ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್(American President Donald Trump)ಅವರ ಅಪ್ತ ಸಲಹೆಗಾರ ಪೀಟರ್ ನವರೋ(Peter Naverro), ಈ ಬಾರಿ ಭಾರತದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದಾರೆ. ರಷ್ಯಾದಿಂದ ಭಾರತ(Indian) ತೈಲ ಖರೀದಿಸುವುದರಿಂದ ಕೇವಲ ಭಾರತದ ಬ್ರಾಹ್ಮಣರಿಗೆ(Brahmin) ಲಾಭವಾಗುತ್ತಿದೆ ಎಂದು ಅವರು ನೀಡಿರುವ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ರಷ್ಯಾ-ಉಕ್ರೇನ್ (Russia-Ukrain)ಯುದ್ಧವನ್ನು ‘ಮೋದಿ ಯುದ್ಧ(Modi War)’ ಎಂದು ಕರೆದಿದ್ದ ನವರೋ(Peter Naverro), ಈಗ ಭಾರತದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡಿರುವುದರ ಹಿಂದಿನ ಉದ್ದೇಶದ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.
ಭಾರತ ಮತ್ತು ಚೀನಾ(India And China) ಸೇರಿ ಜಾಗತಿಕ ರಾಜಕಾರಣದಲ್ಲಿ ಹೊಸ ಸಮೀಕರಣಗಳನ್ನು ರೂಪಿಸುತ್ತಿರುವ ಈ ಸಮಯದಲ್ಲಿ, ನವರೋ(Peter Naverro) ಅವರ ಹೇಳಿಕೆಯು ತೀವ್ರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕದಲ್ಲಿನ(America) ರಾಷ್ಟ್ರೀಯ ಭದ್ರತಾ ವಿಶ್ಲೇಷಕ ಪ್ರೊಫೆಸರ್ ಡೆರೆಕ್ ಜೆ. ಗ್ರಾಸ್ಮನ್ ಅವರು ಈ ಹೇಳಿಕೆಯನ್ನು ಕಟುವಾಗಿ ಖಂಡಿಸಿದ್ದಾರೆ. ಭಾರತದಲ್ಲಿ ಜಾತಿ ಕಲಹಗಳನ್ನು ಪ್ರಚೋದಿಸುವುದು ಅಮೆರಿಕದ ವಿದೇಶಾಂಗ ನೀತಿಯಾಗಬಾರದು(American Foreign policy) ಎಂದು ಎಕ್ಸ್ನಲ್ಲಿ(X) ಹೇಳುವ ಮೂಲಕ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನವರೋ(Peter Naverro) ವಿರುದ್ಧದ ಟೀಕೆಗಳು ಹೆಚ್ಚಾಗಿವೆ. ಅನುರಾಧಾ ತಿವಾರಿ(Anuradha Tivari) ಎಂಬ ಎಕ್ಸ್ ಬಳಕೆದಾರರು, “ರಷ್ಯಾದ ತೈಲ ಖರೀದಿಯಿಂದ ಬ್ರಾಹ್ಮಣರಿಗೆ ಮಾತ್ರ ಲಾಭವಾಗುತ್ತಿದೆ ಎಂದು ಹೇಳಿರುವುದು ಬ್ರಾಹ್ಮಣ ದ್ವೇಷವು ಜಾಗತಿಕ ಮಟ್ಟಕ್ಕೆ ಏರಿರುವುದನ್ನು ತೋರಿಸುತ್ತದೆ ಯಾರೋ ಅವರಿಗೆ ಭಾರತದ ಜಾತಿ ರಾಜಕೀಯದ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಪ್ರತಿಯೊಂದು ಸಮಸ್ಯೆಯನ್ನೂ ಬ್ರಾಹ್ಮಣರ ಮೇಲೆ ಹಾಕುವ ಈ ಪ್ರವೃತ್ತಿ ನಿಜಕ್ಕೂ ಆತಂಕಕಾರಿ” ಎಂದು ಹೇಳಿದ್ದಾರೆ. ಶಿವಸೇನೆಯ ಸಂಸದೆ ಪ್ರಿಯಾಂಕಾ ಚತುರ್ವೇದಿ, ನವರೋ ಅವರ ಹೇಳಿಕೆಯನ್ನು “ನಾಚಿಕೆಗೇಡಿನ ಮತ್ತು ದುಷ್ಕೃತನದ ನಡೆ” ಎಂದು ಬಣ್ಣಿಸಿದ್ದಾರೆ. ವಯಸ್ಸಿನ ಕಾರಣದಿಂದಾಗಿ ಅವರು ಈ ರೀತಿ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿರಬಹುದು ಎಂದೂ ಚತುರ್ವೇದಿ ಟೀಕಿಸಿದ್ದಾರೆ.
ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲಿ ಹೃದಯ ಕಲಕುವ ಘಟನೆ: ಮಾಜಿ ಪ್ರೇಯಸಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕ್ಯಾಬ್ ಚಾಲಕ!
‘ಬೋಸ್ಟನ್ ಬ್ರಾಹ್ಮಣ'(Boston Brahmin) ಪದದ ವಿವಾದ
ನವರೋ ಅವರ ಹೇಳಿಕೆಯು ‘ಬೋಸ್ಟನ್ ಬ್ರಾಹ್ಮಣ'(Boston Brahmin) ಎಂಬ ಅಮೆರಿಕದ ಪದದ ಬಗ್ಗೆಯೂ ಚರ್ಚೆ ಹುಟ್ಟುಹಾಕಿದೆ. ಪ್ರಿಯಾಂಕಾ ಚತುರ್ವೇದಿ ಅವರ ಪ್ರಕಾರ, ‘ಬೋಸ್ಮನ್ ಬ್ರಾಹ್ಮಣ”(Boston Brahmin) ಎಂದರೆ ಅಮೆರಿಕದಲ್ಲಿನ ಶ್ರೀಮಂತ ಮತ್ತು ಗಣ್ಯರನ್ನು ಉಲ್ಲೇಖಿಸಲು ಬಳಸುವ ಪದ. ಆದರೆ ನವರೋ ಅವರು ಭಾರತದ ಬ್ರಾಹ್ಮಣ'(Indian Brahmin) ಎಂದು ಸ್ಪಷ್ಟವಾಗಿ ಹೇಳಿರುವುದು ಈ ಪದಪ್ರಯೋಗ ಆಕಸ್ಮಿಕವಲ್ಲ ಎಂದು ಸೂಚಿಸುತ್ತದೆ. ಇದು ಉದ್ದೇಶಪೂರ್ವಕವಾದ ಕುತಂತ್ರ ಎಂದು ಅವರು ಆರೋಪಿಸಿದ್ದಾರೆ. ಇದೇ ರೀತಿ, ಟಿಎಂಸಿ ನಾಯಕಿ ಸಾಗರಿಕಾ ಘೋಷ್ ಕೂಡ ‘ಬೋಸ್ಮನ್ ಬ್ರಾಹ್ಮಣ ಪದದ ಮೂಲವನ್ನು ವಿವರಿಸಿದ್ದಾರೆ. ಆದರೆ ನವರೋ ಭಾರತದ ಜಾತಿಯನ್ನು ಪ್ರಸ್ತಾಪಿಸಿರುವುದು ಸ್ಪಷ್ಟವಾಗಿದೆ. ಇದು ಭಾರತದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇವ ಮಾಡುವ ಪ್ರಯತ್ನ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
