ಬೆಂಗಳೂರು: ಮಂಗಳೂರು ಕುಕ್ಕರ್ ಬ್ಲಾಸ್ಟ್(Mangalore Cooker Blast) ಪ್ರಕರಣದ ಪ್ರಮುಖ ಆರೋಪಿ ಶಾರಿಕ್(Mohamad Shariq) ನನ್ನು ಜಾರಿ ನಿರ್ದೇಶನಾಲಯ (ED) ತೀವ್ರ ವಿಚಾರಣೆಗೆ ಒಳಪಡಿಸಿದ ಭಯೋತ್ಪಾದಕ(Terrarism) ಚಟುವಟಿಕೆಗಳಿಗೆ ಹಣ ಎಲ್ಲಿಂದ ಬರುತ್ತಿದೆ ಎಂಬುದನ್ನು ಪತ್ತೆ ಹಚ್ಚುವ ಸಲುವಾಗಿ ಇದೀಗ ಇಡಿ(ED) ಮತ್ತಷ್ಟು ತನಿಖೆಯನ್ನು ತೀವ್ರಗೊಳಿಸಿದೆ. ಈ ಭಯೋತ್ಪಾದನಾ ಕೃತ್ಯಕ್ಕೆ ಹಣದ ಮೂಲ ಎಲ್ಲಿಂದ ಎಂಬುದನ್ನ ಪತ್ತೆ ಹಚ್ಚುವ ಸಲುವಾಗಿ ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ(Parappan Agrahara Central Jail) ತೀವ್ರ ವಿಚಾರಣೆ ಮಾಡುತ್ತಿದ್ದಾರೆ.
ಜೈಲಿನಲ್ಲಿ ಕೇವಲ ಶರೀಫ್(Mohamad Shariq) ನನ್ನು ಮಾತ್ರ ವಿಚಾರಣೆ ಮಾಡದೆ, ಈ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿರುವ ಇತರ ಉಗ್ರರನ್ನು ಸಹ ಇಡಿ ವಿಚಾರಣೆಗೆ ಒಳಪಡಿಸಿದೆ. ಬೇರೆ ಬೇರೆ ಕಡೆಯಿಂದ ಅಕ್ರಮವಾಗಿ ಹಣವನ್ನು ವರ್ಗಾವಣೆ ಮಾಡಿರುವ ಹಾಗೆಯೇ ಭಯೋತ್ಪಾದನೆಗಾಗಿ ಹಣಕಾಸು(Terrorism Funding)) ನೆರವನ್ನು ನೀಡಿರುವ ಆರೋಪದ ಮೇಲೆ ಇಡಿ ತನಿಖೆಯ ಗತಿಯನ್ನು ತೀವ್ರಗೊಳಿಸಿದೆ.
ಹಣಕಾಸಿನ ಮೂಲದ ಬಗ್ಗೆ ಈಡಿ ತನಿಖೆ
ಶಂಕಿತ ಮಂಗಳೂರು ಕುಕ್ಕರ್ ಗ್ಲಾಸ್ ಪ್ರಕರಣದ ಆರೋಪಿಗಳಿಗೆ ವಿದೇಶದಿಂದ ಹಣ ವರ್ಗಾವಣೆಯಾಗಿದೆಯೇ ಎಂಬ ಬಗ್ಗೆ ಜಾರಿ ನಿರ್ದೇಶನಲಯ(ED) ತನಿಖೆ ನಡೆಸುತ್ತಿದೆ. ಈ ಸಂಬಂಧ ಬೆಂಗಳೂರಿನ ಪರಪ್ಪನ ಅಗ್ರಹಾರ(Parappan Agrahara Central Jail) ಜೈನಲ್ಲಿರುವ ಶಾರಿಕ್(Mohamad Shariq) ಸೇರಿದಂತೆ ಇತರ ಶಂಕಿತ ಉಗ್ರರನ್ನು ಅಧಿಕಾರಿಗಳನ್ನು ನ್ಯಾಯಾಲಯದ ಅನುಮತಿ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
ಇಡಿ ತನಿಖೆಗೆ ಕಾರಣವೇನು
ದೇಶದಾದ್ಯಂತ ವಿದ್ವಾಂಸಕ ಕೃತ್ಯಗಳನ್ನು ನಡೆಸಲು ಸಂಚುರೂಪಿಸಿದ್ದ ಶಂಕಿತ ಉಗ್ರರ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ NIA ತನಿಖೆ ನಡೆಸಿದಾಗ ಹಲವು ಅಂಶಗಳು ಬೆಳಕಿಗೆ ಬಂದಿದ್ದವು. ಇದಾದ ನಂತರ ಇದಕ್ಕೆ ಹಣಕಾಸು ನೆರವನ್ನು ನೀಡಿದವರನ್ನು ಪತ್ತೆಹಚ್ಚಲು ಇಡಿ(ED) ತನ್ನ ತನಿಕೆಯನ್ನು ಆರಂಭಿಸಿದೆ.
2022ರ ನವೆಂಬರ್ ನಲ್ಲಿ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಸಂಭವಿಸಿತ್ತು ಸಂಘಟನೆಯ ಹಣಕಾಸು ವ್ಯವಹಾರಗಳು ಮತ್ತು ಕ್ರಿಪ್ಟೋ ಕರೆನ್ಸಿಗಳ ಮೂಲಕವಾಗಿ ಹಣ ವರ್ಗಾವಣೆಯ ಬಗ್ಗೆ ಇಡಿ ತನಿಖೆ ನಡೆಸುತ್ತಿದ್ದು, ಇದರ ಭಾಗವಾಗಿಯೇ ಈ ಪ್ರಕರಣಕ್ಕೂ ಇಡಿ ಪ್ರವೇಶಿಸಿದೆ. ಇಡಿ ತನಿಖೆ ಆರಂಭವಾದ ಕೂಡಲೇ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ಇದಲ್ಲದೆ ಭಾರತದಲ್ಲಿ ಐಸಿಸಿ ಚಟುವಟಿಕೆಗಳನ್ನು ವಿಸ್ತರಿಸುವ ಉಗ್ರರ ಸಂಚಿನ ಬಗ್ಗೆಯೂ ಸಹ ತನಿಖೆ ನಡೆಸಲಾಗುತ್ತಿದೆ.
