ನವದೆಹಲಿ: ನಾವು ನಮ್ಮ ಸುತ್ತಮುತ್ತಲಿನ ಗಾಳಿ ಎಷ್ಟು ಶುದ್ಧವಾಗಿದೆ ಅಂತ ಯೋಚಿಸುವುದಿಲ್ಲ. ಆದರೆ, ಅದೇ ಗಾಳಿ ನಮ್ಮ ಆರೋಗ್ಯ ಮತ್ತು ನಮ್ಮ ಜೀವನದ ಮೇಲೆ ಎಷ್ಟು ಪರಿಣಾಮ ಬೀರುತ್ತಿದೆ ಅನ್ನೋದನ್ನು ಅರಿತರೆ ನಿಜಕ್ಕೂ ಆತಂಕವಾಗುತ್ತದೆ. ಇತ್ತೀಚೆಗೆ ಚಿಕಾಗೊ ವಿಶ್ವವಿದ್ಯಾಲಯದ(Chikago University) ಎನರ್ಜಿ ಪಾಲಿಸಿ ಇನ್ಸಿಟ್ಯೂಟ್ (EPIC) ಒಂದು ಅಧ್ಯಯನ ನಡೆಸಿದೆ. ಅದರ ಪ್ರಕಾರ, ಭಾರತದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವು(India Air Pollution) ನಮ್ಮ ಸರಾಸರಿ ಜೀವಿತಾವಧಿಯನ್ನು ಮೂರುವರೆ ವರ್ಷಗಳಷ್ಟು ಕಡಿಮೆ ಮಾಡುತ್ತಿದೆಯಂತೆ!
ಇದನ್ನು ಇನ್ನಷ್ಟು ಸರಳವಾಗಿ ಹೇಳಬೇಕೆಂದರೆ, ವಾಯುಮಾಲಿನ್ಯದಿಂದ ಆಗುವ ಹಾನಿ ಬೇರೆ ಕೆಲವು ಸಮಸ್ಯೆಗಳಿಗಿಂತ ತುಂಬಾ ಹೆಚ್ಚಾಗಿರುತ್ತದೆ. ಉದಾಹರಣೆಗೆ:
ಅಪೌಷ್ಟಿಕತೆ: ಮಕ್ಕಳು ಮತ್ತು ತಾಯಂದಿರಿಗೆ ಅಪೌಷ್ಟಿಕತೆಯಿಂದಾಗಿ ಸರಾಸರಿ ಜೀವಿತಾವಧಿಯಲ್ಲಿ 16 ವರ್ಷಗಳ ಕಡಿಮೆಯಾಗುತ್ತದೆ.
ಇದನ್ನೂ ಓದಿ: ಸೆಪ್ಟೆಂಬರ್ ಆರಂಭದಲ್ಲೇ ಜೇಬಿಗೆ ಕತ್ತರಿ: LPG ದರ, ಎಸ್ಬಿಐ ಕಾರ್ಡ್, ಎಟಿಎಂ ಶುಲ್ಕ ಹೆಚ್ಚಳ
ತಂಬಾಕು ಬಳಕೆ: ತಂಬಾಕು ಬಳಸುವುದರಿಂದ 1.5 ವರ್ಷಗಳ ಜೀವಿತಾವಧಿ ಕಡಿಮೆಯಾಗುತ್ತದೆ.
ಅಸುರಕ್ಷಿತ ನೀರು: ಶುದ್ಧ ನೀರು ಇಲ್ಲದೆ ಇರುವುದು ಸುಮಾರು 8.4 ತಿಂಗಳ ಜೀವಿತಾವಧಿ ನಷ್ಯಕ್ಕೆ ಕಾರಣವಾಗುತ್ತದೆ.
ವಾಯುಮಾಲಿನ್ಯದಿಂದ ಆಗುವ ನಷ್ಟ, ಈ ಎಲ್ಲಕ್ಕಿಂತ ಸುಮಾರು ಎರಡು ಪಟ್ಟು ಹೆಚ್ಚು. ಇದು ನಿಜಕ್ಕೂ ಒಂದು ದೊಡ್ಡ ಆತಂಕಕಾರಿ ವಿಷಯ.
ಉತ್ತರ ಭಾರತ ವಿಶ್ವದ ಅತ್ಯಂತ ಕಲುಷಿತ ಪ್ರದೇಶ
ವರದಿಯ ಪ್ರಕಾರ, ಉತ್ತರ ಭಾರತ(North India Pollution) ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಕಲುಷಿತಗೊಂಡ ಪ್ರದೇಶವಾಗಿ ಗುರುತಿಸಲ್ಪಟ್ಟಿದೆ. ನಮ್ಮ ದೇಶದ ಜನಸಂಖ್ಯೆಯ ಸುಮಾರು 38.9% ಜನರು, ಅಂದರೆ ಸುಮಾರು 54.4 ಕೋಟಿ ಜನರು, ತೀವ್ರವಾದ ಮಾಲಿನ್ಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ.
ಇದನ್ನೂ ಓದಿ: ಹೊಸ ಮನೆ ಕನಸು ನನಸು ಮಾಡಿಕೊಳ್ಳಿ!: ಬ್ಯಾಂಕ್ ಆಫ್ ಬರೋಡಾದಿಂದ ಕಡಿಮೆ ಬಡ್ಡಿಗೆ ಲೋನ್
ಪ್ರಮುಖ ನಗರಗಳ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ:
ದೆಹಲಿ-ಎನ್ಸಿಆರ್: ಇಲ್ಲಿನ ಜನರು ವಾಯುಮಾಲಿನ್ಯದಿಂದಾಗಿ ತಮ್ಮ ಜೀವಿತಾವಧಿಯಲ್ಲಿ 8.2 ವರ್ಷಗಳನ್ನು ಕಳೆದುಕೊಳ್ಳುತ್ತಿದ್ದಾರೆ.
ವಿಶ್ವದ ಅತ್ಯಂತ ಕಲುಷಿತ ಪ್ರದೇಶಗಳ ಪಟ್ಟಿಯಲ್ಲಿ ಹೆಸರು ಪಡೆದಿರುವ ಬಿಹಾರ, ಹರಿಯಾಣ, ಉತ್ತರ ಪ್ರದೇಶ ರಾಜ್ಯಗಳಲ್ಲಿಯೂ ಪರಿಸ್ಥಿತಿ ಗಂಭೀರವಾಗಿದ್ದು, ಕ್ರಮವಾಗಿ 5 ವರ್ಷಗಳ ಜೀವಿತಾವಧಿ ನಷ್ಟವಾಗುತ್ತಿದೆ.
