ನವದೆಹಲಿ: ಟ್ರಂಪ್ ಆಡಳಿತದ ಅಮೆರಿಕವು ಭಾರತೀಯ ಉತ್ಪನ್ನಗಳ ಮೇಲೆ ಶೇ.50ರಷ್ಟು ಸುಂಕವನ್ನು(Trump Tairffs India) ಜಾರಿಗೆ ತಂದಿರುವುದು ಕೇವಲ ಆರ್ಥಿಕ ಹೊಡೆತವಾಗಿ ಮಾತ್ರ ಉಳಿದಿಲ್ಲ ಇದು ಎರಡು ದೇಶಗಳ ನಡುವಿನ ರಾಜ ತಾಂತ್ರಿಕ ಭಿರುಕಿನ ಸ್ಪಷ್ಟ ಸೂಚನೆಯಾಗಿದೆ. ರಷ್ಯಾದಿಂದ(Russia)ಭಾರತ ತೈಲ ಖರೀದಿಸುತ್ತಿರುವುದಕ್ಕೆ ಪ್ರತಿಕಾರವಾಗಿ ಅಮೆರಿಕ(Trump Tairffs India) ಈ ಕ್ರಮ ಕೈಗೊಂಡಿರುವುದು ಸ್ಪಷ್ಟವಾಗಿದೆ. ಈ ಬೆಳವಣಿಗೆಯು ಭಾರತಕ್ಕೆ ತನ್ನ ವಿದೇಶಿ ವ್ಯಾಪಾರ ನೀತಿಗಳನ್ನು(India Forgin Policy) ಮತ್ತೊಮ್ಮೆ ಪರಿಶೀಲಿಸಿಕೊಳ್ಳುವ ಅನಿವಾರ್ಯತೆಯನ್ನು ಸೃಷ್ಟಿಸಿದೆ.
ಸುಂಕ ವಿಧಿಸಲು ರಷ್ಯಾ ತೈಲ ಖರೀದಿಯ ಪ್ರಮುಖ ಕಾರಣ?
ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್(American President Donald Trump) ಆರಂಭದಲ್ಲಿ ಶೇ.25 ರಷ್ಟು ಸುಂಕ ಘೋಷಿಸಿದ್ದು ವ್ಯಾಪಾರ ನೀತಿಯ(Trade Policy) ಭಾಗವಾಗಿತ್ತು. ಆದರೆ ಈ ತಿಂಗಳ ಆರಂಭದಲ್ಲಿ ರಷ್ಯಾದ ತೈಲ(Russian Oil) ಖರೀದಿಯ ಕಾರಣಕ್ಕೆ ಹೆಚ್ಚುವರಿ ಶೇ.25 ರಷ್ಟು ಸುಂಕವನ್ನು ವಿಧಿಸಲು ಸಹಿ ಹಾಕಿದ ಬಳಿಕ ಇದು ಕೇವಲ ವ್ಯಾಪಾರ ನೀತಿಯಾಗಿ ಉಳಿದಿಲ್ಲ, ಬದಲಾಗಿ ರಾಜಕೀಯ ಒತ್ತಡ(Political Presure) ಎಂಬುದು ಇದೀಗ ಸ್ಪಷ್ಟವಾಗಿದೆ. ಅಮೆರಿಕ(America) ತನ್ನ ಮಿತ್ರ ರಾಷ್ಟ್ರಗಳ ಮೇಲೆ ಅದರಲ್ಲೂ ಭಾರತದಂತಹ ಪ್ರಮುಖ ಮಿತ್ರನ ಮೇಲೆ ತನ್ನ ನಿಲುವಿಗೆ ಬದ್ಧವಾಗಿರದಿದ್ದಾಗ ನಿರ್ಬಂಧಗಳನ್ನು ಹೇರಲು ಹಿಂಜರಿಯುವುದಿಲ್ಲ ಎಂಬುದನ್ನು ಈ ಘಟನೆ ತೋರಿಸಿಕೊಟ್ಟಿದೆ. ಇದು ಭಾರತದ(India) ಭವಿಷ್ಯದ ರಾಜಕೀಯ ಮತ್ತು ಆರ್ಥಿಕ ನಿರ್ಧಾರ ಬಹಳಷ್ಟು ಪರಿಣಾಮ ಬೀರಲಿದೆ.
ಭಾರತ ಸರ್ಕಾರದ ಪ್ರತಿಕ್ರಿಯೆ ಹೇಗಿರಬಹುದು
ಈ ಸನ್ನಿವೇಶಕ್ಕೆ ಪ್ರತಿಯಾಗಿ ಭಾರತ ಸರ್ಕಾರ ಕೆಲವೊಂದು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಮೊದಲನೆಯದಾಗಿ ದ್ವಿಪಕ್ಷಿಯ ಮಾತುಕತೆಗಳ ಮೂಲಕವಾಗಿ ಅಮೆರಿಕಾದ(America) ಮೇಲೆ ತನ್ನ ರಾಜ ತಾಂತ್ರಿಕ ಒತ್ತಡ ಹೇರುವುದು ಇನ್ನೂ ಎರಡನೇದಾಗಿ ಈ ಸುಂಕಗಳ ವಿರುದ್ಧವಾಗಿ ವಿಶ್ವ ವ್ಯಾಪಾರ ಸಂಸ್ಥೆ (WTO) ಯಲ್ಲಿ ದೂರು ದಾಖಲಿಸುವ ಸಾಧ್ಯತೆ ಎದ್ದು ಕಾಣುತ್ತಿದೆ.
ಇನ್ನು ದೀರ್ಘಾವಧಿಯಲ್ಲಿ ಭಾರತ ತನ್ನ ರಫ್ತು ಮಾರುಕಟ್ಟೆಗಳನ್ನ ವೈವಿಧ್ಯಗೊಳಿಸಬೇಕಾದಂತಹ ಅನಿವಾರ್ಯತೆ ಇದೀಗ ಎದುರಾಗಿದೆ(India Export Businesses). ಯುರೋಪಿಯನ್ ಯೂನಿಯನ್ ಮತ್ತು ಚೀನಾ, ಆಗ್ನೇಯ ಏಷ್ಯಾ ದೇಶಗಳ ಮಾರುಕಟ್ಟೆಗಳಲ್ಲಿ ಭಾರತೀಯ ವಸ್ತುಗಳ ರಫ್ತು ಹೆಚ್ಚಿಸಲು ಪ್ರಯತ್ನಿಸಬಹುದು ಇದು ಆಸನ ನಿರ್ಬರ ಭಾರತದ ಕನಸಿಗೆ ಮತ್ತಷ್ಟು ಬಲ ತುಂಬಲಿದೆ.
