ನವದೆಹಲಿ: ಭಾರತೀಯ ನೌಕಾಪಡೆ(Indian Navy) ಪ್ರತಿ ವರ್ಷ ತನ್ನ ಬಲವನ್ನು ಹಿಗ್ಗಿಸಿಕೊಳ್ಳುತ್ತ ದೈತ್ಯ ಶಕ್ತಿಯಾಗಿ ಬೆಳೆಯುತ್ತಿದೆ. ಇದೀಗ ಅದರ ಭಾಗವಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh) ಅವರು ಇತ್ತೀಚೆಗೆ ಐ ಎನ್ ಎಸ್ ಹಿಮಗಿರಿ(INS Himagiri) ಮತ್ತು ಐಎನ್ಎಸ್ ಉದಯಗಿರಿ(INS Udayagiri) ಎಂಬ ಎರಡು ಹೊಸ ಯುದ್ಧ ನೌಕೆಗಳನ್ನ(Warships) ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಭಾರತೀಯ ನೌಕಾಪಡೆಯ(Indian Navy) ಇತಿಹಾಸದಲ್ಲಿಯೇ ಇದೇ ಮೊದಲ ಬಾರಿ ಎರಡು ದೊಡ್ಡ ಯುದ್ಧ ನೌಕೆಗಳು(Warships) ಸೇರ್ಪಡೆಯಾಗಿರುವುದು ವಿಶೇಷ ಸಂಗತಿಯಾಗಿದೆ.
ಮೇಕ್ ಇನ್ ಇಂಡಿಯಾಗೆ ಬಲ
ಈ ನೀಲಗಿರಿ ಕ್ಲಾಸ್(Nilagiri Class) ಯುದ್ಧ ನೌಕೆಗಳ ವಿನ್ಯಾಸ ಮತ್ತು ನಿರ್ಮಾಣದಲ್ಲಿ(Warship Design and Building) ಶೇಕಡ 75 ರಷ್ಟು ದೇಶಿಯ ತಂತ್ರಜ್ಞಾನವನ್ನು ಬಳಸಲಾಗಿದೆ. ಇದು ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ(Make in India) ಕಾರ್ಯಕ್ರಮಕ್ಕೆ ನಿಜವಾದ ಬಲ ತುಂಬಿದೆ. ಈ ನೌಕೆಗಳ ಸೇರ್ಪಡೆಯಿಂದ ಭಾರತದ ನೌಕಾಪಡೆಯ(Indian Navy) ಯುದ್ಧ ಸನ್ನದ್ಧತೆ ಮತ್ತಷ್ಟು ಹೆಚ್ಚಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಅಮೆರಿಕ ಶುಲ್ಕ ಸಮರ: 48.2 ಬಿಲಿಯನ್ ಡಾಲರ್ ಮೌಲ್ಯದ ರಫ್ತಿಗೆ ಬಹುದೊಡ್ಡ ಹೊಡೆತ-ಮುಂದೇನು?
ಹಾಗೆಯೇ ಐ ಎನ್ ಎಸ್ ಉದಯಗಿರಿ( INS Udayagiri) ನೇವಿ ವಾರ್ಷಿಪ್ ಡಿಸೈನ್ ಬ್ಯೂರೋ, ವಿನ್ಯಾಸಗೊಳಿಸಿದ 100ನೇ ಯುದ್ಧ ನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇತ್ತೀಚೆಗೆ ನಿವೃತ್ತಿಯಾದ ಮತ್ತು ದೇಶಕ್ಕೆ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಹಳೆಯ ಯುದ್ಧ ನೌಕೆಗಳ ಹೆಸರನ್ನೇ ಈ ನೌಕೆಗಳಿಗೆ ಇಡಲಾಗಿದೆ. ಇವುಗಳು ಮುಂದಿನ ದಿನಗಳಲ್ಲಿ ಪೂರ್ವ ನೌಕಾಪಡೆಗೆ ಸೇರಿ ಹಿಂದೂ ಮಹಾಸಾಗರದಲ್ಲಿ ಭಾರತದ ಹಿತಾಸಕ್ತಿಗಳನ್ನ ರಕ್ಷಿಸಲಿವೆ.
ಯುದ್ಧನೌಕೆಗಳ ವಿವರಗಳು
ಐ ಎನ್ ಎಸ್ ಉದಯಗಿರಿ: ಮುಂಬೈನಲ್ಲಿ(Mumbai) ನಿರ್ಮಾಣವಾಗಿರುವ ಈ ನೌಕೆಯ ಉದ್ದ 149 ಮೀಟರ್. ಇದರ ಗರಿಷ್ಠ ವೇಗ ಗಂಟೆಗೆ 52 ಕಿಲೋಮಿಟರ್. ಇದರಲ್ಲಿ ವಾಯುಪಡೆ ರಕ್ಷಣೆಗಾಗಿ 32 ಬರಾಕ್ 8, ಬ್ರಹ್ಮೋಸ್ ಕ್ಷಿಪಣಿಗಳು(Brahmos Missile) ಸೇರಿದಂತೆ ಹಲವು ಶಕ್ತಿಶಾಲಿ ಕ್ಷಿಪಣಿಗಳು ಮತ್ತು ಆಯುಧಗಳಿವೆ. ಒಂದೇ ಸಮಯದಲ್ಲಿ ಎರಡು ಹೆಲಿಕ್ಯಾಪ್ಟರ್ ಗಳನ್ನು ಕಾರ್ಯಾಚರಣೆಗೆ ಬಳಸಬಹುದಾಗಿದೆ.
ಐ ಎನ್ ಎಸ್ ಹಿಮಗಿರಿ: ಕೊಲ್ಕತ್ತಾದಲ್ಲಿ ನಿರ್ಮಾಣವಾಗಿರುವ ಈ ನೌಕೆಯು, ಉದಯಗಿರಿ ಯುದ್ಧ ನೌಕೆಯಂತೆಯೇ ಸಾಮರ್ಥ್ಯ ಹೊಂದಿದೆ.(Udayagiri)ಇದರಲ್ಲಿ ವಾಯುಪಡೆ ರಕ್ಷಣೆಗಾಗಿ 32 ಬರಾಕ್ 8 ಕ್ಷಿಪಣಿಗಳು. ಶತ್ರು ನೌಕೆಗಳ ಮೇಲೆ ದಾಳಿಗೆ ಎಂಟು ಬ್ರಹ್ಮೋಸ್ ಕ್ಷಿಪಣಿಗಳು(Brahmos Missile) ಮತ್ತು ಶತ್ರು ಜಲಾಂತರಗಾಮಿಗಳನ್ನು(Submarines) ತಪ್ಪಿಸಲು ಮರೀಚ್ ಟಾರ್ಪಿಡೋ ಡಿಕಾಯ್ ಸಿಸ್ಟಮ್ ಇದೆ.
ಈ ಎರಡು ನೌಕೆಗಳಲ್ಲಿ ಅತಿ ಆಧುನಿಕ ಶಸ್ತ್ರಾಸ್ತ್ರಗಳನ್ನ ಅಳವಡಿಸಲಾಗಿದ್ದು ಮೇಲ್ಮೈಯಿಂದ ಮೇಲ್ಮೈಗೆ ಮತ್ತು ಮೇಲ್ಮೈ ಇಂದ ಗಾಳಿಗೆ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯವಿದೆ. ಒಟ್ಟಾರೆಯಾಗಿ ಈ ಎರಡು ನೌಕೆಗಳ ಸೇರ್ಪಡೆಯಿಂದಾಗಿ ನಮ್ಮ ರಕ್ಷಣಾ ವ್ಯವಸ್ಥೆಯನ್ನ ಇನ್ನಷ್ಟು ಬಲಪಡಿಸಿದಂತಾಗಿದೆ.
