
KSCA elections : ಮಾಜಿ ಭಾರತೀಯ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್(Venkatesh Prasad) ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA ) ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ. ಕ್ರಿಕೆಟ್ ಆಡಳಿತದಲ್ಲಿ ಮತ್ತೆ ಸಕ್ರಿಯವಾಗಿ ಭಾಗವಹಿಸಲು ಉತ್ಸುಕರಾಗಿರುವ ಅವರು, ಕರ್ನಾಟಕದ ಕ್ರಿಕೆಟ್ಗೆ ತಮ್ಮ ಅನುಭವವನ್ನು ಒಡಮೂಡಿಸಲು ಯೋಜನೆ ಹಾಕಿದ್ದಾರೆ.
ಟೀಂ ಇಂಡಿಯಾದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್(Venkatesh Prasad) ಇದೀಗ ಕರ್ನಾಟಕ ಕ್ರಿಕೆಟ್ ಮಂಡಳಿಯ(KSCA ) ಆಡಳಿತಕ್ಕೆ ಮರಳುವತ್ತ ಗಮನ ಹರಿಸಿದ್ದಾರೆ. ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಕೆಎಸ್ಸಿಎ ಚುನಾವಣೆಯಲ್ಲಿ ವೆಂಕಟೇಶ್ ಪ್ರಸಾದ್(Venkatesh Prasad) ಸ್ಪರ್ಧಿಸಲಿದ್ದಾರೆ. 56 ವರ್ಷದ ಅವರು ಈ ಹಿಂದೆ 2010ರಲ್ಲಿ ಉಪಾಧ್ಯಕ್ಷರಾಗಿದ್ದರು. ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವಿಗೀಡಾದ ಘಟನೆಯ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.
ಇದನ್ನೂ ಓದಿ: Indian Criket Contoversy: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕನ ವಿರುದ್ಧ ಹರಿಹಾಯ್ದ ಸೆಹ್ವಾಗ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಚೊಚ್ಚಲ ಐಪಿಎಲ್(IPL) ಟ್ರೋಫಿ ಗೆದ್ದ ವೇಳೆ ಜೂನ್ನಲ್ಲಿ ನಡೆದ ವಿಜಯೋತ್ಸವದ ವೇಳೆ ನಡೆದಿದ್ದ ಕಾಲ್ತುಳಿತ ಘಟನೆಯು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೇಲೆ ಪರಿಣಾಮ ಬೀರಿತ್ತು.
ಚಿನ್ನಸ್ವಾಮಿ ಕ್ರೀಡಾಂಗಣವು ದೊಡ್ಡ ಮಟ್ಟದ ಕಾರ್ಯಕ್ರಮಗಳಿಗೆ ಸೂಕ್ತವಲ್ಲ ಎಂದು ಘೋಷಿಸಿ ತರುವಾಯ ಮಹಾರಾಜ ಟ್ರೋಫಿ ಟಿ20 ಪಂದ್ಯಾವಳಿ ಮತ್ತು ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯಗಳನ್ನು ಸಹ ಸ್ಥಳಾಂತರಿಸಲಾಗಿದೆ.
ಕೆಎಸ್ಸಿಎ(KSCA ) ಕಾರ್ಯದರ್ಶಿ ಶಂಕರ್ ಎ ಮತ್ತು ಖಜಾಂಚಿ ಇಎಸ್ ಜೈರಾಮ್ ನಡೆದ ಘಟನೆಯ ನೈತಿಕ ಹೊಣೆಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಆದಾಗ್ಯೂ, ಅಧ್ಯಕ್ಷ ರಘುರಾಮ್ ಭಟ್ ಅಧಿಕಾರದಲ್ಲಿಯೇ ಇದ್ದರು, ಅವರ ಅಧಿಕಾರಾವಧಿ ಸೆಪ್ಟೆಂಬರ್ 30 ರಂದು ಕೊನೆಗೊಳ್ಳುತ್ತದೆ.
ಚುನಾವಣೆಯಲ್ಲಿ ವೆಂಕಟೇಶ್ ಪ್ರಸಾದ್(Venkatesh Prasad) ಅನುಭವಿ ಆಡಳಿತಾಧಿಕಾರಿ ವಿನಯ್ ಮೃತ್ಯುಂಜಯ ಅವರೊಂದಿಗೆ ಅವರೊಂದಿಗೆ ಕೈಜೋಡಿಸಲಿದ್ದಾರೆ.
ಅವರು ಸದ್ಯ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಹಣಕಾಸು ಸಮಿತಿಯ ಸದಸ್ಯರಾಗಿದ್ದಾರೆ ಮತ್ತು ಈ ಹಿಂದೆ ಕೆಎಸ್ಸಿಎಯ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸಾದ್(Venkatesh Prasad) ಕೆಎಸ್ಸಿಎಗೆ ಹೊಸಬರಲ್ಲ. ಅವರು 2013 ರಿಂದ 2016 ರವರೆಗೆ ಅನಿಲ್ ಕುಂಬ್ಳೆ ಅಧ್ಯಕ್ಷರಾಗಿದ್ದ ವೇಳೆ ಉಪಾಧ್ಯಕ್ಷರಾಗಿದ್ದರು.
ಇದನ್ನೂ ಓದಿ: ಭಾರತ ತಂಡದಲ್ಲಿ ಸಂಚಲನ: ಏಷ್ಯಾ ಕಪ್ಗೆ ಪಂತ್, ರಾಹುಲ್ಗೆ ಕೊಕ್, ಸಂಜು ಸ್ಯಾಮ್ಸನ್ಗೆ ಒಲಿಯಲಿದೆ ಅದೃಷ್ಟ?
ವೆಂಕಟೇಶ್ ಪ್ರಸಾದ್ ಮಾಡಬೇಕಾದ ಕೆಲಸಗಳು
ಮೊದಲು ಸಂಸ್ಥೆಯ ಮಾನ ಉಳಿಸುವುದು ಆದ್ಯತೆಯಾಗಲಿದೆ. ಚಿನ್ನಸ್ವಾಮಿ ಕ್ರೀಡಾಂಗಣವು ಭಾರತೀಯ ಕ್ರಿಕೆಟ್ಗೆ ಪ್ರಮುಖ ಸ್ಥಳವಾಗಿದ್ದು, ಅದರ ವೈಭವವನ್ನು ಪುನಃಸ್ಥಾಪಿಸುವುದು ಅವರ ಕಾರ್ಯಸೂಚಿಯಲ್ಲಿ ಮೊದಲನೆಯದು. ಭಾರತವು ಮುಂದಿನ ವರ್ಷ ಶ್ರೀಲಂಕಾ ಜೊತೆ ಸೇರಿ ಟಿ20 ವಿಶ್ವಕಪ್ ಅನ್ನು ಆಯೋಜಿಸುತ್ತದೆ. ಬೆಂಗಳೂರು ಈ ಅವಕಾಶವನ್ನು ಕಳೆದುಕೊಂಡರೆ ಅದು ನಾಚಿಕೆಗೇಡಿನ ಸಂಗತಿ. ಆರ್ಸಿಬಿ ಕೂಡ ಐಪಿಎಲ್ 2026ರಲ್ಲಿ ತಮ್ಮ ತವರು ಪಂದ್ಯಗಳನ್ನು ಬೇರೆಡೆ ಆಡುವಂತಾಗುತ್ತದೆ. ಆದ್ದರಿಂದ ಅವರು ಈ ಚುನಾವಣೆಯಲ್ಲಿ ಗೆದ್ದು ಮೊದಲು ಸ್ಥಳಾಂತರವಾದ ಪಂದ್ಯಗಳನ್ನು ಇಲ್ಲೇ ನಡೆಯುವಂತೆ ನೋಡಿಕೊಳ್ಳುವುದು ಅವರ ಮೊದಲ ಅಧ್ಯತೆಯಾಗಿರಲಿದೆ.
