ಸಾಂದರ್ಭಿಕ ಚಿತ್ರ
ಬೆಂಗಳೂರು: ಪ್ರೀತಿಯೆಂಬ ಸಂಬಂಧ ದ್ವೇಷಕ್ಕೆ ತಿರುಗಿದಾಗ ಎಂತಹ ಘೋರ ಕೃತ್ಯಕ್ಕೆ ಕಾರಣವಾಗಬಹುದು ಎಂಬುದಕ್ಕೆ ಬನ್ನೇರುಘಟ್ಟ(Bannerghatta) ಸಮೀಪ ನಡೆದ ಘಟನೆಯೇ ಸಾಕ್ಷಿ. ತನ್ನ ಮಾಜಿ ಪ್ರೇಯಸಿ, 25 ವರ್ಷದ ವನಜಾಕ್ಷಿ ಅವರಿಗೆ, 50 ವರ್ಷದ ಕ್ಯಾಬ್ ಚಾಲಕ ವಿಠಲ್ ಎಂಬಾತ ಹಾಡುಹಗಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಮನಕಲಕುವ ಘಟನೆ ಶನಿವಾರ ಹೊಮ್ಮದೇವನಹಳ್ಳಿ(Hommadevanahalli) ಮುಖ್ಯ ರಸ್ತೆಯಲ್ಲಿ ನಡೆದಿದೆ. ವನಜಾಕ್ಷಿ(Vanajakshi) ಅವರು ಶೇ.60ರಷ್ಟು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಘಟನೆ ನಡೆದ ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ವನಜಾಕ್ಷಿ ಅವರು ತಮ್ಮ ಈಗಿನ ಸಹಜೀವನ ಸಂಗಾತಿ ಮುನಿಯಪ್ಪ (49) ಹಾಗೂ ಕುಟುಂಬದ ಸಂಬಂಧಿಯೊಬ್ಬರೊಂದಿಗೆ ಸೇಂಟ್ ಜಾನ್ಸ್ ಆಸ್ಪತ್ರೆಗೆ ತೆರಳುತ್ತಿದ್ದರು. ಅಂದು ಅವರು ಎಂದಿನಂತೆ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ವಿಠಲ್ ತಮ್ಮ ಕಾರನ್ನು ಹಿಂಬಾಲಿಸುತ್ತಾ ಪದೇ ಪದೇ ಹಾರ್ನ್ ಮಾಡುತ್ತಿದ್ದ ಮುನಿಯಪ್ಪ ಅವರು ಕಾರು ನಿಲ್ಲಿಸಿದಾಗ, ವಿಠಲ್ ಕೈಯಲ್ಲಿ ಪೆಟ್ರೋಲ್ ಕ್ಯಾನ್ ಹಿಡಿದುಕೊಂಡು ಬಂದಿದ್ದಾನೆ ಕ್ಷಣಾರ್ಧದಲ್ಲಿ ಆತ ಕಾರಿನ ಮೇಲೆ ಪಟ್ರೋಲ್ ಸುರಿಯಲು ಆರಂಭಿಸಿದ್ದಾನೆ.
ಇದನ್ನೂ ಓದಿ: ಕೂಡಲೇ ಪಾಸ್ವರ್ಡ್ ಬದಲಾಯಿಸಿ: 250 ಕೋಟಿಗೂ ಅಧಿಕ ಜಿಮೇಲ್ ಬಳಕೆದಾರರ ಮಾಹಿತಿ ಸೋರಿಕೆ
ಆಗಲಿರುವ ಅಪಾಯವನ್ನು ಅರಿತ ಮುನಿಯಪ್ಪ ಮತ್ತು ವನಜಾಕ್ಷಿ ತಕ್ಷಣ ಕಾರಿನಿಂದ ಇಳಿದು ಓಡಲು ಪ್ರಯತ್ನಿಸಿದ್ದಾರೆ. ಆದರೆ ದುರುಳ ವಿಠಲ್, ವನಜಾಕ್ಷಿ ಅವರನ್ನು ಬೆನ್ನಟ್ಟಿ, ಆಕೆ ಕೆಳಗೆ ಬಿದ್ದ ತಕ್ಷಣ ಪೆಟ್ರೋಲ್ ಸುರಿದು ಲೈಟರ್ನಿಂದ ಬೆಂಕಿ ಹಚ್ಚಿದ್ದಾನೆ. ಈ ಭೀಕರ ದೃಶ್ಯವನ್ನು ಕಂಡ ಸ್ಥಳದಲ್ಲಿದ್ದ ಇಬ್ಬರು ವ್ಯಕ್ತಿಗಳು ಕೂಡಲೇ ವನಜಾಕ್ಷಿ(Vanajakshi) ಅವರನ್ನು ರಕ್ಷಿಸಲು ಧಾವಿಸಿದ್ದಾರೆ. ಈ ಪ್ರಯತ್ನದಲ್ಲಿ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಜನ ಸೇರುತ್ತಿದ್ದಂತೆ ವಿಠಲ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಬಳಿಕ ಸ್ಥಳೀಯರು ಚಾಪೆ ಮತ್ತು ಬೆಡ್ ಶೀಟ್ಗಳನ್ನು ಬಳಸಿ ಬೆಂಕಿ ನಂದಿಸಿ. ತೀವ್ರವಾಗಿ ಸುಟ್ಟಗಾಯಗಳಾದ ವನಜಾಕ್ಕಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮುನಿಯಪ್ಪ(Muniyappa) ಅವರ ದೂರಿನ ಆಧಾರದ ಮೇಲೆ, ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು, ಶನಿವಾರ ರಾತ್ರಿ ಆರೋಪಿ ವಿಠಲ್ನನ್ನು ಬಂಧಿಸಿದ್ದಾರೆ ಪೊಲೀಸರ ತನಿಖೆಯಿಂದ ಹೊರಬಿದ್ದ ಮಾಹಿತಿ ಪ್ರಕಾರ, ವನಜಾಕ್ಷಿ ಮೂರು ವರ್ಷಗಳ ಹಿಂದೆ ತಮ್ಮ ಪತಿಯಿಂದ ದೂರವಾಗಿದ್ದರು. ಹಾಗೂ ಅವರ ಪತಿ ಮೂರು ತಿಂಗಳ ಹಿಂದಷ್ಟೇ ನಿಧನರಾಗಿದ್ದರು ಪತಿಯಿಂದ ದೂರಾದ ನಂತರ, ವನಜಾಕ್ಷಿ ಒಂದು ವರ್ಷ ವಿಠಲ್ ಜೊತೆ ಸಹಜೀವನ ನಡೆಸಿದ್ದರು. ನಂತರ ಆತನನ್ನು ತೊರೆದು ಮುನಿಯಪ್ಪ ಅವರ ಜೊತೆ ವಾಸಿಸಲು ಆರಂಭಿಸಿದ್ದರು. ಇದೇ ವಿಷಯ ವಿಠಲ್ನನ್ನು ಕೆರಳಿಸಿ. ಈ ಭೀಕರ ಕೃತ್ಯಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನ್ಯಾಯ ಸಿಗಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ
