ಎಲ್ಲರಿಗೂ ನಮಸ್ಕಾರ
Budhaditya Rajayoga 2025: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನ ಪಲ್ಲಟ ನಮ್ಮ ಜೀವನದ ಮೇಲೆ ಮಹತ್ತರವಾದ ಪರಿಣಾಮ ಬೀರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದೀಗ 12 ತಿಂಗಳ ನಂತರ ವಿಶೇಷವಾದ ರಾಜಯೋಗವೊಂದು ರೂಪುಗೊಳ್ಳುತ್ತಿದೆ. ಸೆಪ್ಟೆಂಬರ್ 17ರಂದು ಸೂರ್ಯ ಕನ್ಯಾ ರಾಶಿಗೆ ಪ್ರವೇಶ ಪಡೆಯುತ್ತಾನೆ. ಹಾಗೆಯೇ ಸೆಪ್ಟೆಂಬರ್ 15ರಂದು ಬುಧನು ಕನ್ಯಾ ರಾಶಿಗೆ ಪ್ರವೇಶ ಪಡೆಯುತ್ತಾನೆ. ಕನ್ಯಾ ರಾಶಿಯಲ್ಲಿರುವ ಬುಧ ಮತ್ತು ಸೂರ್ಯರ ಸಂಗಮ ಬುಧಾದಿತ್ಯ ರಾಜಯೋಗವನ್ನು(Budhaditya Rajayoga 2025) ಸೃಷ್ಟಿ ಮಾಡುತ್ತದೆ.
ಹೌದು ಜ್ಞಾನ, ಬುದ್ಧಿಮತ್ತೆ ಮತ್ತು ಮಾತು ವ್ಯಾಪಾರಕ್ಕೆ ಕಾರಣನಾದ ಬುಧನು ಈಗ ತನ್ನ ಸ್ವಂತ ರಾಶಿಯಾದ ಕನ್ಯಾದಲ್ಲಿ ಪ್ರವೇಶಿಸುತ್ತಿದ್ದಾನೆ. ಅದೇ ಸಮಯದಲ್ಲಿ ಸೂರ್ಯ ಕೂಡ ಸಿಂಹದಿಂದ ಕನ್ಯಾ ರಾಶಿಗೆ ಸಂಚರಿಸಲಿದ್ದಾನೆ. ಈ ಎರಡು ಗ್ರಹಗಳು ಒಂದೇ ಮನೆಯಲ್ಲಿ ಸೇರುವ ಕಾರಣ ಕನ್ಯಾರಾಶಿಯಲ್ಲಿ ಈ ಅದ್ಭುತ ಯೋಗ ನಿರ್ಮಾಣವಾಗಲಿದೆ. ಈ ಯೋಗದ ಪ್ರಭಾವ ಎಲ್ಲಾ ರಾಶಿಗಳ ಮೇಲು ಇರಲಿದೆ. ಆದರೆ ಕೆಲವು ಅದೃಷ್ಟಶಾಲಿ ರಾಶಿಗಳಿಗೆ ಇದರಿಂದ ಅನಿರೀಕ್ಷಿತ ಲಾಭಗಳು ಸಿಗಲಿವೆ ಹಾಗಾದರೆ ಈ ಅದೃಷ್ಟದ ರಾಶಿಗಳು ಯಾವುವು ಎಂದು ನೋಡೋಣ.
ಇದನ್ನೂ ಓದಿ: ಗೀತಾಸಾರ: ಶ್ರೀ ಕೃಷ್ಣ ಪರಮಾತ್ಮ ಹೇಳಿದ ಜೀವನ ಸೂತ್ರಗಳು
ಮಿಥುನ ರಾಶಿ: ಬದುಕು ಸಂಪೂರ್ಣ ಬದಲಾಗಲಿದೆ!

ಮಿಥುನ ರಾಶಿಯವರಿಗೆ ಬುಧಾದಿತ್ಯ ರಾಜಯೋಗವು ನಿಜವಾದ ವರದಾನವಾಗಲಿದೆ. ನಿಮ್ಮ ನಾಲ್ಕನೇ ಮನೆಯಲ್ಲಿ ಈ ಯೋಗ ರೂಪುಗೊಳ್ಳುತ್ತಿರುವುದರಿಂದ ಜೀವನದಲ್ಲಿ ಸುಖ ಸೌಕರ್ಯಗಳು ಹೆಚ್ಚಾಗಲಿವೆ. ಮನೆಯಲ್ಲಿ ಸಂತೋಷ ನೆಲೆಸುತ್ತದೆ ಮತ್ತು ಹೊಸ ವಾಹನ ಅಥವಾ ಮನೆ ಖರೀದಿಯ ಕನಸು ನನಸಾಗಬಹುದು. ನಿಮಗೆ ಈ ಹಿಂದಿನ ಕಾಡುತ್ತಿದ್ದ ಆರ್ಥಿಕ ಸಮಸ್ಯೆಗಳಿಂದ ಹೊರಬರುವಿರಿ. ಕೆಲಸದಲ್ಲಿ ಇಲ್ಲಿಯವರೆಗೆ ನಿರೀಕ್ಷಿಸಿದ ಪ್ರಗತಿ ಕಾಣದಿದ್ದರೆ, ಈ ತಿಂಗಳು ನಿಮಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಇದು ನಿಮ್ಮ ವೃತ್ತಿಗೆ ಜೀವನಕ್ಕೆ ಒಂದು ಹೊಸ ತಿರುಗು ನೀಡಲಿದೆ. ಮನೆಯ ಹಿರಿಯರಿಂದ ಆಸ್ತಿ ದೊರೆಯುವ ಸಾಧ್ಯತೆಗಳು ಹೆಚ್ಚಿವೆ.
ಧನು ರಾಶಿ: ನಿನ್ನ ಪ್ರಯತ್ನಗಳಿಗೆ ಸಿಗಲಿದೆ ಯಶಸ್ಸು !

ಧನು ರಾಶಿಯವರಿಗೆ ಈ ರಾಜಯೋಗವು ನಿಮ್ಮ ಹತ್ತನೇ ಮನೆಯಲ್ಲಿ ನೆಲೆಸಲಿದೆ. ಇದು ನಿಮ್ಮ ವೃತ್ತಿ ಜೀವನ ಮತ್ತು ಕೆಲಸ ಕಾರ್ಯಗಳಲ್ಲಿ ಅಭೂತಪೂರ್ವ ಯಶಸ್ಸು ತರಲಿದೆ. ಹೊಸ ಕೆಲಸಗಳು ನಿಮ್ಮನ್ನು ಹುಡುಕಿಕೊಂಡು ಬರಲಿದ್ದು, ಅವುಗಳಲ್ಲಿ ಯಶಸ್ಸು ಖಚಿತವಾಗಿ ದೊರೆಯಲಿದೆ. ನಿಮ್ಮ ಹಣಕಾಸಿನ ಸ್ಥಿತಿ ಬಲಗೊಳ್ಳಲಿದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಸೃಜನಶೀಲತೆಗೆ ಉತ್ತಮ ಪ್ರತಿಫಲ ದೊರೆಯಲಿದೆ. ವ್ಯಾಪಾರಸ್ಥರಿಗೆ ಇದು ಲಾಭದಾಯಕ ಸಮಯ. ವಿವಾಹ ಸಂಬಂಧಗಳು ಗಟ್ಟಿ ಆಗಬಹುದು. ಕಚೇರಿಯಲ್ಲಿ ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆಗಳಿದ್ದು, ನಿಮ್ಮ ನಾಯಕತ್ವ ಗುಣಗಳು ಇನ್ನಷ್ಟು ಹೆಚ್ಚಲಿವೆ.
ಇದನ್ನೂ ಓದಿ: ಗೌರೀ-ಗಣೇಶ ಪೂಜೆಯ ಮಹತ್ವ: ಮಣ್ಣಿನ ಪ್ರತಿಮೆಯಲ್ಲಿ ಪಂಚಭೂತಗಳ ಅನುಗ್ರಹ ಯಾಕೆ?
ಕನ್ಯಾ ರಾಶಿ: ಅದೃಷ್ಟ ನಿಮ್ಮ ಕೈ ಹಿಡಿಯಲಿದೆ!

ಕನ್ಯಾ ರಾಶಿಯವರಿಗೆ ಈ ಬುಧಾದಿತ್ಯ ರಾಜಯೋಗವೂ ನಿಮ್ಮ ಮೊದಲ ಮನೆಯಲ್ಲಿಯೇ ರೂಪಗೊಳ್ಳುತ್ತಿರುವುದರಿಂದ, ಇದು ನಿಮ್ಮ ಅದೃಷ್ಟವನ್ನು ಹಲವು ಪಟ್ಟು ಹೆಚ್ಚಿಸಲಿದೆ. ವಿವಾಹಿತರಿಗೆ ದಾಂಪತ್ಯ ಜೀವನ ಸುಖಮಯವಾಗಲಿದೆ. ಇನ್ನು ಮದುವೆಯಾಗದವರಿಗೆ ಒಳ್ಳೆಯ ಸಂಗಾತಿ ಸಿಗುವ ಯೋಗವಿದೆ. ನಿಮ್ಮ ವೃತ್ತಿ ಜೀವನದಲ್ಲಿ ಮೇಲಾಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಸಂಪೂರ್ಣ ಸಹಕಾರ ಸಿಗಲಿದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿವೆ. ಹಣಕಾಸಿನ ವ್ಯವಹಾರಗಳಲ್ಲಿ ಮತ್ತಷ್ಟು ಲಾಭ ಗಳಿಸುವಿರಿ. ತುಂಬ ಸಮಯದಿಂದ ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದರೆ, ಈಗ ನಿಮಗೆ ಉತ್ತಮ ಅವಕಾಶಗಳು ಒದಗಿ ಬರಲಿವೆ. ಸುಖಕರ ಪ್ರಯಾಣ ನಿಮ್ಮದಾಗಲಿದೆ.
ಈ ವಿಶೇಷ ರಾಜಯೋಗವು ನಿಮ್ಮೆಲ್ಲರ ಜೀವನದಲ್ಲಿ ಹೊಸ ಭರವಸೆ ಮತ್ತು ಯಶಸ್ಸನ್ನು ತರಲಿ ಎಂದು ಹಾರೈಸುತ್ತೇನೆ.
ಶ್ರೀಧರ್ ಶಾಸ್ತ್ರಿ
ತುಮಕೂರು
ವಿ.ಸೂ: ಈ ಮೇಲಿನ ಮಾಹಿತಿಯನ್ನು ನೈಜ ವ್ಯಕ್ತಿಯಿಂದ ಸ್ವೀಕರಿಸಿದ್ದಾಗಿರುತ್ತದೆ. ಹಾಗೆಯೇ ಈ ಮೇಲಿನ ಮಾಹಿತಿಗು ಸುದ್ದಿ ಸಂಪದಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಇದು ಕೇವಲ ಮಾಹಿತಿಗಾಗಿ ಮಾತ್ರ.
