Bulet Trains Structurer: ನಿಮಗೆ ಎಂದಾದರೂ ಅನಿಸಿದೆಯಾ ಬುಲೆಟ್ ರೈಲುಗಳು(Bulet Trains) ಏಕೆ ನಮ್ಮ ಮೂಗಿನಂತೆ ಉದ್ಯವಾಗಿರುತ್ತವೆ ಎಂದು? ಭಾರತದ ವಂದೇ ಭಾರತ್ ರೈಲುಗಳಿಗೂ(onde Bharat Train) ಇದೇ ರೀತಿಯ ವಿನ್ಯಾಸವಿದೆ. ಇದರ ಹಿಂದೆ ಒಂದು ಆಸಕ್ತಿದಾಯಕ ಕಥೆಯಿದೆ. ಜಪಾನ್ನಲ್ಲಿ ಬುಲೆಟ್ ರೈಲುಗಳನ್ನು(Bullet Train) ಆರಂಭಿಸಿದಾಗ ಒಂದು ದೊಡ್ಡ ಸಮಸ್ಯೆ ಅವರನ್ನು ಕಾಡುತ್ತಿತ್ತು. ಆಗ ಇಂಜಿನಿಯರ್ಗಳಿಗೆ ದಾರಿ ತೋರಿಸಿದ್ದು ಒಂದು ಪುಟ್ಟ ಹಕ್ಕಿ! ಆ ಹಕ್ಕಿ ತೋರಿಸಿದ ಪರಿಹಾರದಿಂದ ರೈಲುಗಳು ಮತ್ತಷ್ಟು ವೇಗ ಪಡೆದುಕೊಂಡವು ಹಾಗಾದರೆ, ಆ ಸಮಸ್ಯೆ ಯಾವುದು, ಮತ್ತು ಆ ಹಕ್ಕಿ ಹೇಗೆ ಸಹಾಯ ಮಾಡಿತು ಎಂಬುದನ್ನು ಈಗ ನೋಡೋಣ.
ಮಿಂಚಿನ ವೇಗದಲ್ಲಿ ಚಲಿಸುವ ಬುಲೆಟ್ ರೈಲುಗಳು(Bulet Train) ಹಿಂದೆ ಒಂದು ದೊಡ್ಡ ಸಮಸ್ಯೆಗೆ ಸಿಲುಕಿದ್ದವು. ಈ ಸಮಸ್ಯೆ ಎಷ್ಟರ ಮಟ್ಟಿಗೆ ಗಂಭೀರವಾಗಿತ್ತು ಎಂದರೆ, ರೈಲುಗಳು ಬಂದಾಗ ಜನರು ಕಿವಿಗಳನ್ನು ಮುಚ್ಚಿಕೊಂಡು ನಿಲ್ಲುತ್ತಿದ್ದರು. ಕೆಲವೊಮ್ಮೆ ಈ ಯೋಜನೆಯನ್ನೇ ಕೈಬಿಡಬೇಕಾದ ಪರಿಸ್ಥಿತಿ ಬಂದಿತ್ತು. ಆಗ ಈ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದ ಇಂಜಿನಿಯರ್ಗಳ ಗಮನಕ್ಕೆ ಬಂದಿದ್ದು ಒಂದು ಪುಟ್ಟ ಹಕ್ಕಿ.
ಆ ಸಮಸ್ಯೆ ಏನು?
ಜಪಾನ್ನಲ್ಲಿ(Japan) 1964ರಲ್ಲಿ ವಿಶ್ವದ ಮೊದಲ ಹೈ-ಸ್ಪೀಡ್ ರೈಲು(Word First High Speed Train) ‘ಶಿಂಕಾನ್ಸೆನ್’ ಅನ್ನು ಆರಂಭಿಸಲಾಯಿತು. ಟೋಕಿಯೊ ಒಲಿಂಪಿಕ್ಸ್(Tokiyo Olampik) ಸಂದರ್ಭದಲ್ಲಿ ಟೋಕಿಯೊ ಮತ್ತು ಒಾಧಿಕಾ ನಗರಗಳನ್ನು ಸಂಪರ್ಕಿಸಲು ಈ ರೈಲನ್ನು ನಿರ್ಮಿಸಲಾಗಿತ್ತು. ಆರಂಭದಲ್ಲಿ ಈ ರೈಲುಗಳು 210 ಕಿ.ಮೀ/ಗಂ ವೇಗದಲ್ಲಿ ಚಲಿಸುತ್ತಿದ್ದರೂ, ನಂತರ ಅವುಗಳ ವೇಗವನ್ನು 300ಕಿ.ಮೀ/ಗಂ ಗೆ ಹೆಚ್ಚಿಸಲಾಯಿತು. ಮುಂದೆ ಈ ಹೆಚ್ಚಿದ ವೇಗವೇ ಸಮಸ್ಯೆಯನ್ನು ತಂದೊಡ್ಡಿತು.
ಇದನ್ನೂ ಓದಿ: Peter Naverro Stetment: ರಷ್ಯಾದಿಂದ ಭಾರತ ತೈಲ ಖರೀದಿಯ ಲಾಭ ಬ್ರಾಹ್ಮಣರಿಗೆ ಮಾತ್ರ, ಟ್ರಂಪ್ ಸಲಹೆಗಾರನ ಹೇಳಿಕೆ
ರೈಲುಗಳಲ್ಲಿ ತೀವ್ರ ಶಬ್ದ ಬರಲು ಪ್ರಮುಖ ಕಾರಣ ಏನು ಗೊತ್ತಾ?
ಈ ಬುಲೆಟ್ ರೈಲುಗಳು(Bulet Trains) ವೇಗವಾಗಿ ಸುರಂಗದೊಳಗೆ ಪ್ರವೇಶಿಸಿದಾಗ, ಅವು ‘ಟನಲ್ ಬೂಮ್’ ಎಂಬ ಅತಿ ಭೀಕರ ಶಬ್ದವನ್ನು ಮಾಡುತ್ತಿದ್ದವು. ರೈಲು ಒಂದು ದೊಡ್ಡ ಪಿಸ್ಮನ್ನಂತೆ ಕೆಲಸ ಮಾಡಿ, ಅದರ ಮುಂದಿರುವ ಗಾಳಿಯನ್ನು ಸುರಂಗದೊಳಗೆ ವೇಗವಾಗಿ ತಳ್ಳುತ್ತಿತ್ತು ಸುರಂಗದಲ್ಲಿ ಗಾಳಿಗೆ ಹೊರಹೋಗಲು ಜಾಗ ಇಲ್ಲದಿರುವುದರಿಂದ, ಅದು ಇನ್ನೊಂದು ತುದಿಯಲ್ಲಿ ದೊಡ್ಡ ಸ್ಪೋಟದಂತಹ ಶಬ್ದ ಮಾಡುತ್ತ ಹೊರಬರುತ್ತಿತ್ತು ಈ ಶಬ್ದವು ಕೆಲವು ಕಿಲೋಮೀಟರ್ ದೂರದವರೆಗೆ ಕೇಳಿಸುತ್ತಿತ್ತು ಮತ್ತು ಜನರಿಗೆ ತೀವ್ರ ತೊಂದರೆ ಕೊಡುತ್ತಿತ್ತು. ಇದರಿಂದಾಗಿ, ಬುಲೆಟ್ ರೈಲು ಯೋಜನೆಗೆ ಅಪಾಯ ಎದುರಾಗಿತ್ತು.
ಕಿಂಗ್ ಫಿಶರ್ ಹಕ್ಕಿ ಹೇಗೆ ಪರಿಹಾರ ನೀಡಿತು?
ರೈಲ್ವೆ ಟೆಕ್ನಿಕಲ್ ಡೆವಲಪ್ಮೆಂಟ್ ವಿಭಾಗದ ಜನರಲ್ ಮ್ಯಾನೇಜರ್ ಆಗಿದ್ದ ನಕಾಟ್ಟು ಎಂಬ ಇಂಜಿನಿಯರ್ ಒಬ್ಬರು ಪಕ್ಷಿಗಳನ್ನು ತುಂಬ ಇಷ್ಟಪಡುತ್ತಿದ್ದರು. ಅವರು ಒಂದು ದಿನ ‘ಕಿಂಗ್ಫಿಶರ್’ ಹಕ್ಕಿಯು(KingFisher Bird) ಮೀನು ಹಿಡಿಯಲು ನೀರಿನಲ್ಲಿ ಧುಮುಕುವುದನ್ನು ಗಮನಿಸಿದರು. ಕಿಂಗ್ಫಿಶರ್(Kingfisher) ನೀರಿನಲ್ಲಿ ಧುಮುಕಿದಾಗ ಯಾವುದೇ ಸದ್ದು ಅಥವಾ ನೀರಿನ ಅಲೆಗಳು ಸೃಷ್ಟಿಯಾಗುತ್ತಿರಲಿಲ್ಲ. ಇದರ ಉದ್ದವಾದ, ಚೂಪಾದ ಕೊಕ್ಕು ನೀರನ್ನು ಸಲೀಸಾಗಿ ಸೀಳಿ ಒಳ ಹೋಗುತ್ತಿತ್ತು ಇದು ನೀರು ಹಕ್ಕಿ ಮೇಲೆ ಹಾಕುವ ಒತ್ತಡವನ್ನು ಕಡಿಮೆ ಮಾಡುವುದರಿಂದ ಹಕ್ಕಿ ಸುಲಭವಾಗಿ ಮೀನುಗಳನ್ನು ಹಿಡಿಯಲು ಸಾಧ್ಯವಾಗುತ್ತಿತ್ತು.
ಇದೇ ತತ್ವವನ್ನು ನಕಾಟ್ಟು ಅವರು ಬುಲೆಟ್ ರೈಲಿಗೆ(Bulet Train) ಅನ್ವಯಿಸಿದರು. 1997ರಲ್ಲಿ 500 ಸರಣಿಯ ಶಿಂಕಾನ್ ರೈಲಿನ ಮುಂಭಾಗವನ್ನು ಕಿಂಗ್ ಫಿಶರ್ ಹಕ್ಕಿಯ(Kingfisher Bird) ಕೊಕ್ಕಿನಂತೆ ವಿನ್ಯಾಸಗೊಳಿಸಲಾಯಿತು(Bulet Trains Structurer). ಈ ಉದ್ದನೆಯ ಮೂಗಿನ ವಿನ್ಯಾಸದಿಂದಾಗಿ, ರೈಲು ಸುರಂಗದೊಳಗೆ ಪ್ರವೇಶಿಸಿದಾಗ ಗಾಳಿಯನ್ನು ನಿಧಾನವಾಗಿ ಒಳಗೆ ತಳ್ಳುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುವುದರಿಂದ ಸುರಂಗದಿಂದ ಹೊರಬರುವ ಶಬ್ದವೂ ಕಡಿಮೆಯಾಗುತ್ತದೆ. ಈ ವಿನ್ಯಾಸದಿಂದಾಗಿ ಶಬ್ದದ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಯಿತು.
ಅಷ್ಟೇ ಅಲ್ಲದೆ, ಈ ವಿನ್ಯಾಸದಿಂದಾಗಿ ಬುಲೆಟ್ ರೈಲಿನ(Bullet Train) ಕುರೋಡೈನಾಮಿಕ್ ಡ್ರಾಗ್ ಕಡಿಮೆಯಾಯಿತು. ಅಂದರೆ, ರೈಲು ಗಾಳಿಯನ್ನು ಸುಲಭವಾಗಿ ಸೀಳಿಕೊಂಡು ಹೋಗಲು ಸಾಧ್ಯವಾಯಿತು. ಇದರಿಂದಾಗಿ ರೈಲುಗಳು ಹಿಂದಿಗಿಂತಲೂ ಬೇಗವಾಗಿ ಮತ್ತು ಹೆಚ್ಚು ಶಾಂತವಾಗಿ ಓಡಲು ಆರಂಭಿಸಿದವು ಇದು ಜಪಾನ್ ಮಾತ್ರವಲ್ಲದೆ ಚೀನಾ, ಪ್ರಾನ್ಸ್ ಮತ್ತು ಜರ್ಮನಿಯಂತಹ ದೇಶಗಳ ಬುಲೆಟ್ ರೈಲುಗಳಿಗೂ ಪ್ರೇರಣೆಯಾಯಿತು.
ಒಟ್ಟಿನಲ್ಲಿ ಜಪಾನ್ ಬುಲೆಟ್ ರೈಲುಗಳ(Japan Bullet Train)ಯಶಸ್ಸು ಕೇವಲ ತಂತ್ರಜ್ಞಾನದಿಂದ ಮಾತ್ರವಲ್ಲ, ಅದು ಪ್ರಕೃತಿಯಿಂದ ಪಡೆದ ಸ್ಪೂರ್ತಿಯಿಂದ ಸಾಧ್ಯವಾಗಿದೆ. ಫಿಲ್ಲಿಲ್ನಿ ಕಮಲ ಮಂದಿರ, ಚೀನಾದ ಬೀಜಿಂಗ್ ರಾಷ್ಟ್ರೀಯ ಕ್ರೀಡಾಂಗಣ, ಸೌರ ಫಲಕಗಳು ಮತ್ತು ಗಾಳಿ ಟರ್ಬೈನ್ ಗಳಂತಹ ಅನೇಕ ಆಧುನಿಕ ವಿನ್ಯಾಸಗಳಿಗೂ ಪ್ರಕೃತಿಯೇ ಸ್ಪೂರ್ತಿಯಾಗಿದೆ.
