Reading Time: < 1 minute
ಯಾರೆಂದು ಕೆಳಬೇಡವೋ ಮನುಜ..||
ನರಸಿಂಹನೆ ಭುವಿಯೊಳು ರ್ವಿಭವಿಸಿ,,
ಮಡಿಲಲ್ಲಿ ಮಲಗಿಸಿಕೊಂಡು ಜೋಗುಳ ಹಾಡಿದ ಕಂದನ…..
ಯಾರೆಂದು ಕೇಳ ಬೇಡವೋ….
ದಾಸರಿಗೆ ಆಲದಮರವಾಗಿ,, ಹರಿ ಸುಧೆಯ ವಸುಧರೆಯೊಳು ಹರಿಸಿ..
ಪಾವನವಾಗಿಸಿದ ವ್ಯಾಸರಾಜರ…..
ಕೃಷ್ಣನ ಕೊಳಲದನಿಗೆ ವೀಣೆಯ ರಾಗ ಬೆರೆಸುವ ವೈಣಿಕ ವಿದ್ವಾಂಸನ,,,
ಪ್ರಾಣ ದೇವರರನ್ನು ಪಂಚ ವದನದಲ್ಲೀ ರ್ಶಿಸಿದ್ದ ತಪಸ್ವಿಯ ಟಟ ಯಾರೆಂದು ಕೇಳ ಬೇಡವೋ…
ಮೂಲರಾಮರನ್ನು ಕಲಿಯುಗದಲ್ಲಿ ಪೂಜಿಪ,,
ವೇದ ಶ್ರುತಿಯ ಅರಿತು, ಪರಿಮಳ ಚರ್ಯ ಎನಿಸಿದ ಪಂಡಿತನ ||
ಬಿಸಿಲ ಮಂಚಾಲೆಗೆ ಅರುಹಿ,,,ಸಜೀವ ಬೃಂದಾವನಸ್ಥರಾದ ಶ್ರೀ ಗುರುರಾಯರ ||
ಏಕಾದಶಿಯ ಉಪವಾಸದಲ್ಲಿಯು,, ಹೊಟ್ಟೆ ತುಂಬಿದ ನರರ ಕೋರಿಕೆಗೆ
ಇಲ್ಲ ಎನ್ನದ ಕಾಮಧೇನುವ ಯಾರೆಂದು ಕೇಳ ಬೇಡವೋ.
ದುರುಗೇಶ ಅಂಕುಂ
ಸಹಾಯಕ ತೋಟಗಾರಿಕೆ ಅಧಿಕಾರಿ,
ಸಿದ್ದಾಪುರ , ಉತ್ತರ ಕನ್ನಡ ಜಿಲ್ಲೆ
