ಬೆಂಗಳೂರು: ಗೌರಿ ಗಣೇಶ ಹಬ್ಬದ(Gowri Ganesha Festival) ಸಂಭ್ರಮದ ನಡುವೆ ಇದೀಗ ಮಹಿಳೆಯರ ಅಚ್ಚುಮೆಚ್ಚಿನ ಆಭರಣ ಚಿನ್ನದ ಬೆಲೆ (Gold Rate) ಮತ್ತೆ ಏರಿಕೆಯಾಗಿದೆ. ಗಣೇಶ ಚತುರ್ಥಿ(Ganesha Chaturthi) ಹಬ್ಬದ ಸಡಗರದ ಬೆನ್ನಲ್ಲೇ ಚಿನ್ನದ ಬೆಲೆ ಗಗನಕ್ಕೇರಿದ್ದು, ಹಬ್ಬದ ಬೇಡಿಕೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಬದಲಾವಣೆಗಳು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಗುರುವಾರ ಒಂದೇ ದಿನ ಚಿನ್ನದ ಬೆಲೆಯಲ್ಲಿ(Gold Rate) ಭಾರಿ ಏರಿಕೆ ಕಂಡುಬಂದಿದೆ. 22 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹150 ಹೆಚ್ಚಳವಾಗಿದ್ದು, 24 ಕ್ಯಾರೆಟ್ ಬಂಗಾರವು ಪ್ರತಿ ಗ್ರಾಂಗೆ ₹160 ಏರಿಕೆ ಕಂಡಿದೆ.
ಇದನ್ನೂ ಓದಿ: Ukraine Russia War: ಇದು ‘ಮೋದಿ ಯುದ್ಧ’ ಎಂದ ವೈಟ್ ಹೌಸ್ ಅಧಿಕಾರಿ, ಭಾರತದ ವಿರುದ್ಧ ಅಮೆರಿಕ ಟೀಕಾಸ್ತ್ರ
ಇಂದಿನ ಚಿನ್ನದ ದರಗಳು ಹೀಗಿವೆ:
22 ಕ್ಯಾರೆಟ್ ಚಿನ್ನ:
ಒಂದು ಗ್ರಾಂ: ₹9,405
10 ಗ್ರಾಂ : ₹94,050
24 ಕ್ಯಾರೆಟ್ ಚಿನ್ನ:
ಒಂದು ಗ್ರಾಂ : ₹10,260
10 ಗ್ರಾಂ : ₹1,02,600
ಪ್ರಮುಖ ನಗರಗಳಲ್ಲಿ ದರಪಟ್ಟಿ
ಹೊಸ ದರದ ಪ್ರಕಾರ, ದೆಹಲಿ, ಲಕ್ನೋ ಮತ್ತು ಜೈಪುರದಂತಹ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ದರ(Gold Rate) 1,02,590 ಇದ್ದರೆ, 22 ಕ್ಯಾರೆಟ್ ಚಿನ್ನದ ದರ ₹94,050 ತಲುಪಿದೆ. ಇನ್ನು ಬೆಂಗಳೂರು, ಮುಂಬೈ, ಚೆನ್ನೈ ಮತ್ತು ಹೈದರಾಬಾದ್ನಲ್ಲಿ 24 ಕ್ಯಾರೆಟ್ ಚಿನ್ನದ ದರ ₹1,02,440 ಮತ್ತು 22 ಕ್ಯಾರೆಟ್ ಚಿನ್ನದ ದರ ₹93,900 ಆಗಿದೆ. ಅಹಮದಾಬಾದ್ನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ₹1.02 490ಕ್ಕೆ ಹೆಚ್ಚಳವಾಗಿದೆ.
ಇದನ್ನೂ ಓದಿ: 84 ದಿನಗಳ ಬಳಿಕ RCB ಭಾವುಕ ಪೋಸ್ಟ್: ‘ನಿಮ್ಮೊಂದಿಗೆ ನಾವಿದ್ದೇವೆ’
ಸರಕು ವಿನಿಮಯ ಕೇಂದ್ರಗಳು ರಜೆ ನಿಮಿತ್ತ ಮುಚ್ಚಿದ್ದರೂ, ಆಗಸ್ಟ್ 26ರ ವಹಿವಾಟಿನಲ್ಲಿಯೇ ಚಿನ್ನದ ಬೆಲೆ(Gold price)ಈಗಾಗಲೇ ಭಾರಿ ಏರಿಕೆ ಕಂಡಿತ್ತು ಅಕ್ಟೋಬರ್ ತಿಂಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ₹1,00,950 ಸಮೀಪದಲ್ಲಿ ಇರಬಹುದೆಂದು ಅಂದಾಜಿಸಲಾಗಿದೆ ಹಬ್ಬದ ಸೀಸನ್ನಲ್ಲಿ ಚಿನ್ನ ಖರೀದಿಸಲು ಯೋಚಿಸುತ್ತಿರುವವರಿಗೆ ಈ ಬೆಲೆ ಏರಿಕೆ ಸ್ವಲ್ಪ ನಿರಾಶೆ ತಂದಿರುವುದು ಸ್ಪಷ್ಟ ಆದರೂ, ಚಿನ್ನದಲ್ಲಿ ಹೂಡಿಕೆ ಮಾಡುವವರಿಗೆ ಇದು ಲಾಭದಾಯಕ ಸುದ್ದಿಯಾಗಿದೆ.
