ಕೇರಳ: ಕ್ರಿಕೆಟ್ ರಂಗದಲ್ಲಿ ಏಷ್ಯಾ ಕಪ್ 2025ರ(Asia Cup 2025) ಟೀಮ್ ಇಂಡಿಯಾ(Team India) ತಂಡಕ್ಕೆ ಸಂಜು ಸ್ಯಾಮ್ಸನ್(Sanju Samson) ಆಯ್ಕೆಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಶುಭ್ ಮನ್ ಗಿಲ್(Shubman Gill) ತಂಡಕ್ಕೆ ಮರಳಿದ ನಂತರ ಆರಂಭಿಕ ಸ್ಥಾನಕ್ಕೆ ಸ್ಪರ್ಧೆ ಹೆಚ್ಚಾಗಿದ್ದರಿಂದ ಸಂಜು ಅವರ ಸ್ಥಾನ ಅನುಮಾನದಲ್ಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಸಂಜು ಸ್ಯಾಮ್ಸನ್(Sanju Samson) ಅವರ ಆಟವು ಎಲ್ಲಾ ಊಹಾಪೋಹಗಳನ್ನು ಸುಳ್ಳಾಗಿಸಿದ್ದು ಆಯ್ಕೆ ಮಂಡಳಿಯನ್ನು ಹೊಸ ಯೋಚನೆಗೆ ತಳ್ಳಿದೆ.
ಕೇರಳ ಕ್ರಿಕೆಟ್ ಲೀಗ್ ನಲ್ಲಿ(Kerala Cricket League) ಸಂಜು ಸ್ಯಾಮ್ಸನ್(Sanju Samson) ತೋರುತ್ತಿರುವ ಅಬ್ಬರದ ಪ್ರದರ್ಶನ ನಿಜಕ್ಕೂ ಎಲ್ಲರನ್ನು ಅಚ್ಚರಿಗೀಡಾಗುಂತೆ ಮಾಡಿದೆ. ಕಳೆದ ಐದು ದಿನಗಳಲ್ಲಿ ಅವರು ಸತತ ಮೂರು ಅರ್ಧಶತಕಗಳನ್ನು ಬಾರಿಸುವ ಮೂಲಕ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಕೆ ಪಿ ಎಲ್ ನಲ್ಲಿ ಸಂಜು ಸ್ಫೋಟಕ ಬ್ಯಾಟಿಂಗ್
ಕೇರಳ ಕ್ರಿಕೆಟ್ನಲ್ಲಿ( Kerala Cricket) ಕೊಚ್ಚಿ ಬ್ಲೂ ಟೈಗರ್ ತಂಡದ ನಾಯಕನಾಗಿ ಸಂಜು(Sanju Samson) ಆಡುತ್ತಿದ್ದಾರೆ. ಆಗಸ್ಟ್ 28ರಂದು, ತ್ರಿವೇಂದ್ರಮ್ ರಾಯಲ್ಸ್ ವಿರುದ್ಧ ನಾಡದ ಪಂದ್ಯದಲ್ಲಿ ಸಂಜು(Sanju Samson) ಮತ್ತೊಮ್ಮೆ ಆರಂಭಿಕವಾಗಿ ಕಣಕ್ಕಿಳಿದು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 31 ಎಸೆತಗಳಲ್ಲಿ ಅರ್ಥಶತಕ ಪೂರೈಸಿದ ಅವರು ಕೊನೆಗೆ 37 ಎಸೆತಗಳಲ್ಲಿ 62 ರನ್ ಗಳಿಸಿ ಮಿಂಚಿದ್ದರು. ಈ ಇವಿನಿಂಗ್ಸ್ ನಲ್ಲಿ 5 ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳನ್ನ ಸಿಡಿಸಿದ್ದರು.
ಇದನ್ನೂ ಓದಿ: ಗೌರಿ ಗಣೇಶ ಹಬ್ಬದ ಹಿನ್ನೆಲೆ ಚಿನ್ನಪ್ರಿಯರಿಗೆ ಶಾಕ್: ಮತ್ತೆ ಗಗನಕ್ಕೆ ಏರಿದ ಚಿನ್ನದ ಬೆಲೆ
ಸಂಜು(Sanju Samson) ಅವರ ಈ ಪ್ರದರ್ಶನ ಯಾವುದೇ ಸಾಮಾನ್ಯ ಕ್ರಿಕೆಟ್ನಂತೆ ಇರಲಿಲ್ಲ, ಕೇವಲ ಐದು ದಿನಗಳ ಅಂತರದಲ್ಲಿ ಇದು ಅವರ ಸತತ ಮೂರನೇ ಆದರ್ಶತಕ. ಇದಕ್ಕೂ ಮೊದಲು ಆಗಸ್ಟ್ 24ರಂದು 121 ರನ್ ಹಾಗೂ ಆಗಸ್ಟ್ 26ರಂದು 89 ರನ್ ಗಳ ಅಮೋಘ ಇನ್ನಿಂಗ್ಸ್ ಗಳನ್ನು ಅವರು ಆಡಿದ್ದರು.
ಆಯ್ಕೆ ಮಂಡಳಿಗೆ ಹೊಸ ಸವಾಲು
ಸಂಜು ಸ್ಯಾಮ್ಸನ್ (Sanju Samson) ಅವರ ಈ ಅದ್ಭುತ ಪ್ರದರ್ಶನ ಈಗ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ, ಅದರಲ್ಲೂ ವಿಶೇಷವಾಗಿ ಕೊಚ್ ಗೌತಮ್ ಗಂಭೀರ್(Gautam Gambhir) ಅವರಿಗೆ ದೊಡ್ಡ ತಲೆನೋವಾಗಿದೆ. ಏಷ್ಯಾಕಪ್ ಗೆ(Asia Cup2025) ಶುಭ್ ಮನ್ ಗಿಲ್(Shubham Gill) ಅವರನ್ನ ಉಪನಾಯಕನನ್ನಾಗಿ ಆಯ್ಕೆ ಮಾಡಿದ್ದರಿಂದ ಅವರು ಆರಂಭಿಕನಾಗಿ ಆಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಇದರಿಂದ ಸಂಜು ಸ್ಯಾಮ್ಸಂಗ್ ಮಾಧ್ಯಮ ಕ್ರಮದಲ್ಲಿ ಆಡಬೇಕಾಗುತ್ತಿತ್ತು. ಆದರೆ ಸಂಜು, ಈ ಲೀಗ್ ನಲ್ಲಿ ಆರಂಭಿಕವಾಗಿ ಆಡಿ ಆ ಕ್ರಮಂಕದಲ್ಲಿಯೇ ನಾನು ಹೆಚ್ಚು ಪರಿಣಿತನಾಗಬಲ್ಲೆ ಎಂದು ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ.
ಇದನ್ನೂ ಓದಿ: Ukraine Russia War: ಇದು ‘ಮೋದಿ ಯುದ್ಧ’ ಎಂದ ವೈಟ್ ಹೌಸ್ ಅಧಿಕಾರಿ, ಭಾರತದ ವಿರುದ್ಧ ಅಮೆರಿಕ ಟೀಕಾಸ್ತ್ರ
ಒಪನರ್ ಆಗಿ ಮಿಂಚಿದ್ದರು ಮಾಧ್ಯಮ ಕ್ರಮಾಂಕದಲ್ಲಿ ಆಡಿಸುವುದು ಎಷ್ಟು ಸರಿ?
ಕಳೆದ ವರ್ಷ ನಡೆದ ಸೌತ್ ಆಫ್ರಿಕಾ ವಿರುದ್ಧ ನಡೆದ T20 ಸರಣಿಯಲ್ಲಿ Back to Back ಓಪನರ್ ಆಗಿ 2 ಶತಕ ಸಿಡಿಸಿದ್ದ ಸಂಜು ಸ್ಯಾಮ್ಸನ್ ಅವರನ್ನು ಹೊರತು ಪಡಿಸಿ ಬೇರ್ಯಾವುದೇ ಆಟಗಾರರನ್ನು ಓಪನರ್ ಆಗಿ ಆಡಿಸಲು ಹೇಗೆ ಸಾಧ್ಯ.
ಸಂಜು ಸ್ಯಾಮ್ಸನ್ ಅವರನ್ನು ಏಷ್ಯಾ ಕಪ್ ಟಿ20 ಟೂರ್ನಿಮೆಂಟ್ಗೆ ಆಯ್ಕೆ ಮಾಡುವ ವೇಳೆಯೂ ತಂಡದಲ್ಲಿ ಕೊನೆ ಆಟಗಾರನಾಗಿ ಆಯ್ಕೆಮಾಡಿದ್ದಾರೆ. ಇಷ್ಟೆಲ್ಲಾ ಅದ್ಭುತ ಪ್ರದರ್ಶನ ನೀಡಿದ್ದರು ಮ್ಯಾನೇಜ್ಮೆಂಟ್ ಸಂಜು ಸ್ಯಾಮ್ಸನ್ ಅವರನ್ನು ಹೀಗೆ ಕಡೆಗಣಿಸುತ್ತಿರುವುದಕ್ಕೆ ಕಾರಣವೇನು ಎಂಬುದೇ ತಿಳಿಯುತ್ತಿಲ್ಲ.
