ ಲೋನ್
ಬೆಳ್ಳಿಗೂ ಹಾಲ್ಮಾರ್ಕ್ ಕಡ್ಡಾಯ
ಈಗಾಗಲೇ ಬಂಗಾರದಲ್ಲಿ ಹಾಲ್ ಮಾರ್ಕ್ ಕಡ್ಡಾಯಗೊಳಿಸಲಾಗಿದೆ ಅದೇ ರೀತಿ ಇದೀಗ, ಕೇಂದ್ರ ಸರ್ಕಾರ ಬೆಳ್ಳಿಗೂ ಕಡ್ಡಾಯವಾಗಿ ಹಾಲ್ಮಾರ್ಕ್ (Hallmark Of Silver) ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಈ ಹೊಸ ನಿಯಮದಿಂದ ಬೆಳ್ಳಿಯ ಶುದ್ಧತೆ ಹಾಗೂ ಬೆಲೆ ಮತ್ತು ವ್ಯಾಪಾರದಲ್ಲಿ ಪಾರದರ್ಶಕತೆ ಹೆಚ್ಚಾಗಲಿದೆ. ಇದರಿಂದ ಬೆಳ್ಳಿಯ ಬೆಲೆಗಳಲ್ಲಿ ಸ್ವಲ್ಪ ಬದಲಾವಣೆ ಆಗಬಹುದು. ಹಾಗಾಗಿ, ಬೆಳ್ಳಿ ಆಭರಣ ಅಥವಾ ಬೆಳ್ಳಿ ವಸ್ತುಗಳನ್ನು ಖರೀದಿಸುವವರು ಈ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.
ಎಸ್ಬಿಐ ಕಾರ್ಡ್ ನಿಯಮಗಳಲ್ಲಿ ಬದಲಾವಣೆ
ಎಸ್ಬಿಐ ಕಾರ್ಡ್(SBI Card) ಬಳಕೆದಾರರು ಸೆಪ್ಟೆಂಬರ್ 1ರಿಂದ ಹೊಸ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಮುಖ್ಯವಾಗಿ, ಆಟೋ-ಡೆಬಿಟ್ ವಿಫಲವಾದರೆ 2% ಶುಲ್ಕ ವಿಧಿಸಲಾಗುವುದು. ಅಂತರರಾಷ್ಟ್ರೀಯ ವ್ಯವಹಾರಗಳಿಗೆ ಹೆಚ್ಚುವರಿ ಶುಲ್ಕಗಳು ಇರುತ್ತವೆ. ಇನ್ನು ಹೆಚ್ಚಿನದಾಗಿ ಇಂಧನ ಖರೀದಿ ಅಥವಾ ಆನ್ಲೈನ್ ಖರೀದಿಗಳ(Online Purchase) ಮೇಲೆ ಹೆಚ್ಚಿನ ಶುಲ್ಕಗಳು ಬೀಳುವ ಸಾಧ್ಯತೆ ಇದೆ. ಅಲ್ಲದೆ, ನಿಮ್ಮ ರಿವಾರ್ಡ್ ಪಾಯಿಂಟ್ಗಳ ಮೌಲ್ಯ ಕಡಿಮೆಯಾಗಬಹುದು. ಗ್ರಾಹಕರು ತಮ್ಮ ಖರ್ಚುಗಳನ್ನು ಜಾಗರೂಕತೆಯಿಂದ ನಿರ್ವಹಿಸುವುದು ಅಗತ್ಯ.
ಇದನ್ನೂ ಓದಿ: ಅಮುಲ್ ಗರ್ಲ್: ಬರಿಯ ಜಾಹೀರಾತು ಮಗುವಲ್ಲ, ಭಾರತದ ಹೃದಯ ಗೆದ್ದ ಕಥೆ
LPG ಬೆಲೆಗಳಲ್ಲಿ ಬದಲಾವಣೆ
ಪ್ರತಿ ತಿಂಗಳ ಮೊದಲ ದಿನದಂತೆ, ಎಲ್ಪಿಜಿ ಸಿಲಿಂಡರ್(LPG Cylinder) ಬೆಲೆಗಳಲ್ಲಿ ಬದಲಾವಣೆ ಪ್ರಕಟವಾಗುತ್ತದೆ. ಜಾಗತಿಕ ಕಚ್ಚಾ ತೈಲ ದರ ಮತ್ತು ಕಂಪನಿಗಳ ಲೆಕ್ಕಾಚಾರದ ಆಧಾರದ ಮೇಲೆ ಬೆಲೆ ಏರಿಕೆ ಅಥವಾ ಇಳಿಕೆಯಾಗಬಹುದು. ಈ ಬದಲಾವಣೆ ನೇರವಾಗಿ ಮನೆಯ ಬಜೆಟ್ ಮೇಲೆ ಪರಿಣಾಮ ಬೀರುತ್ತದೆ.
ಎಟಿಎಂ ಶುಲ್ಕಗಳು
ಕೆಲವು ಬ್ಯಾಂಕುಗಳು ಎಟಿಎಂ(ATM Charges) ಬಳಕೆಯ ಮೇಲೆ ಹೊಸ ನಿಯಮಗಳನ್ನು ಜಾರಿಗೆ ತರಲಿವೆ. ನಿಗದಿತ ಮಾಸಿಕ ಮಿತಿಯನ್ನು ಮೀರಿ ಹಣ ತೆಗೆದುಕೊಂಡರೆ ಹೆಚ್ಚುವರಿ ಶುಲ್ಕಗಳು ವಿಧಿಸಬಹುದು. ಡಿಜಿಟಲ್ ಹಣಕಾಸು ವ್ಯವಹಾರವನ್ನು ಪ್ರೋತ್ಸಾಹಿಸಲು ಮತ್ತು ಅನಗತ್ಯ ಎಟಿಎಂ ಬಳಕೆ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
ಎಫ್ಡಿ ಬಡ್ಡಿದರಗಳಲ್ಲಿ ಬದಲಾವಣೆ
ಕೆಲವು ಬ್ಯಾಂಕುಗಳು ಎಫ್ಡಿ (Fixed Deposit) ಬಡ್ಡಿದರಗಳನ್ನು ಪರಿಶೀಲಿಸುತ್ತಿವೆ. ಪ್ರಸ್ತುತ, ಹೆಚ್ಚಿನ ಬ್ಯಾಂಕುಗಳು 6.5 ರಿಂದ 75 ರಷ್ಟು ಬಡ್ಡಿದರವನ್ನು ನೀಡುತ್ತಿವೆ. ಆದರೆ, ಈ ಬಡ್ಡಿದರಗಳು ಕಡಿಮೆಯಾಗಬಹುದು ಎಂದು ಮಾರುಕಟ್ಟೆ ತಜ್ಞರು ಊಹಿಸಿದ್ದಾರೆ. ಹಾಗಾಗಿ, ಎಫ್ಡಿಗಳಲ್ಲಿ(Fixed Deposit) ಹೂಡಿಕೆ ಮಾಡಲು ಯೋಚಿಸುತ್ತಿರುವವರು ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.
ಈ ಎಲ್ಲಾ ನಿಯಮ ಬದಲಾವಣೆಗಳು ನೇರವಾಗಿ ಗ್ರಾಹಕರ ಜೇಬಿನ ಮೇಲೆ ಪರಿಣಾಮ ಬೀರುತ್ತವೆ. ಹೂಡಿಕೆಯ ನಿರ್ಧಾರಗಳು, ಮನೆ ಖರ್ಚು ಅಥವಾ ಬ್ಯಾಂಕಿಂಗ್ ವ್ಯವಹಾರಗಳು ಸೇರಿದಂತೆ ಎಲ್ಲದರ ಮೇಲೂ ಇದರ ಪರಿಣಾಮ ಇರುತ್ತದೆ. ಯಾವುದೇ ಪ್ರಮುಖ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಬ್ಯಾಂಕುಗಳು ಮತ್ತು ತೈಲ ಕಂಪನಿಗಳ ಹೊಸ ಪ್ರಕಟಣೆಗಳನ್ನು ಗಮನಿಸಲು ಮತ್ತು ಆರ್ಥಿಕ ತಜ್ಞರನ್ನು ಸಂಪರ್ಕಿಸಲು ಸಲಹೆ ನೀಡಲಾಗಿದೆ.
