ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಣ(Grahana) ಮತ್ತು ಪಿತೃಪಕ್ಷ ಎರಡೂ ಸಹ ಪ್ರಮುಖ ಘಟನೆಗಳು. ಈ ಎರಡೂ ಘಟನೆಗಳು ಒಂದೇ ತಿಂಗಳಲ್ಲಿ ಬಂದಾಗ, ನಿಮ್ಮ ಜೀವನದಲ್ಲಿ ಏನಾಗಲಿದೆ? ಈ ಸೆಪ್ಟೆಂಬರ್ ಮಾಸವು(September Month) ನಿಮ್ಮ ಭವಿಷ್ಯವನ್ನು ಹೇಗೆ ರೂಪಿಸಲಿದೆ? ಆಕಾಶದಲ್ಲಿನ ಈ ಘಟನೆಗಳು ನಿಮ್ಮ ವೈಯಕ್ತಿಕ ಮತ್ತು ಆಧ್ಯಾತ್ಮಿಕ ಜೀವನದಲ್ಲಿ ಹೇಗೆ ಬದಲಾವಣೆ ತರಲಿವೆ ಎಂಬುದನ್ನು ಇಲ್ಲಿ ವಿವರವಾಗಿ ತಿಳಿಸಲಾಗಿದೆ.
ಸಂಪೂರ್ಣ ಚಂದ್ರಗ್ರಹಣ(Chandra Grahana)(ಸೆಪ್ಟೆಂಬರ್ 7)
ಭಾದ್ರಪದ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ದಿನ, ಅಂದರೆ ಸೆಪ್ಟೆಂಬರ್ 7ರಂದು ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ. ಈ ಗ್ರಹಣವು ರಾತ್ರಿ 9:58ಕ್ಕೆ ಆರಂಭವಾಗಿ, ಮರುದಿನ ಮುಂಜಾನೆ 1:26ರವರೆಗೆ ಇರುತ್ತದೆ. ಒಟ್ಟು ಮೂರು ಗಂಟೆ ಇಪ್ಪತ್ತೆಂಟು ನಿಮಿಷಗಳ ಕಾಲ ಈ ಗ್ರಹಣದ ಅವಧಿಯಿರುತ್ತದೆ. ರಾತ್ರಿ 11:42ರ ಸುಮಾರಿಗೆ ಚಂದ್ರ ಸಂಪೂರ್ಣವಾಗಿ ಕಣ್ಮರೆಯಾಗಲಿರುವ ಈ ದೃಶ್ಯ ಒಂದು ಅದ್ಭುತ ಅನುಭವವನ್ನು ನೀಡಲಿದೆ.
ಭಾರತದಲ್ಲಿಯೂ ಈ ಗ್ರಹಣ(Grahana) ಗೋಚರಿಸುವುದರಿಂದ, ಸೂತಕ ಕಾಲ ಅನ್ವಯವಾಗುತ್ತದೆ. ಈ ಸಮಯದಲ್ಲಿ ಗರ್ಭಿಣಿಯರು ಎಚ್ಚರಿಕೆ ವಹಿಸಬೇಕು. ಹಾಗೆಯೇ, ಗ್ರಹಣದ ಅವಧಿಯಲ್ಲಿ ಮನಸ್ಸನ್ನು ಆಧ್ಯಾತ್ಮಿಕ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವುದು, ಮಂತ್ರ ಜಪಿಸುವುದು ಮತ್ತು ದ್ಯಾನ ಮಾಡುವುದು ಮಂಗಳಕರ.
ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲಿ ಹೃದಯ ಕಲಕುವ ಘಟನೆ: ಮಾಜಿ ಪ್ರೇಯಸಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕ್ಯಾಬ್ ಚಾಲಕ!
ಪಾಕ್ಷಿಕ ಸೂರ್ಯಗ್ರಹಣ (ಸೆಪ್ಟೆಂಬರ್ 21)
ಸೆಪ್ಟೆಂಬರ್ 21ರಂದು ಪಾಕ್ಷಿಕ ಸೂರ್ಯಗ್ರಹಣ(Surya Grahana) ಸಂಭವಿಸಲಿದೆ. ಇದು ರಾತ್ರಿ 10:59ಕ್ಕೆ ಪ್ರಾರಂಭವಾಗಿ, ಸೆಪ್ಟೆಂಬರ್ 22ರ ಮುಂಜಾನೆ 3:23ರವರೆಗೆ ಮುಂದುವರಿಯಲಿದೆ. ಇದು ಕೇವಲ ಪಾಕ್ಷಿಕ ಗ್ರಹಣವಾಗಿರುವುದರಿಂದ ಭಾರತದಲ್ಲಿ ಗೋಚರಿಸುವುದಿಲ್ಲ. ಆಸ್ಟ್ರೇಲಿಯಾ, ಪೆಸಿಫಿಕ್ ಸಾಗರ ಮತ್ತು ಅಂಟಾರ್ಕ್ಟಿಕಾದಂತಹ ಪ್ರದೇಶಗಳಲ್ಲಿ ಮಾತ್ರ ಇದು ಕಾಣಿಸಿಕೊಳ್ಳಲಿದೆ. ಹಾಗಾಗಿ, ಈ ಸೂರ್ಯಗ್ರಹಣಕ್ಕೆ(Surya Grahana) ಸಂಬಂಧಿಸಿದಂತೆ ಯಾವುದೇ ಸೂತಕ ಕಾಲವು ಭಾರತಕ್ಕೆ ಅನ್ವಯವಾಗುವುದಿಲ್ಲ. ಆದರೂ, ದೋಷಗಳನ್ನು ನಿವಾರಿಸಲು ಪವಿತ್ರ ಸ್ನಾನ ಮಾಡುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಕೂಡಲೇ ಪಾಸ್ವರ್ಡ್ ಬದಲಾಯಿಸಿ: 250 ಕೋಟಿಗೂ ಅಧಿಕ ಜಿಮೇಲ್ ಬಳಕೆದಾರರ ಮಾಹಿತಿ ಸೋರಿಕೆ
ಪಿತೃಪಕ್ಷ (ಸೆಪ್ಟೆಂಬರ್ 7 ರಿಂದ 21)
ಈ ವರ್ಷದ ಪಿತೃಪಕ್ಷವು ಚಂದ್ರಗ್ರಹಣದ ದಿನವೇ, ಅಂದರೆ ಸೆಪ್ಟೆಂಬರ್ 7ರಂದು ಪ್ರಾರಂಭವಾಗಿ, ಸೆಪ್ಟೆಂಬರ್ 21ರಂದು ಮಹಾಲಯ ಅಮಾವಾಸ್ಯೆಯೊಂದಿಗೆ ಕೊನೆಗೊಳ್ಳಲಿದೆ. ಈ ಅವಧಿಯಲ್ಲಿ ನಮ್ಮ ಪೂರ್ವಜರ ಆತ್ಮಗಳಿಗೆ ಶಾಂತಿ ಸಿಗಲೆಂದು ತರ್ಪಣ ಮತ್ತು ಶ್ರಾದ್ಯಗಳನ್ನು ಮಾಡಲಾಗುತ್ತದೆ. ಈ 15 ದಿನಗಳು ಪೂರ್ವಜರು ಭೂಮಿಗೆ ಭೇಟಿ ನೀಡುತ್ತಾರೆ ಎಂಬ ನಂಬಿಕೆ ಇದೆ. ಈ ಸಂದರ್ಭದಲ್ಲಿ ತರ್ಪಣ ನೀಡುವುದರಿಂದ ಪೂರ್ವಜರ ಆತ್ಮಗಳು ತೃಪ್ತಗೊಂಡು ನಮ್ಮನ್ನು ಹರಸುತ್ತವೆ, ಇದರಿಂದ ವಂಶಾಭಿವೃದ್ಧಿ ಮತ್ತು ಸಂತಾನ ಭಾಗ್ಯ ದೊರೆಯುತ್ತದೆ ಎಂಬ ಬಲವಾದ ನಂಬಿಕೆ ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ.
