Mahavatar Narsimha Movie Poster
Mahavthar Narasimha: ಇದೀಗ ಇಡೀ ದೇಶದಾದ್ಯಂತ ಕನ್ನಡ ಸಿನಿಮಾಗಳದ್ದೇ ಹವಾ ಎಂದರೆ ತಪ್ಪಾಗಲಾರದು. ಏಕೆಂದರೆ ಇತ್ತೀಚಿಗೆ ಬಿಡುಗಡೆಗೊಂಡ, ಸು ಫ್ರಂ ಸೋ(Su From So), ಮಹಾವತಾರ ನರಸಿಂಹ (Mahavthar Narasimha) ಎರಡು ಕನ್ನಡ ಚಿತ್ರಗಳು(KannadaMovies) ಸಹ ಭರ್ಜರಿ ಯಶಸ್ಸು ಖಂಡಿವೆ. ಅದರಲ್ಲೂ ಅನಿಮೇಟೆಡ್ ಸಿನಿಮಾ ಮಹಾವತಾರ್ ನರಸಿಂಹ ಬಾಕ್ಸ್ ಆಫೀಸ್(Box office) ನಲ್ಲಿ ಹೊಸ ದಾಖಲೆ ಬರೆದಿದೆ. ಕೇವಲ 30 ದಿನಗಳಲ್ಲಿ 300 ಕೋಟಿಗೂ ಅಧಿಕ ಗಳಿಕೆ ಮಾಡಿದ ಮೊದಲ ಅನಿಮೇಷನ್ ಸಿನಿಮಾ(Animeshan Movie) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಸನ್ನಿಲಿಯೋನ್ ನಂತರ ತಮನ್ನಾ ಸರದಿ: ರಾಗಿಣಿ MMS ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ಬೋಲ್ಡ್ ಅವತಾರ
ಹೊಂಬಾಳೆ ಬೆಂಬಲಕ್ಕೆ ಸಿಕ್ಕ ಯಶಸ್ಸು
ಜುಲೈ 25ರಂದು ಬಿಡುಗಡೆಯಾದ ಮಹಾಾವತಾರ ನರಸಿಂಹ ಸಿನಿಮಾ ಆರಂಭದಲ್ಲಿ ನಿಧಾನವಾಗಿ ಸಾಗಿದರು ಅದರ ಕಂಟೆಂಟ್ ಮತ್ತು ಹೊಂಬಾಳೆ ಫಿಲಂಸ್ ನ(Hombale Production) ಮಾರ್ಕೆಟಿಂಗ್ನಿಂದ ಪ್ರೇಕ್ಷಕರನ್ನ ಸೆಳೆಯಲು ಆರಂಭಿಸಿತು. ಕೂಲಿ, ವಾರ್2 ಮತ್ತು ಕಿಂಗ್ಡಂನಂತಹ ದೊಡ್ಡ ಸಿನಿಮಾಗಳ ಸ್ಪರ್ಧೆ ಇದ್ದರೂ, ಅಲುಗಾಡದೆ ನಿಂತ ಈ ಸಿನಿಮಾ ದೇಶದಾದ್ಯಂತ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರದರ್ಶನ ಕಂಡು ಬಾರಿ ಯಶಸ್ಸು ಗಳಿಸಿದೆ.
ಈ ಸಿನಿಮಾ ಕೇವಲ ಭಾರತೀಯ ಆನಿಮೇಶನ್ ಸಿನಿಮಗಳಿಗಷ್ಟೇ (Animation Movies) ಅಲ್ಲ ವಿದೇಶಿ ಅನಿಮೇಶನ್ ಹಾಗೂ ಸೂಪರ್ ಹೀರೋ ಸಿನಿಮಾಗಳ ಗಳಿಕೆಯನ್ನು ಮೀರಿಸಿದ ಕಳೆದ ಕೆಲವು ವರ್ಷಗಳಲ್ಲಿ ಬಂದ ಸ್ಪೈಡರ್ ಮ್ಯಾನ್ ಸ್ಟಾರ್ ಡಾಕ್ಟರ್ಸ್ ಅವತಾರ್ ಸಿನಿಮಾಗಳು ಭಾರತದಲ್ಲಿ ಇಷ್ಟು ದೊಡ್ಡ ಮೊತ್ತ ಗಳಿಸಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಇದನ್ನೂ ಓದಿ: ಕನ್ನಡ ಚಿತ್ರರಂಗದ ಬಗ್ಗೆ ನಟಿ Daisy Shah ವಿವಾದಾತ್ಮಕ ಹೇಳಿಕೆ: ಹೊಕ್ಕಳಿನ ಮೇಲೆ ಫ್ರೂಟ್ ಸಲಾಡ್ ಹಾಕಿ ಶೂಟ್!
ಮುಂದೆ ಬರಲಿದೆ Mahavthar Narasimha ಯೂನಿವರ್ಸ್
ಮಹಾವತಾರ ನರಸಿಂಹ(Mahavthar Narasimha) ಸಿನಿಮಾದಲ್ಲಿ ವಿಷ್ಣುವಿನ ನರಸಿಂಹ ಅವತಾರದ ಕಥೆಯನ್ನ ಆನಿಮೇಶನ್ ಮೂಲಕ ಅದ್ಭುತವಾಗಿ ಹೇಳಲಾಗಿದೆ. ಅಶ್ವಿನ್ ಕುಮಾರ್ ನಿರ್ದೇಶನದ ಈ ಸಿನಿಮಾವನ್ನ ಶಿಲ್ಪಾ ದವನ್ ಕುಶಾಲ್ ದೇಸಾಯಿ ಮತ್ತು ಚೇತನ್ ದೇಸಾಯಿ ನಿರ್ಮಿಸಿದ್ದಾರೆ. ಕಡಿಮೆ ಬಜೆಟ್ ನಲ್ಲಿ ನಿರ್ಮಾಣಗೊಂಡಿದ್ದರು ಸಿನಿಮಾ ಗಳಿಸಿರುವ ಭಾರಿ ಯಶಸ್ಸು ಮುಂದಿನ ಸಿನಿಮಾಗಳನ್ನು ಇನ್ನಷ್ಟು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಲು ಪ್ರೇರಣೆ ನೀಡಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಚಿತ್ರದ ಯಶಸ್ಸಿನ ಬೆನ್ನಲ್ಲೇ ಮಹಾವತಾರ(Mahavthar Narasimha) ಸಿನಿಮಾ ಯೂನಿವರ್ಸನ್ನು ನಿರ್ಮಿಸಲು ತಂಡ ಮುಂದಾಗಿದೆ ಭಗವಾನ್ ವಿಷ್ಣುವಿನ ದಶಾವತಾರಗಳ ಆಧಾರದ ಮೇಲೆ ಮುಂದಿನ ವರ್ಷಗಳಲ್ಲಿ ಏಳು ಸಿನಿಮಾಗಳು ಬಿಡುಗಡೆಯಾಗಲಿವೆ.
ಮಹಾವತಾರ್ ಪರಶುರಾಮ (2027)
ಮಹಾವತಾರ ರಘುನಂದನ (2029)
ಮಹಾವತಾರ ದ್ವಾರಕಾಧೀಶ್ (2031)
ಮಹಾವತಾರ ಗೋಕುಲನಂದ (2033)
ಮಹಾವತಾರ್ ಕಲ್ಕಿ ಭಾಗ-1 (2035)
ಮಹಾವತಾರ ಕಲ್ಕಿ ಭಾಗ-2 (2037)
