
The Queen of Flowers Gerbera: ನಳನಳಿಸೊ ತಿಳಿ ಕೇಸರಿ ಬಣ್ಣದ ಹೂವೊಂದು ನಮ್ಮನೆಗೆ ಇಂದು ಅತಿಥಿಯಾಗಿ ಬಂದಿತು. ಮನೆಗೆ ಅತಿಥಿಗಳು ಬಂದಾಗ ಸುಮ್ಮನಿರಲಾಗುವುದೆ ;ಏನಾದರೂ ಉಪಚಾರ ಮಾಡಬೇಕಲ್ಲ! ಅದಕ್ಕೆಂದೇ ಕುಡಿಯಲು ನೀರು ಕೊಟ್ಟೆ. ಊಹೂಂ ಬೇಡವೆಂದು ನಯವಾಗಿ ತಿರಸ್ಕರಿಸಿತು.ಸರಿ ‘ನೀವು ಯಾರು, ಎಲ್ಲಿಂದ ಬಂದಿರುವಿರೆಂದು ತಿಳಿಸಿಕೊಡಿ’ ಎಂದು ಕೇಳಿಕೊಂಡೆ.
ನಾನು ‘ಜೆರ್ಬರ’.ನನ್ನದು ಸೂರ್ಯಕಾಂತಿ ಹೂವಿನ ಕುಟುಂಬಕ್ಕೆ ಸೇರಿದ ಪುಷ್ಪವರ್ಗ.ವಿಜ್ಞಾನದಲ್ಲಿ ನನಗೆ ‘ಜೆರ್ಬರ ಡೈಸಿ’ (Gerbera Daisy) ಎಂದು ಕರೆಯುತ್ತಾರೆ.it means “Symbol of Innocence and Purity and Beauty as Well”. ಕರ್ನಾಟಕದಲ್ಲಿ ಚಿಕ್ಕಮಕ್ಕಳು ನನ್ನ ಹೆಸರನ್ನು ಉಚ್ಛಾರಣೆ ಮಾಡೊಕೆ ಬರದೆ ‘ಜೆರಾಬರಾ‘(Gerbera) ಅಂತ ಕರಿತಾರೆ.ಆವಾಗ ನನಗೆ ನಗುವು ಬರುತ್ತದೆ.
ನಾನು ತುಂಬ ಉತ್ಸಾಹಿ ಸಸ್ಯ. ಯಾವ್ಯಾವ ದೇಶಕಾಲಕ್ಕೆಲ್ಲ ನನ್ನನ್ನು ಕರೆದುಕೊಂಡು ಹೋಗಿ ಆರೈಕೆ ಮಾಡಿದ್ದಾರೊ ಆ ಎಲ್ಲ ಭಾಷೆಗಳು ನನಗೆ ಗೊತ್ತು.ತವರುಮನೆ ಅಗಲಿದ ಚಿಂತೆ ನನ್ನ ಕಾಡುವುದಿಲ್ಲ.ಮಣ್ಣಿನ ಬೇಧ- ಭಾವ ವಿಲ್ಲದೆ ಸೊಂಪಾಗಿ ಬೆಳೆಯುತ್ತೇನೆ. ಅದರಲ್ಲೂ ಕರ್ನಾಟಕ ಎಂದ್ರೆ ನಂಗೆ ತುಂಬಾನೆ ಇಷ್ಟ. ಇಡೀಯ ಭಾರತದಲ್ಲಿ ಉತ್ತರಾಖಂಡದ ನಂತರ ನನ್ನನ್ನು ಅತಿಯಾಗಿ ಬೆಳೆಸಿ ಪ್ರೀತಿಯಿಂದ ಆರೈಕೆ ಮಾಡುವ ಮಣ್ಣಿದು.
ಅಲ್ಲೆಲ್ಲೊ ದೂರದ ಕಾಡುಗಳಲ್ಲಿ ಬೆಳೆಯುತ್ತಿದ್ದ ನನ್ನನ್ನು ನಾಡಿಗೆ ತಂದು ನನಗೊಂದು ನಾಮಕರಣ ಮಾಡಿ ‘ಜೆರ್ಬರ’ ಎಂಬ ಸೊಗಸಾದ ಹೆಸರಿಟ್ಟಿದ್ದಾರೆ.ದಟ್ಟಾರಣ್ಯದಲ್ಲಿ ಬೆಳೆದು ನಾಡಿಗೆ ಬರಲೊಲ್ಲದ ನನ್ನ ಅನೇಕ ಸ್ನೇಹಿತರು ಕಾಡಿನಲ್ಲಿಯೇ ಆರಾಮ ಜೀವನ ನಡೆಸುತ್ತಿದ್ದಾರೆ.ನನ್ನದೂ ಕೂಡ ಒಂದು ಸುಂದರ ಜೀವನವೇ.ಬೆಟ್ಟಗುಡ್ಡಗಳಲ್ಲಿ ವ್ಯರ್ಥವಾಗುವುದಕ್ಕಿಂತ ಈ ನಾಡಿನ ಸೌಂದರ್ಯವನ್ನು ಮತ್ತಷ್ಟು ಕಂಗೊಳಿಸಿ ಕಣ್ಮನ ತಣಿಯುತ್ತೆನೆ.ಸಭೆಸಮಾರಂಭಗಳಿಗೆ ಎಲ್ಲರೂ ನನ್ನನ್ನೇ ಆಯ್ದುಕೊಳ್ಳುತ್ತಾರೆ.ನಾನಿಲ್ಲದ ಅಲಂಕಾರ ರಸವಿಲ್ಲದ ಹಣ್ಣಿನಂತೆ.ಅದರಲ್ಲೂ latest fashion
ಮೇಜು ಅಲಂಕಾರಕ್ಕೂ (Table decorations) ನಾನು ಪ್ರಸಿದ್ದ.
ಆದರೆ ನನಗೂ ಮನುಷ್ಯನಂತೆ ಅಸೂಯೆ ಇದೆ.
Rose
Red carnation
Chrysanthemum
Tulip
ಹೂವುಗಳಿಗೆ ನನಗಿಂತ ಬೇಡಿಕೆ ತುಸು ಜಾಸ್ತಿಯೇ
ಸ್ವಲ್ಪ ಅಹಂಕಾರ ಕೂಡ ಇದೆ .ಮಿಕ್ಕೆಲ್ಲಾ ಹೂವುಗಳಿಗಿಂತ ನನ್ನ ಬೇಡಿಕೆ ಹೆಚ್ಚು. ನನ್ನ ಸಹಜವಾದ ನಾಜೂಕಾದ ಸುವಾಸನೆಯನ್ನು ಜನ ಸಾಮಾನ್ಯವಾಗಿ ಗ್ರಹಿಸಲಾಗುವುದಿಲ್ಲ.ಸುಗಂಧ ದ್ರವ್ಯಗಳಲ್ಲಿ ನನ್ನ ಮಕರಂದವನ್ನು ಬಳಸುವರಾದರೂ ಅದನ್ನು ಜನರು ಅರ್ಥಮಾಡಿಕೊಳ್ಳಲು ಆಗುವುದಿಲ್ಲ.ಆದರೂ ನಮಗೇನೂ ಬೇಸರವಿಲ್ಲ.
ಶಾಂತಸ್ವಭಾವದ ಸುವಾಸನೆ ನಮ್ಮದು.
ಪ್ರೇಮಿಗಳು ಪರಸ್ಪರ ಮೆಚ್ಷಿಸಿಕೊಳ್ಳಲು ನನ್ನನ್ನೇ ಕೊಡುಗೊಳ್ಳುತ್ತಾರೆ. ಏಕೆಂದರೆ ನನ್ನ ಹೆಸರು ‘ಜೆರ್ಬರ ಡೈಸಿ’ ಅದರ ಅರ್ಥ,ಆಗಲೇ ಹೇಳಿದೆನಲ್ಲ
‘ಮುಗ್ದತೆ ಹಾಗೂ ಪವಿತ್ರತೆ’.
ನಾನು ಸೌಂದರ್ಯದ ಸಂಕೇತ. ಕಾಮನ ಬಿಲ್ಲಿನಂತೆ ನಾನೂ ವಿವಿಧ ಬಣ್ಣಗಳಲ್ಲಿ ಅರಳುತ್ತೇನೆ.ಕೆಂಪು,ಕೇಸರಿ, ಹಳದಿ,ಬಿಳಿ ಇನ್ನೂ ಇತರ ಬಣ್ಣಗಳೊಂದಿಗೆ ಅರಳುವದು ನನಗೆ ಇಷ್ಟ. ಸಾಮಾನ್ಯವಾಗಿ ಐದರಿಂದ ಏಳು ಇಂಚು ನನ್ನ ಎತ್ತರ. ಅಂದರೆ ಹದಿಮೂರು ಸೆಂಟಿಮೀಟರ್. ಉನ್ಮಾದ ಹೆಚ್ಚಾದಾಗ ಅದಕ್ಕಿಂತಲೂ ಎತ್ತರವಾಗಿ ಬೆಳೆಯುವೆ.ನೆಲಹಾಸಿಗೆ ಅಂಟಿಕೊಂಡು ಎರಡಿಂಚಿಗೂ ಅಗಲವಾಗಿ ಹರಡಿಕೊಂಡು ಬೆಳೆಯುವೆ.
ನನ್ನದು ಒಂಥರ ಉತ್ಸಾಹದ ಜೀವನ.
ಜನ ಬೆಳಗ್ಗೆಯಿಂದ ಸಂಜೆಯವರೆಗೂ ದುಡಿದು ದಣಿದು ಮನೆಗೆ ಬಂದು ತಮ್ಮ ಒತ್ತಡವನ್ನು ಕಡಿಮೆಗೊಳಿಸಲು ತದೇಕಚಿತ್ತದಿಂದ ನನ್ನನ್ನೇ ನೋಡುತ್ತಾರೆ. ಆ ಮೂಲಕ ಆನಂದ ಪಡೆಯುತ್ತಾರೆ.ಆಗ ನನಗಾಗುವ ಸಂತಸ ವರ್ಣನಾತೀತ.
ನಿಜವಾಗಿಯೂ ಮನುಷ್ಯರು ನನಗೆ ಮೌಲ್ಯವನ್ನು ಸೃಷ್ಟಿಸಿದ್ದಾರೆ.ನನ್ನನ್ನೇ ಮುಖ್ಯ ಕೃಷಿಯಾಗಿ ಮಾಡಿ ನನ್ನ ನಂಬಿಯೇ ಜೀವನ ನಡೆಸುವವರಿದ್ದಾರೆ.ಆಗಲಂತೂ ನನ್ನ ಪೋಷಣೆಯ ಜವಾಬ್ದಾರಿಯನ್ನು ನಾನು ಜಾಗ್ರತಿಯಿಂದ ನಿಭಾಯಿಸುವೆ.ನನ್ನ ನಂಬಿದವರಿಗೆ ಒಳ್ಳೆಯ ಮಾರುಕಟ್ಟೆ ಒದಗಿಸಿ ಭಾರಿ ಲಾಭವನ್ನು ಸಹ ಕೊಡುವೆ.
ಇತ್ತೀಚಿನ ದಿನಗಳಲ್ಲಿ ನನ್ನನ್ನು ‘ಹಸಿರು ಮನೆ’(poly house) ಗಳಲ್ಲಿ ಅಧಿಕವಾಗಿ ಬೆಳೆಯುವರು.ಆವಾಗ ನನಗೆ ಸ್ವಲ್ಪ ಮುಜುಗರವಾಗುವುದು ಸುಳ್ಳಲ್ಲ.ಒಂದು ವರ್ಷದ ಅವಧಿಯಲ್ಲಿ ಮೂವತ್ತರಿಂದ-ನಲವತ್ತು ಹೂಗಳನ್ನು ಒಂದೆ ಸಸಿಯಲ್ಲಿ ಅರಳಿಸಬಲ್ಲ ತಳಿ ನಾನು.
ವಿರಾಟ್ ಕೊಹ್ಲಿಯಂತೆ ನನ್ನ ಹೆಸರಿನಲ್ಲೂ ಎಷ್ಟೊಂದು ದಾಖಲೆಗಳಿವೆ.ಕೆಂಪು, ಬಿಳಿ, ಕೇಸರಿ, ಹಳದಿಯಾಗಿ ಬೆಳೆವ ನನ್ನನ್ನು ಒಂದು ಬೊಕ್ಕೇಯಲ್ಲಿ ಕ್ರೋಢಿಕರಿಸಿ ಪ್ರೇಮನಿವೇದನೆ ಮಾಡಿದಾಗ ಶೇಕಡಾ 90% ರಷ್ಟು ಪ್ರೇಮಿಗಳು ಗೆಲುವನ್ನು ಕಂಡಿದ್ದಾರೆ.yes my success rate is above 90 %.
That’s more than Virat Kohli’s ODI average.
ಜಗತ್ತಿನಲ್ಲೇ ಅತ್ಯಂತ ಅಧಿಕವಾಗಿ ಮಾರಾಟವಾಗುವ ಐದನೇ ದೊಡ್ಡ ಹೂವು ನಾನು.
ಹೊಗ್ಲಿಬಿಡಿ! ದಾಖಲೆಗಳು ಪುಸ್ತಕಗಳಿಗೆ ಸೀಮಿತ.ಆದರೆ ನನ್ನ ಸೌಂದರ್ಯ ಕಾಂತಿ ಸೂರ್ಯ-ಚಂದ್ರರೊಂದಿಗೆ ಬೆರೆತುಹೋಗಿದೆ.ಹಗಲಾಗಲಿ ಇರುಳಾಗಲಿ ನನ್ನದು ಸಮ ಬೆಳವಣಿಗೆ.ಪುಷ್ಪ ಪ್ರದರ್ಶನದಲ್ಲಿ ನನ್ನ ಕುಟುಂಬವನ್ನು ಒಂದೆಡೆಯಲ್ಲಿ ನೋಡುವುದೇ ಚೆಂದ.
ಕೆಲವರಿಗೆ ಅತಿಆನಂದ. ಆದರೆ ಎಷ್ಟೋ ಜನಕ್ಕೆ ಗೊತ್ತಿಲ್ಲ; ಒಂದು ದಿನ ಬಿಟ್ಟು ಒಂದು ದಿನ ನನಗೆ ನೀರುಣಿಸಬೇಕು.ಅತಿ ಖಾಳಜಿ ನನಗೆ ಪ್ರೀಯವಲ್ಲ. ಅನುಕೂಲಕರ ವಾತಾವರಣದಲ್ಲಿ ನಾನು ಒಂದೇ ಸಸಿಯ ಒಂದೇ ಹೂವಿನಲ್ಲಿ ಎರಡು ಬಣ್ಣಗಳಲ್ಲಿ ಒಡಮೂಡುತ್ತೇನೆ.ನಾನು ಒಮ್ಮೆ ಅರಳಿದೆನೆಂದರೆ ಒಂದು ತಿಂಗಳವರೆಗೂ ಬಾಡುವುದಿಲ್ಲ.ಆ ವಿಷಯದಲ್ಲಿ ಗುಲಾಬಿಗಿಂತ ನಾನೇ ಶ್ರೇಷ್ಠ.
ಸರಿ ಹೊತ್ತಾಯ್ತು!ನಾಳೆಗೆ ನನ್ನ ಕಾಂತಿಯನ್ನು ಹೆಚ್ಚಿಸಿಕೊಳ್ಳಲು, ಶಕ್ತಿಯನ್ನು ವೃದ್ಧಿಸಿಕೊಳ್ಳಲು ಬೇರಿನಿಂದ ತೇವಾಂಶವನ್ನು ಹೀರಿಕೊಂಡು ಮುಡಿಯಲ್ಲಿ ನಗುವ ಮೊಗ್ಗಿನವರೆಗೂ ಎಲ್ಲ ಕವಲುಗಳಿಗೂ ಪೂರೈಕೆ ಮಾಡಬೇಕು.
ಮತ್ತೆ ನಾಳೆ ಸಿಗುವೆ.
