ಹೀಗೆ ಒಮ್ಮೆ ಮನೆಯಲ್ಲಿ ಟಿವಿ ನೋಡುತ್ತಾ ಕುಳಿತಿದ್ದಾಗ, ಮಧ್ಯದಲ್ಲಿ ಅಡ್ವರ್ಟೈಸ್ಮೆಂಟ್(Advertisement) ಒಂದು ಪ್ರಸಾರವಾಗುತ್ತಿತ್ತು. ನೀಲಿ ಕೂದಲಿನ ಪೋಲ್ಕಾ ಡಾಟ್ ಫ್ರಾಕ್ ಹಾಕಿದ ಒಂದು ಮುದ್ದು ಹುಡುಗಿ ಕಾಣಿಸಿಕೊಂಡಳು. ಆಕೆಯನ್ನು ನಾನು ನನ್ನ ಬಾಲ್ಯದಿಂದಲೂ ನೋಡುತ್ತಿದ್ದೆನೆ. ಅವಳು ಬೇರೆ ಯಾರು ಅಲ್ಲ ಅವಳೇ ಅಮೂಲ್ ಗರ್ಲ್(Amul Girl).
ಆಗಲೇ ನನಗನಿಸಿದ್ದು ಈ ಪುಟ್ಟ ಹುಡುಗಿ ಬರಿಯ ಬಟರ್ ಜಾಹಿರಾತು ಮಾತ್ರವಲ್ಲ ಅವಳು ನಮ್ಮೆಲ್ಲರ ಬಾಲ್ಯದ ಒಂದು ಭಾಗ ಅಂತ. 1966 ರಿಂದ ಇವತ್ತಿನವರೆಗೂ ಆಕೆ ಜಾಹೀರಾತು ಫಲಕಗಳಲ್ಲಿ, ಟಿವಿ ಗಳಲ್ಲಿ, ನಮ್ಮ ಮೊಬೈಲ್ಗಳಲ್ಲಿ ನಮ್ಮ ಜೊತೆಗಿದ್ದಾಳೆ. ಅವಳ ಮುಖ ನೋಡಿದ ತಕ್ಷಣ ಒಂದು ನಗು ಬರುತ್ತದೆ ಆದರೆ ಅವಳ ಆ ಮುಗ್ಧನಗುವಿನ ಹಿಂದೆ ಒಂದು ದೊಡ್ಡ ಕಥಯೇ ಇದೆ.
ಸಣ್ಣ ಐಡಿಯಾದಿಂದ, ಒಂದು ದಂತಕಥೆ ಹುಟ್ಟಿತು
1960ರ ದಶಕದಲ್ಲಿ ಭಾರತದ ಜಾಹೀರಾತು(Advertisement) ಲೋಕದಲ್ಲಿ ಪೋಲ್ಸನ್ ಬಟರ್ ಗರ್ಲ್ ಅನ್ನುವ ಬೃಹತ್ ಕಂಪನಿಯೊಂದಿತ್ತು. ಆಗ ಅಮೂಲ್(Amul Company) ಈ ಕಂಪನಿಗೆ ಒಂದು ಚಾಲೆಂಜ್ ಕೊಡಲು ಮುಂದಾಗುತ್ತದೆ. ಅಮೂಲ್ ನ ಅಂದಿನ ಅಧ್ಯಕ್ಷರಾಗಿದ್ದ ಡಾ. ವರ್ಗೀಸ್ ಕುರಿಯನ್ ಈ ಕಂಪನಿಗೆ ಅಮೂಲ್ ಜಾಹೀರಾತು(Amul Advertisement) ನಿರ್ಮಿಸಲು ಹೇಳುತ್ತಾರೆ. ಅದಕ್ಕೆ ಕೆಲ ಶರತ್ತುಗಳನ್ನು ಹಾಕುತ್ತಾರೆ. ಆಗಾಗ ಜಾಹೀರಾತುಗಳು ಬದಲಾಯಿಸುತ್ತಿರಬೇಕು. ಮತ್ತು ಆ ಪಾತ್ರ ಸುಲಭವಾಗಿ ಜನರನ್ನು ಬೇಗ ಆಕರ್ಷಿಸುವಂತಿರಬೇಕು ಎಂಬುದಾಗಿ ಷರತ್ತು ವಿಧಿಸುತ್ತಾರೆ.
ಆಗ ಸಿಲ್ವೆಸ್ಟರ್ ಡಾ. ಕುನ್ಹಾ ಮತ್ತು ಯುಸ್ಟೇಸ್ ಫರ್ನಾಂಡಿಸ್ ಎನ್ನುವ ಇಬ್ಬರು ಕ್ರಿಯೇಟಿವ್ ಮೈಂಡ್ ಗಳು ಸೇರಿ ಒಂದು ಐಡಿಯಾ ಮಾಡಿ, ಅದರ ಪ್ರಕಾರ ದಪ್ಪ ಕಣ್ಣಿನ ಪೋಲ್ಕಾ ಡಾಟ್ ಫ್ರಾಕ್ ಹಾಕಿದ ಒಂದು ಪುಟ್ಟ ಹುಡುಗಿಯ ಪಾತ್ರವನ್ನು ರಚಿಸುತ್ತಾರೆ. ಮುಂದೆ ಅದೇ ಐಡಿಯಾ ಅಮೂಲ್ ಗರ್ಲ್(Amul Girl) ಅನ್ನುವ ಪುಟ್ಟ ಪೋರಿಯನ್ನ ಹುಟ್ಟು ಹಾಕಿತು.
ಆಕೆ ಕೇವಲ ಬಟರ್ ಮಾತ್ರವಲ್ಲ ರಾಜಕೀಯ, ಕ್ರಿಕೆಟ್, ಸಿನಿಮಾ ಎಲ್ಲದರ ಬಗ್ಗೆಯೂ ತನ್ನದೇ ಆದ ಶೈಲಿಯಲ್ಲಿ ಟೀಕೆಗಳನ್ನು ಮಾಡುತ್ತಾ ಬಂದಳು. ದಿನ ಕಳೆದಂತೆ ಅಮೂಲ್ ಬಟರ್ ಎಂದರೆ ಆಕೆಯೇ ನೆನಪಾಗುವಷ್ಟು ಜನರ ಮನಸ್ಸಿನಲ್ಲಿ ಉಳಿದುಬಿಟ್ಟಳು.
ಆಕೆ ನಿಜವಾದ ವ್ಯಕ್ತಿಯ? ಅಂತೆ ಕಂತೆ
ಇದೇ ರೀತಿ ಹಲವಾರು ವರ್ಷಗಳ ಹಿಂದೆ ಒಂದು ವಿಡಿಯೋ ವೈರಲ್ ಆಗಿತ್ತು. ಅಮುಲ್ ಗರ್ಲ್(Amul Girl) ರಾಜಕಾರಣಿ ಶಶಿತರೂರ್ ಅವರ ಸಹೋದರಿ ಶೋಭಾ ತರೂರ್ ಶ್ರೀನಿವಾಸನ್ ಅವರ ಫೋಟೋದಿಂದ ಪ್ರೇರಿತರಾಗಿ ಅಮೂಲ್ ಚಿತ್ರ ರಚಿಸಲಾಗಿದೆ ಅಂತ ವಿಡಿಯೋದಲ್ಲಿ ಹೇಳಲಾಗಿತ್ತು.
ಇದು ಅಂದಿನ ಮಟ್ಟಿಗೆ ಬಹುದೊಡ್ಡ ಸುದ್ದಿ ಆಯಿತು. ಆದರೆ ಅಮೂಲ್ ಕಂಪನಿ ಈ ಕುರಿತು ಒಂದು ಕ್ಲಾರಿಫಿಕೇಶನ್ ಕೊಟ್ಟಿತು. ಅಮುಲ್ ಗರ್ಲ್(Amul Girl) ಎನ್ನುವ ಕಾರ್ಟೂನ್ ಅನ್ನು ಯಾವುದೇ ವ್ಯಕ್ತಿಯನ್ನು ನೋಡಿ ಮಾಡಿದ್ದಲ್ಲ, ಆಕೆ ಸಂಪೂರ್ಣವಾಗಿ ನಮ್ಮ ಕ್ರಿಯೇಟಿವಿಟಿಯಿಂದಲೇ ರೂಪುಗೊಂಡಿದ್ದು ಎಂದು ಕಂಪನಿ ತಿಳಿಸಿತ್ತು.
ಹಾಸ್ಯದ ಮೂಲಕ ಬ್ರಾಂಡ್ಗಳು ಹೇಗೆ ನಮ್ಮನ್ನು ತಲುಪುತ್ತವೆ ಎಂಬುದಕ್ಕೆ ಅಮುಲ್ ಗರ್ಲ್(Amul Girl) ಒಂದು ಅದ್ಭುತ ಉದಾಹರಣೆ. ಈ ಕಥೆಯ ಬಗ್ಗೆ ನೀವು ಏನು ಅಂದುಕೊಂಡಿದ್ದೀರಿ?
