ನಾವುಗಳು ಎಲ್ಲಾದರೂ ಲೋನ್(Loan) ತೆಗೆದುಕೊಳ್ಳಬೇಕು ಅಂದ್ರೆ ಮೊದಲು ತಲೆಗೆ ಬರೋದೇ ಬಡ್ಡಿ ದರಗಳ ಚಿಂತೆ. ಆದರೆ ಈಗ ಹಬ್ಬದ ಸೀಸನ್ ಶುರುವಾಗುತ್ತಿದ್ದಂತೆಯೇ, ಬ್ಯಾಂಕ್ ಆಫ್ ಬರೋಡಾ(Bank Of Baroda) ತನ್ನ ಗ್ರಾಹಕರಿಗೆ ಒಳ್ಳೆ ಸುದ್ದಿ ಕೊಟ್ಟಿದೆ. ಹೊಸ ಕಾರು ಅಥವಾ ಮನೆ ಖರೀದಿಸಬೇಕು ಅಂತ ಯೋಚಿಸುತ್ತಿರುವವರಿಗೆ ಇದೊಂದು ಸುವರ್ಣಾವಕಾಶ.
ಬ್ಯಾಂಕ್ ಆಫ್ ಬರೋಡಾ(Bank Of Baroda) ಕಾರ್(Car Loan) ಮತ್ತು ಹೋಮ್ ಲೋನ್ಗಳ(Home Loan)ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಿದೆ. ಇದರಿಂದ ಹೊಸ ಕಾರು, ಹೊಸ ಮನೆ ಖರೀದಿಸುವ ಕನಸು ಸುಲಭವಾಗಿ ನನಸಾಗಲಿದೆ.
ಇದನ್ನೂ ಓದಿ: ಅಮುಲ್ ಗರ್ಲ್: ಬರಿಯ ಜಾಹೀರಾತು ಮಗುವಲ್ಲ, ಭಾರತದ ಹೃದಯ ಗೆದ್ದ ಕಥೆ
ಕಡಿಮೆ ಬಡ್ಡಿಗೆ ಕಾರ್ ಲೋನ್!
ಬ್ಯಾಂಕ್ ಆಫ್ ಬರೋಡದ(Bank OF Baroda) ಈ ಆಫರ್, ಹೊಸ ಕಾರು ಕೊಳ್ಳಬೇಕು ಅಂತಿದ್ದವರಿಗೆ ಇದು ಡಬಲ್ ಬೊನಸ್ ಇದ್ದಂತೆ. ಈಗ ಕೇವಲ 8.15% ಬಡ್ಡಿದರದಿಂದ ಆರಂಭವಾಗುವ ಪ್ಲೋಟಿಂಗ್ ಕಾರ್ ಲೋನ್ ಅನ್ನು ತೆಗೆದುಕೊಳ್ಳಬಹುದು. ಮೊದಲಿಗಿಂತ ಬಡ್ಡಿ ದರ ಕಡಿಮೆ ಇರುವುದರಿಂದ, ಹಬ್ಬದ ಸಮಯದಲ್ಲಿ ಕಾರು ಮಾರಾಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಕಡಿಮೆ ಬಡ್ಡಿಗೆ ಸಾಲ ಸಿಕ್ಕರೆ, ಜೇಬಿಗೆ ಬೀಳುವ ಭಾರ ಕೂಡ ಕಡಿಮೆಯಾಗುತ್ತದೆ.
ಮನೆ ಖರೀದಿಗೂ ಸುಲಭ ಸಾಲ
ಹೊಸ ಮನೆ ಖರೀದಿಸಬೇಕು ಅಥವಾ ಈಗಿರುವ ಮನೆಗೆ ಇನ್ನಷ್ಟು ಹಣ ಬೇಕು ಅನ್ನುವವರಿಗೆ ಬ್ಯಾಂಕ್ ಆಫ್ ಬರೋಡಾ ಮತ್ತೊಂದು ಅವಕಾಶ ನೀಡಿದೆ. ಮೋರ್ಟ್ ಗೇಜ್(‘Loan Against Property) ಮೇಲಿನ ಬಡ್ಡಿ ದರ 9.85% ರಿಂದ 9.15% ಗೆ ಇಳಿದಿದೆ. ಇದು ನಿಮ್ಮ ಆಸ್ತಿಯ ಮೌಲ್ಯದ ಮೇಲೆ ಹೆಚ್ಚುವರಿ ಹಣ ಪಡೆಯಲು ಸಹಾಯ ಮಾಡುತ್ತದೆ. ಈ ಹಣವನ್ನು ಮನೆ ರಿಪೇರಿ ಮಾಡಿಸಲು, ಹೊಸ ಮನೆ ಖರಿದಿಸಲು ಅಥವಾ ಸಣ್ಣ ವ್ಯವಹಾರಕ್ಕೆ ಹೂಡಿಕೆ ಮಾಡಲು ಬಳಸಬಹುದು.
ಸ್ಥಿರ ಬಡ್ಡಿದರ ಆಯ್ಕೆಯೂ ಇದೆ!
Baroda Bank ಗ್ರಾಹಕರಿಗೆ ಸ್ಥಿರ ಬಡ್ಡಿ ದರದ ಆಯ್ಕೆಯನ್ನೂ ನೀಡಿದೆ. ಇದು 8.65% ರಿಂದ ಪ್ರಾರಂಭವಾಗುತ್ತದೆ. ಬಡ್ಡಿ ದರಗಳು ಏರುಪೇರಾದಾಗ ಚಿಂತೆ ಮಾಡುವುದು ಬೇಡ ಅಂದುಕೊಂಡರೆ, ಈ ಆಯ್ಕೆ ತುಂಬ ಅನುಕೂಲಕರವಾಗಿದೆ. ಬ್ಯಾಂಕ್ ಹೇಳುವಂತೆ, ಈ ಬಡ್ಡಿ ದರ ಕಡಿತ ಕೇವಲ ವೈಯಕ್ತಿಕ ಗ್ರಾಹಕರಿಗೆ ಮಾತ್ರವಲ್ಲದೆ, ಸ್ವಯಂ ಉದ್ಯೋಗಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೂ ಲಾಭದಾಯಕವಾಗಿದೆ.
ಒಟ್ಟಿನಲ್ಲಿ, ಹೊಸ ಕಾರು ಅಥವಾ ಹೊಸ ಮನೆ ಖರೀದಿ ಮಾಡಬೇಕು ಅಂತ ಯೋಚಿಸುತ್ತಿರುವವರಿಗೆ ಇದು ಒಂದು ಸೂಕ್ತ ಸಮಯ ಹಬ್ಬದ ಪ್ರಯುಕ್ತ ಸಿಗುತ್ತಿರುವ ಈ ಕೊಡುಗೆಯ ಲಾಭವನ್ನು ಪಡೆಯಬಹುದು.
