Casting Couch: ಇತ್ತೀಚಿನ ದಿನಗಳಲ್ಲಿ ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಬಹುದೊಡ್ಡದಾಗಿ ಸದ್ದು ಮಾಡುತ್ತಿರುವ ಸಂಗತಿ ಎಂದರೆ ಅದು ಕಾಸ್ಟಿಂಗ್ ಕೌಚ್(Casting Couch). ಹೌದು ಇಂದು ಸಿನಿಮಾ ಲೋಕದಲ್ಲಿ ಗಾಸಿಪ್ ಗಳು ಮತ್ತು ವಿವಾದಗಳು ಇಲ್ಲದೆ ಇರುವ ನಟ ನಟಿಯರು ತೀರ ಅಪರೂಪ. ಆದರೆ ಇಲ್ಲೊಬ್ಬ ನಟಿ ಕಾಸ್ಟಿಂಗ್ ಕೌಚ್(Casting Couch) ಕುರಿತಾಗಿ ಬೋಲ್ಡ್ ಆಗಿ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ. ತೆಲುಗು ಖ್ಯಾತ ನಟಿ ದೀಕ್ಷಾ ಪಂತ್(Deeksha Panth) ನೀಡಿದ ಒಂದು ಶಾಕಿಂಗ್ ಹೇಳಿಕೆ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಸನ್ನಿಲಿಯೋನ್ ನಂತರ ತಮನ್ನಾ ಸರದಿ: ರಾಗಿಣಿ MMS ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ಬೋಲ್ಡ್ ಅವತಾರ
Deeksha Panth ಹೇಳಿದ್ದೇನು?
ಟಾಲಿವುಡ್ ಸಿನಿಮಾಗಳಲ್ಲಿ ಎರಡನೇ ಹೀರೋಯಿನ್ ಆಗಿ ನಟಿಸಿರುವ ದೀಕ್ಷಾ ಪಂತ್(Deeksha Panth) ಅವರು ಮೂಲತಃ ಉತ್ತರ ಭಾರತದ(North Indian) ಮೂಲದವರು. ಇತ್ತೀಚೆಗೆ ಅವರು ನೀಡಿದ ಸಂದರ್ಶನ ಒಂದರಲ್ಲಿ ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡುತ್ತಾ, ಕಾಸ್ಟಿಂಗ್ ಕೌಚ್(Casting Couch) ಕುರಿತಾದ ಪ್ರಶ್ನೆಗೆ ನೇರವಾಗಿ ಉತ್ತರಿಸಿದ್ದಾರೆ.
ನಿರೂಪಕರು ಸೆಕ್ಸ್ ಮತ್ತು ಯಶಸ್ಸು ಎರಡು ಸಂತೋಷಮಯವಾದವು ಅದರಲ್ಲಿ ಮೊದಲನೆಯದನ್ನು ನೀವು ನೀಡಿದರೆ ಎರಡನೆಯದು ತಾನಾಗಿಯೇ ಬರುತ್ತದೆ ಎಂಬ ಮಾತನ್ನು ಅನೇಕರಲ್ಲಿ ಕೇಳಿದ್ದೇವೆ, ಇದಕ್ಕೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದರು.
ಈ ಕುರಿತು ಉತ್ತರಿಸಿದ ನಟಿ ದೀಕ್ಷಾ ಪಂತ್ ಇಬ್ಬರಿಗೂ ಇಷ್ಟವಿದ್ದರೆ ನಿಮಗೇನು ಸಮಸ್ಯೆ? ಇದೆಲ್ಲ ಇಲ್ಲದೆ ಇದ್ದಿದ್ದರೆ ಇಷ್ಟು ಪ್ರತಿಭೆಗಳು ಚಿತ್ರರಂಗಕ್ಕೆ ಬರುತ್ತಲೇ ಇರಲಿಲ್ಲ. ಇಬ್ಬರಿಗೂ ಇಷ್ಟವಿರುವಾಗ ಮಧ್ಯದಲ್ಲಿರುವವರಿಗೆ ಯಾಕೆ ತಲೆನೋವು? ಎಂದು ನೇರವಾಗಿ ಉತ್ತರಿಸಿದ್ದಾರೆ.
ಇದನ್ನೂ ಓದಿ: ಕನ್ನಡ ಚಿತ್ರರಂಗದ ಬಗ್ಗೆ ನಟಿ Daisy Shah ವಿವಾದಾತ್ಮಕ ಹೇಳಿಕೆ: ಹೊಕ್ಕಳಿನ ಮೇಲೆ ಫ್ರೂಟ್ ಸಲಾಡ್ ಹಾಕಿ ಶೂಟ್!
ಎಲ್ಲರನ್ನು ಗೊಂದಲಕ್ಕೀಡು ಮಾಡಿದ ಹೇಳಿಕೆ
ದೀಕ್ಷಾ(Deeksha Panth) ಅವರ ಈ ಹೇಳಿಕೆರೆ ಹಲವರನ್ನ ಗೊಂದಲಕ್ಕಿಡು ಮಾಡಿದೆ. ಒಂದೆಡೆ ಈ ರೀತಿ ಹೇಳಿಕೆ ನೀಡಿದ ದೀಕ್ಷಾ, ನನಗೆ ವೈಯಕ್ತಿಕವಾಗಿ ಇದರ ವಿರುದ್ಧ ಇದ್ದೇನೆ. ನಾನು ಇದನ್ನು ಒಪ್ಪುವುದಿಲ್ಲ, ನಾನು ಇಂತಹ ವಿಷಯಗಳಿಂದ ಆದಷ್ಟು ದೂರ ಇರುತ್ತೇನೆ ಎಂದು ತಿಳಿಸಿದ್ದಾರೆ.
ತಮ್ಮ ಆರಂಭಿಕ ದಿನಗಳಲ್ಲಿ ಆದಂತಹ ಇಂತಹ ಅನುಭವಗಳನ್ನು ಹಂಚಿಕೊಂಡಿರುವ ದೀಕ್ಷಾ(Deeksha Panth), ಆರಂಭದಲ್ಲಿ ಅವಕಾಶಗಳಿಗಾಗಿ ಪ್ರಯತ್ನಿಸಿದಾಗ ಕೆಲವರು ಇಂತಹ ಸುಳಿವುಗಳನ್ನು ನೀಡುತ್ತಿದ್ದರು, ಆದರೆ ನಾನು ತಕ್ಷಣ ನೋ ಎಂದು ಹೇಳುತ್ತಿದ್ದೆ, ಅದಕ್ಕೆ ಅವರು ನನ್ನನ್ನು ಸಿನಿಮಾದಿಂದ ತೆಗೆದುಹಾಕುತ್ತಿದ್ದರು. ಈ ಕಾರಣಕ್ಕಾಗಿಯೇ ನಾನು ನಟಿಯಾಗಿ ಹೆಚ್ಚು ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ದೀಕ್ಷಾ ಪಂತ್ ಅವರ ಈ ಬೋಲ್ಡ್ ಹೇಳಿಕೆ ಚಿತ್ರರಂಗದ ಈ ಸೂಕ್ಷ್ಮ ವಿಷಯದ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟು ಹಾಕಿದೆ.
