ನವದೆಹಲಿ: ಜಿಮೇಲ್(Gmail) ಬಳಸುವ 2.5 ಶತಕೋಟಿಗೂ ಹೆಚ್ಚು ಬಳಕೆದಾರರಿಗೆ ಗೂಗಲ್(Google) ತುರ್ತು ಎಚ್ಚರಿಕೆ ನೀಡಿದೆ. ಈ ಸೈಬರ್ ದಾಳಿ(Cyber Attack) ಎಷ್ಟು ದೊಡ್ಡದಿದೆ ಎಂದರೆ, ಭದ್ರತಾ ತಜ್ಞರ ಪ್ರಕಾರ ಇದು ಗೂಗಲ್(Google) ಇತಿಹಾಸದಲ್ಲೆ ಅತಿದೊಡ್ಡ ಡೇಟಾ ಸೋರಿಕೆ. ಹಾಗಾಗಿ, ನೀವು ತಕ್ಷಣವೇ ನಿಮ್ಮ ಜಿಮೇಲ್ ಪಾಸ್ವರ್ಡ್ಗಳನ್ನು(Gmail ಬದಲಾಯಿಸಿ, ಜೊತೆಗೆ 2-ಹಂತದ ಪರಿಶೀಲನೆ (2 Step Verification) ಸಕ್ರಿಯಗೊಳಿಸುವುದು ಅತ್ಯಗತ್ಯ.
ಜಿಮೇಲ್(Gmail) ಬಳಸುತ್ತಿರುವ 250 ಕೋಟಿಗೂ ಹೆಚ್ಚು ಬಳಕೆದಾರರು ಈಗ ಅಪಾಯದಲ್ಲಿದ್ದಾರೆ. ಇತ್ತೀಚೆಗೆ ನಡೆದ ಅತಿದೊಡ್ಡ ಸೈಬರ್ ದಾಳಿಯಿಂದಾಗಿ ಅವರ ವೈಯಕ್ತಿಕ ಮಾಹಿತಿ ಆನ್ಲೈನ್ನಲ್ಲಿ ಸೋರಿಕೆಯಾಗಿದೆ. ಈ ಘಟನೆಯ ನಂತರ ಗೂಗಲ್(Google) ತನ್ನ ಬಳಕೆದಾರರಿಗೆ ತುರ್ತು ಎಚ್ಚರಿಕೆ ನೀಡಿದ್ದು, ಕೂಡಲೇ ತಮ್ಮ ಪಾಸ್ವರ್ಡ್ಗಳನ್ನು ಬದಲಾಯಿಸುವಂತೆ ಮತ್ತು ಎರಡು-ಹಂತದ ಪರಿಶೀಲನೆ (2SV) ಸಕ್ರಿಯಗೊಳಿಸುವಂತೆ ಸೂಚಿಸಿದೆ. ಇದು ಇತಿಹಾಸದಲ್ಲಿ ಗೂಗಲ್ ಡೇಟಾಬೇಸ್ ಮೇಲೆ ನಡೆದ ಅತಿದೊಡ್ಡ ಡೇಟಾ ಉಲ್ಲಂಘನೆ ಎಂದು ಸೈಬರ್ ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ
ಈ ಡೇಟಾ ಸೋರಿಕೆ ಜಿಮೇಲ್ನ ಡೇಟಾಬೇಸ್ ಅನ್ನು ನಿರ್ವಹಿಸುವ ಸೇಲ್ಸ್ ಫೋರ್ಸ್ ಕೌಡ್ ಪ್ಲಾಟ್ಫಾರ್ಮ್ನಲ್ಲಿ ನಡೆದಿದೆ. ಶೈನಿಹಂಟರ್ಸ್ ಎಂಬ ಹ್ಯಾಕಿಂಗ್ ಗುಂಪು ಈ ಘಟನೆಯ ಹಿಂದೆ ಇದೆ ಎಂದು ಹೇಳಲಾಗಿದೆ. ವರದಿಯ ಪ್ರಕಾರ, ಈ ಹ್ಯಾಕರ್ಗಗಳು ಸಾಮಾಜಿಕ ಎಂಜಿನಿಯರಿಂಗ್ ತಂತ್ರವನ್ನು ಬಳಸಿದ್ದಾರೆ.
ಅವರು ಗೂಗಲ್(2 Step Verification) ಉದ್ಯೋಗಿಗಳಂತೆ ನಟಿಸಿ ಸೇಲ್ಸ್ ಪೋರ್ಸ್ ಐಟಿ ಸಿಬ್ಬಂದಿಗೆ ಕರೆ ಮಾಡಿ ವಂಚಿಸಿದ್ದಾರೆ, ನಂತರ ನಕಲಿ ಅಪ್ಲಿಕೇಶನ್ ಒಂದನ್ನು ಸಂಪರ್ಕಿಸುವ ಮೂಲಕ ಬಳಕೆದಾರರ ಡೇಟಾವನ್ನು ಕದ್ದಿದ್ದಾರೆ. ಈ ಡೇಟಾದಲ್ಲಿ ಬಳಕೆದಾರರ ಸಂಪರ್ಕ ವಿವರಗಳು, ವ್ಯವಹಾರ ಹೆಸರುಗಳು ಮತ್ತು ಇತರ ವೈಯಕ್ತಿಕ ಮಾಹಿತಿ ಸೇರಿವೆ.
ಗೂಗಲ್(Google) ತನ್ನ ಬಳಕೆದಾರರ ಪಾಸ್ವರ್ಡ್ಗಳು ನೇರವಾಗಿ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ ಹ್ಯಾಕಗರ್ಳು(Hacker) ಕದ್ದ ಮಾಹಿತಿಯನ್ನು ಬಳಸಿಕೊಂಡು ಫಿಶಿಂಗ್ ಇಮೇಲ್ಗಳನ್ನು(Fishing E-mail) ಕಳುಹಿಸಲು ಮತ್ತು ವಂಚನೆ ಕರೆಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಇದು ಬಳಕೆದಾರರ ಜಿಮೇಲ್ ಖಾತೆಗಳನ್ನು ಹ್ಯಾಕ್ ಮಾಡುವ ಅಪಾಯವನ್ನು ಹೆಚ್ಚಿಸಿದೆ. ವಿಶೇಷವಾಗಿ 123456′ ಅಥವಾ ‘password’ ನಂತಹ ದುರ್ಬಲ ಪಾಸ್ವರ್ಡ್ಗಳನ್ನು ಬಳಸುವ ಖಾತೆಗಳು ಸುಲಭವಾಗಿ ಗುರಿಯಾಗಬಹುದು.
ಸೈಬರ್ ತಜ್ಞರು, ಬಳಕೆದಾರರಿಗೆ ತಕ್ಷಣವೇ ಬಲವಾದ(Strong)ಮತ್ತು ವಿಶಿಷ್ಟ್ಯವಾದ ಪಾಸ್ವರ್ಡ್ ಅನ್ನು ಬಳಸುವಂತೆ ಮತ್ತು ತಮ್ಮ ಖಾತೆಯಲ್ಲಿ 2 Step Verification ಅನ್ನು ಸಕ್ರಿಯಗೊಳಿಸುವಂತೆ ಒತ್ತಾಯಿಸಿದ್ದಾರೆ. ಇದು ನಿಮ್ಮ ಪಾಸ್ರ್ಡ್ ಕದ್ದಿದ್ದರೂ ಸಹ, ಹ್ಯಾಕರ್ಗಗಳು ನಿಮ್ಮ ಖಾತೆಯನ್ನು ಪ್ರವೇಶಿಸದಂತೆ ತಡೆಯುತ್ತದೆ. ಈ ಮುನ್ನೆಚ್ಚರಿಕೆ ಕ್ರಮಗಳು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿಡಲು ನಿರ್ಣಾಯಕವಾಗಿವೆ
