ಬೆಂಗಳೂರು: ಐಪಿಎಲ್ 2025(IPL 2025) ಫೈನಲ್ ಗೆದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಚಾಂಪಿಯನ್ ಆದದ್ದು ಕೇವಲ ಕಪ್ ಗೆದ್ದ ಸಂಭ್ರಮ ವಾಗಿರಲಿಲ್ಲ, ಅದು ಇಡೀ ಕರ್ನಾಟಕದ ಕನಸು ನನಸಾದ ಕ್ಷಣ. ಆದರೆ ಆ ಸಂಭ್ರಮದ ಹಿಂದೆಯೇ ಒಂದು ಘೋರ ದುರಂತ ಸಂಭವಿಸಿ ಇಡೀ ಕರುನಾಡಿಗೆ ನೋವನ್ನುಂಟು ಮಾಡಿತ್ತು. ಕಪ್(RCB Cup) ಗೆಲುವಿನ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತದಲ್ಲಿ, 11 ಮಂದಿ ಆರ್ಸಿಬಿ(RCB) ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು.
ಇದನ್ನೂ ಓದಿ : ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ ಕಬಳಿಕೆದಾರರ ಆಸ್ತಿಪಾಸ್ತಿ ಜಪ್ತಿ- ಮುಂದುವರಿದ ತನಿಖೆ
ಈ ಘಟನೆಯಾದ ಬಳಿಕ ಆರ್ಸಿಬಿ(RCB) ತಂಡವು ಸಾಮಾಜಿಕ ಜಾಲತಾಣಗಳಿಂದ ಸಂಪೂರ್ಣ ಮೌನಕ್ಕೆ ಜಾರಿತ್ತು. ಈ ಮೌನ ಬರೋಬ್ಬರಿ 84 ದಿನಗಳ ಕಾಲ ಮುಂದುವರೆದು, ಇದೀಗ ಆರ್ಸಿಬಿ(RCB) ಅಂತಿಮವಾಗಿ ಒಂದು ಪೋಸ್ಟ್ ಮಾಡಿದೆ(RCB Emotional Post). ತನ್ನ ಪೋಸ್ಟ್ ನಲ್ಲಿ “ನಾವು ಪೋಸ್ಟ್ ಮಾಡಿ ಸುಮಾರು ಮೂರು ತಿಂಗಳ ಕಾಲ ಕಳೆದಿದೆ. ನಮ್ಮ ಮೌನ ಕೇವಲ ಕಾಲಿ ಜಾಗದಿಂದಲ್ಲ ಅದು ದುಃಖದಿಂದ ತುಂಬಿದ ಮೌನ. ಈ ವೇದಿಕೆ ಮೂಲಕ ನಾವು ಸಂತೋಷದ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೆವು. ಆದರೆ ಜೂನ್ 4ರ ಘಟನೆ ಎಲ್ಲವನ್ನು ಬದಲಾಯಿಸಿತು. ಆ ದಿನ ನಮ್ಮ ಹೃದಯವನ್ನು ಮುರಿಯಿತು. ಆನಂತರದ ಮೌನ ಕೇವಲ ನಿಶ್ಯಬ್ದವಲ್ಲ ಅದು ಈ ದುರಂತಕ್ಕೆ ಕೊಟ್ಟ ಗೌರವದ ಸಂಕೇತ. ಆ ನೋವಿನ ಮೌನದೊಳಗೆ ನಾವು ಆಳವಾಗಿ ಯೋಚಿಸಿದೆವು, ಅನೇಕ ವಿಷಯಗಳನ್ನು ಕಲಿತೆವು. ನೋವನ್ನೇ ನಂಬಿಕೆಯಾಗಿ ಪರಿವರ್ತಿಸಬೇಕೆಂದು ನಿರ್ಧರಿಸಿದವು”.
ಇದನ್ನೂ ಓದಿ: Mangalore Cooker Blast: ಉಗ್ರ ಶಾರಿಕ್ ಗೆ ಹಣ ಎಲ್ಲಿಂದ ಬಂತು? ತನಿಖೆ ತೀವ್ರಗೊಳಿಸಿದ ಇಡಿ
ಈ ಪೋಸ್ಟಿನ ಮುಂದುವರೆದ ಭಾಗವಾಗಿ ಆರ್ಸಿಬಿ(RCB) ಹೊಸ ಯೋಜನೆ ಯನ್ನು ಪ್ರಕಟಿಸಿದೆ. ಅದೆ RCB ಕೇರ್ಸ್. ಅಭಿಮಾನಿಗಳು ಮತ್ತು ಸಮಾಜಕ್ಕಾಗಿ ರೂಪಿಸಲಾದ ಈ ಯೋಜನೆಯು ಮುಂದಿನ ದಿನಗಳಲ್ಲಿ ಅಭಿಮಾನಿಗಳಿಗೆ ವಿಶೇಷ ಕಾಳಜಿ ಮತ್ತು ಸಹಾಯವನ್ನು ಒದಗಿಸಲಿದೆ ಎಂದು ಆರ್ಸಿಬಿ(RCB) ಭರವಸೆ ನೀಡಿದೆ. ನಾವು ಇಂದು ಮರಳಿದ್ದೇವೆ, ನಿಮ್ಮೊಂದಿಗೆ ನಿಲ್ಲುವ ಭರವಸೆಯನ್ನು ನೀಡುತ್ತಾ ಕರ್ನಾಟಕದ ಹೆಮ್ಮೆಯಾಗಿ ಮುಂದೆ ಸಾಗುತ್ತೇವೆ. ಇದು ನಮ್ಮ ಕಾಳಜಿ ನಮ್ಮ ಪ್ರತಿಜ್ಞೆ ಎಂದು ಆರ್ಸಿಬಿ(RCB) ತಿಳಿಸಿದೆ.
ಆರ್ಸಿಬಿ ಕೇರ್ಸ್ ಒಂದು ಹೊಸ ಹೆಜ್ಜೆ
ಮಾಹಿತಿಗಳ ಪ್ರಕಾರ ಆರ್ಸಿಬಿ ಕೇರ್ಸ್(RCB) ಅಡಿಯಲ್ಲಿ ಒಂದು ಟ್ರಸ್ಟ್ ಅನ್ನುವ ರಚಿಸುವ ಸಾಧ್ಯತೆ ಇದೆ. ಕಾರ್ ತೋರಿಸುತದಲ್ಲಿ ಪ್ರಾಣ ಕಳೆದುಕೊಂಡ ಅಭಿಮಾನಿಗಳ ಕುಟುಂಬಗಳಿಗೆ ಈ ಮೂಲಕ ಆರ್ಥಿಕ ನೆರವು ನೀಡುವ ಯೋಜನೆ ಸಿದ್ಧಪಡಿಸಲಾಗಿದೆ. ಕಳೆದ ಮೂರು ತಿಂಗಳುಗಳಿಂದ ಆರ್ಸಿಬಿ(RCB) ತಂಡದ ಬಗ್ಗೆ ಯಾವುದೇ ಅಪ್ಡೇಟ್ ಸಿಗದೇ ಬೇಸರದಲ್ಲಿದ್ದ ಅಭಿಮಾನಿಗಳು ಈ ಭಾವನಾತ್ಮಕ ಪೋಸ್ಟ್ ಗೆ ಹೃದಯಪೂರ್ವಕವಾಗಿ ಸ್ಪಂದಿಸಿದ್ದಾರೆ.
