America: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ(Russia Ukraine War) ಭಾರತವೇ ಪ್ರಮುಖ ಕಾರಣ ಎಂದು ಅಮೆರಿಕಾದ ಶ್ವೇತ ಭವನದ(America Whitehouse) ವ್ಯಾಪಾರ ಸಲಹೆಗಾರ ಪೀಟರ್ ನವರೊ(Peter Naverro) ಗಂಭೀರ ಆರೋಪ ಮಾಡಿದ್ದಾರೆ. ರಷ್ಯಾದಿಂದ ಭಾರತ ನಿರಂತರವಾಗಿ ತೈಲ್ಯ ಖರೀದಿಸುತ್ತಿರುವುದೇ ಈ ಸುದೀರ್ಘ ಸಂಘರ್ಷಕ್ಕೆ ಕಾರಣ ಎಂದು ಅವರು ಹೇಳಿದ್ದು, ಇದನ್ನು ‘ಮೋದಿ ಯುದ್ಧ’ ಎಂದು ಕರೆದು ಮತ್ತೊಂದು ದೊಡ್ಡ ವಿವಾದ ಸೃಷ್ಟಿಸಿದ್ದಾರೆ.
ಬ್ಲೂಮ್ ಬರ್ಗ್(Bloomberg) ಜೊತೆಗಿನ ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು ರಷ್ಯಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕಗೊಳಿಸುವ ಜಾಗತಿಕ ಪ್ರಯತ್ನಗಳಿಗೆ ಭಾರತ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದರು. ಭಾರತ(India) ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿಸುವುದರಿಂದ ಆ ಹಣ ರಷ್ಯಾಗೆ ಯುದ್ಧಕ್ಕೆ(Russia War) ತೈಲ ತುಂಬಿದಂತಾಗುತ್ತದೆ. ಇದು ಅಮೆರಿಕ(America )ಮತ್ತು ಯುರೋಪಿಯನ್ ರಾಷ್ಟ್ರಗಳು(European Countries) ಉಕ್ರೇನ್ (Ukraine) ಸಹಾಯ ಮಾಡಲು ಹಣ ವಹಿಸುವಂತೆ ಮಾಡುತ್ತಿದೆ ಎಂದು ನವರೊ(Peter Naverro) ಕಿಡಿಕಾರಿದ್ದಾರೆ.
ಇದನ್ನೂ ಓದಿ: 84 ದಿನಗಳ ಬಳಿಕ RCB ಭಾವುಕ ಪೋಸ್ಟ್: ‘ನಿಮ್ಮೊಂದಿಗೆ ನಾವಿದ್ದೇವೆ’
ಭಾರತದಿಂದ ಅಮೆರಿಕಕ್ಕೆ ನಷ್ಟ
ಉಕ್ರೇನ್(Ukraine) ನಮ್ಮ ಮತ್ತು ಯುರೋಪಿಯನ್ನರ(European Countries) ಬಳಿ ಬಂದು ನಮಗೆ ಹೆಚ್ಚಿನ ಹಣ ನೀಡಿ ಎಂದು ಕೇಳುತ್ತಿದೆ. ಆದರೆ ಭಾರತ ಮಾಡುತ್ತಿರುವ ಕೆಲಸದಿಂದ ಅಮೆರಿಕಾದ ಪ್ರತಿಯೊಬ್ಬರಿಗೂ ನಷ್ಟವಾಗುತ್ತಿದೆ. ಹೆಚ್ಚಿನ ಭಾರತೀಯ ಸುಂಕಗಳಿಂದ ಕಾರ್ಮಿಕರಿಗೆ ಸಮಸ್ಯೆಯಾಗುತ್ತಿದೆ. ಅಷ್ಟೇ ಅಲ್ಲದೆ ತೆರಿಗೆದಾರರ ಪರಿಸ್ಥಿತಿಯು ಹದಗೆಡುತ್ತಿದೆ. ಇದೆಲ್ಲದಕ್ಕೂ ಮುಖ್ಯ ಕಾರಣ ಮೋದಿ ಅವರು ರಷ್ಯಾಕ್ಕೆ(Russia) ಯುದ್ಧಕ್ಕಾಗಿ ಹಣ ಒದಗಿಸುತ್ತಿರುವುದು. ಎಂದು ನವರೋ(Peter Naverro) ನೇರವಾಗಿ ಆರೋಪಿಸಿದರು.
ಭಾರತದ ನಿಲುವನ್ನು ದುರಹಂಕಾರ ಎಂದ ನವರೊ
ನವರೋ(Peter Naverro) ಭಾರತದ ವಿದೇಶಾಂಗ ನೀತಿಯನ್ನು ಸಹ ತೀವ್ರವಾಗಿ ಟೀಕಿಸಿದ್ದಾರೆ. ತೈಲ್ಯ ನಿರ್ಧಾರಗಳಲ್ಲಿ ಭಾರತ ತನ್ನ ಸಾರ್ವಭೌಮತ್ವವನ್ನು ಪ್ರತಿಪಾದಿಸುತ್ತಿರುವುದನ್ನು ಅವರು ದುರಹಂಕಾರದ ವರ್ತನೆ ಎಂದು ಕರೆದಿದ್ದಾರೆ. ಭಾರತ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಹಾಗಾಗಿ ಎಲ್ಲಾ ಪ್ರಜಾ ಪ್ರಭುತ್ವ ರಾಷ್ಟ್ರಗಳಂತೆ ಇದು ವರ್ತಿಸಬೇಕು. ಪ್ರಜಾಪ್ರಭುತ್ವಗಳ ಪರವಾಗಿ ನಿಲ್ಲಬೇಕು ಎಂದು ನವರ ಒತ್ತಾಯಿಸಿದ್ದಾರೆ. ಅಲ್ಲದೆ ರಷ್ಯಾ ಮತ್ತು ಚೀನಾದೊಂದಿಗೆ ಭಾರತ ಇಟ್ಟುಕೊಂಡಿರುವ ಸಂಬಂಧಗಳನ್ನು ಟೀಕಿಸಿ, ಆದೇಶಗಳನ್ನು ಸರ್ವಾಧಿಕಾರಿಗಳು ಎಂದು ಕರೆದಿದ್ದಾರೆ.
ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ ಕಬಳಿಕೆದಾರರ ಆಸ್ತಿಪಾಸ್ತಿ ಜಪ್ತಿ- ಮುಂದುವರಿದ ತನಿಖೆ
ಭಾರತದ ಪ್ರತ್ಯುತ್ತರ
ನವರೊ(Peter Naverro) ಅವರ ಈ ಆರೋಪಗಳು, ಟ್ರಂಪ್(Donald Trump) ಆಡಳಿತವು ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಹೊಸ ಸುಂಕಗಳನ್ನು ಜಾರಿಗೆ ತಂದ ನಂತರ ಬಂದಿವೆ. ಇದರಲ್ಲಿ ಶೇಕಡ 25ರಷ್ಟು ಸುಂಕವು ಭಾರತ ರಷ್ಯಾದಿಂದ ತೈಲ್ಯ ಮತ್ತು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದೆ. ಈ ಕ್ರಮಕ್ಕೆ ಭಾರತದ ವಿದೇಶಾಂಗ ಸಚಿವಾಲಯ(Indian Foeign Ministry) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಭಾರತದ ಇಂಧನ ನಿರ್ಧಾರಗಳು ಮಾರುಕಟ್ಟೆ ಆಧಾರಿತವಾಗಿದ್ದು ದೇಶದ 140 ಕೋಟಿ ಜನರಿಗೆ ಇಂಧನ ಭದ್ರತೆ ಒದಗಿಸುವುದು ಅತ್ಯಗತ್ಯ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ
ಎಸ್ ಜಯಶಂಕರ್ ತೀಕ್ಷ್ಣ ಪ್ರತಿಕ್ರಿಯೆ
ವಿದೇಶಾಂಗ ಸಚಿವ ಎಸ್ ಜೈ ಶಂಕರ್(S Jayshankar) ಅವರು ಅಮೆರಿಕಾದ(America)ಈ ನಿಲುವನ್ನು ಬೂಟಾಟಿಕೆ ಎಂದು ಕರೆದಿದ್ದಾರೆ. ರಷ್ಯಾದಿಂದ(Russia) ಹೆಚ್ಚು ತೈಲ ಖರೀದಿಸುವ ದೊಡ್ಡ ದೇಶ ಭಾರತ ಅಲ್ಲ, ಅದು ಚೀನಾ(China)ಅತಿ ಹೆಚ್ಚು ಎಲ್ ಎನ್ ಜಿ ಖರೀದಿಸುತ್ತಿರುವುದು ಯುರೋಪಿಯನ್ ಯೂನಿಯನ್. ಜಾಗತಿಕ ಇಂಧನ ಮಾರುಕಟ್ಟೆಗಳು ಸ್ಥಿರವಾಗಿ ಇರಬೇಕಾದರೆ ರಷ್ಯಾದ ತೈಲ ಖರೀದಿಸುವಂತೆ ನಮಗೆ ಪ್ರೋತ್ಸಾಹ ನೀಡಲಾಗಿತ್ತು. ಎಂದು ಜಯಶಂಕರ್(S Jayshankar) ಮಾಸ್ಕೋದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಈ ರೀತಿಯ ಪರಿಸ್ಥಿತಿಯಲ್ಲಿ ಭಾರತದ ಮೇಲೆ ಇಂತಹ ಆರೋಪಗಳನ್ನು ಮಾಡುವುದು ಗೊಂದಲಮಯವಾಗಿದೆ ಎಂದು ಅವರು ಹೇಳಿದ್ದಾರೆ. ಒಟ್ಟಿನಲ್ಲಿ ರಷ್ಯಾ ಯುದ್ಧದ ವಿಚಾರದಲ್ಲಿ ಅಮೇರಿಕ ಮತ್ತು ಭಾರತದ ನಡುವಿನ ರಾಜಕೀಯ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗಿದೆ.
