
ಕೆಲವೇ ತಿಂಗಳ ಹಿಂದೆ, ನಮ್ಮ ಆರ್ಸಿಬಿ (RCB) ತಂಡ ಐಪಿಎಲ್ ಕಪ್ ಗೆದ್ದಾಗ ಕನ್ನಡಿಗರ ಮನದಲ್ಲಿ ಇದ್ದ ಹೆಸರು ಯಶ್ ದಯಾಳ್. ಕೊನೆಯ ಓವರ್ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿ, ತಂಡವನ್ನು ಗೆಲುವಿನ ದಡ ಸೇರಿಸಿದಾಗ ನಾವೆಲ್ಲರೂ ಅವರನ್ನು ಕೊಂಡಾಡಿದ್ದೆವು.
“ನೋಡಿದ್ರಾ ನಮ್ಮ ಹುಡುಗನ ಆಟ!” ಅಂತ ಹೆಮ್ಮೆ ಪಟ್ಟಿದ್ದೆವು. ಆದರೆ, ಕಾಲಚಕ್ರ ಎಷ್ಟು ಬೇಗ ತಿರುಗುತ್ತದೆ ನೋಡಿ. ಇಂದು ಅದೇ ಯಶ್ ದಯಾಳ್, ಮೈದಾನದ ಹೊರಗೆ ತಮ್ಮ ಜೀವನದ ಅತಿ ದೊಡ್ಡ ಹೋರಾಟವನ್ನು ಎದುರಿಸುತ್ತಿದ್ದಾರೆ.
ಇದನ್ನೂ ಓದಿ: KSCA ಗೆ ಮಾಜಿ ಕ್ರಿಕೆಟಿಗನ ಎಂಟ್ರಿ: ಚುನಾವಣೆಗೆ ಸ್ಪರ್ಧಿಸಲು ರೆಡಿಯಾದ ಭಾರತದ ಮಾಜಿ ವೇಗಿ
ಅವರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪಗಳು ಕೇಳಿಬಂದಿದ್ದು, ಅವರ ಕ್ರಿಕೆಟ್ ಭವಿಷ್ಯದ ಮೇಲೆ ಕಾರ್ಮೋಡ ಕವಿದಿದೆ.
ಯಶ್ ದಯಾಳ್ ಅವರ ಮೇಲೆ ಒಂದಲ್ಲ, ಎರಡು ಪ್ರಕರಣಗಳು!
ಮೊದಲನೆಯದು ಗಾಜಿಯಾಬಾದ್ನಲ್ಲಿ: ಮದುವೆಯಾಗುತ್ತೇನೆಂದು ನಂಬಿಸಿ ಲೈಂಗಿಕವಾಗಿ ಬಳಸಿಕೊಂಡರು ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಈ ಕೇಸಿನಲ್ಲಿ ಸದ್ಯಕ್ಕೆ ಕೋರ್ಟ್ ಅವರಿಗೆ ಬಂಧನದಿಂದ ತಾತ್ಕಾಲಿಕ ರಕ್ಷಣೆ ನೀಡಿದೆ.
ಎರಡನೆಯದು ಇನ್ನೂ ಗಂಭೀರ: ಜೈಪುರದಲ್ಲಿ, ಅಪ್ರಾಪ್ತ ಬಾಲಕಿಯೊಬ್ಬಳು, “ಕ್ರಿಕೆಟ್ನಲ್ಲಿ ದೊಡ್ಡ ಸ್ಟಾರ್ ಮಾಡ್ತೀನಿ ಅಂತ ಆಸೆ ತೋರಿಸಿ ಎರಡು ವರ್ಷಗಳಿಂದ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ” ಎಂದು ಆರೋಪಿಸಿದ್ದಾಳೆ.
ಇದನ್ನೂ ಓದಿ: Indian Criket Contoversy: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕನ ವಿರುದ್ಧ ಹರಿಹಾಯ್ದ ಸೆಹ್ವಾಗ್
ಇದು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (POCSO) ಅಡಿಯಲ್ಲಿ ಬರುವುದರಿಂದ ಪ್ರಕರಣದ ತೀವ್ರತೆ ಹೆಚ್ಚಾಗಿದೆ. ಈ ವಿಷಯದಲ್ಲಿ ನ್ಯಾಯಾಲಯ ಅವರಿಗೆ ಯಾವುದೇ ರಕ್ಷಣೆ ನೀಡಿಲ್ಲ.
ಯಶಸ್ಸಿನ ಉತ್ತುಂಗದಿಂದ ಪಾತಾಳಕ್ಕೆಒಂದು ಕಡೆ ವೃತ್ತಿಜೀವನ ಯಶಸ್ಸಿನ ಶಿಖರ ಏರುತ್ತಿತ್ತು. ಆರ್ಸಿಬಿ ತಂಡ ಅವರನ್ನು ಉಳಿಸಿಕೊಂಡಿತ್ತು, ಟೀಮ್ ಇಂಡಿಯಾದಿಂದಲೂ ಕರೆ ಬಂದಿತ್ತು. ಎಲ್ಲವೂ ಚೆನ್ನಾಗಿದೆ ಅಂದುಕೊಳ್ಳುವಾಗಲೇ, ಇನ್ನೊಂದು ಕಡೆ ಅವರ ವೈಯಕ್ತಿಕ ಜೀವನದಲ್ಲಿ ಇಂಥದ್ದೊಂದು ಬಿರುಗಾಳಿ ಎದ್ದಿದೆ.
ಈ ಆರೋಪಗಳ ತಕ್ಷಣದ ಪರಿಣಾಮವಾಗಿ, ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ (UPCA) ಅವರನ್ನು ತಕ್ಷಣವೇ ಯುಪಿ ಟಿ20 ಲೀಗ್ನಿಂದ ನಿಷೇಧಿಸಿದೆ.
ಗೋರಖ್ಪುರ ಲಯನ್ಸ್ ತಂಡ ಅವರನ್ನು ಖರೀದಿಸಿದ್ದರೂ, ಈಗ ಅವರು ಆ ಲೀಗ್ನಲ್ಲಿ ಆಡುವಂತಿಲ್ಲ. ಕಪ್ ಗೆದ್ದು ಹೀರೋ ಆಗಿದ್ದ ಆಟಗಾರನ ಭವಿಷ್ಯ ಈಗ ಅಕ್ಷರಶಃ ನ್ಯಾಯಾಲಯದ ಕೈಯಲ್ಲಿದೆ.
ಒಂದು ವೇಳೆ ಈ ಆರೋಪಗಳು ನಿಜವೆಂದು ಸಾಬೀತಾದರೆ, ಯಶ್ ದಯಾಳ್ ಅವರ ಕ್ರಿಕೆಟ್ ಬದುಕು ಬಹುತೇಕ ಅಂತ್ಯವಾಗಬಹುದು. ಈ ಪ್ರಕರಣ ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
