ಬಿಹಾರ್: ಕೆಲವು ಕಥೆಗಳು ಕಲ್ಪನೆಯನ್ನು ಮೀರಿರುತ್ತವೆ. ಅಂತಹದ್ದೇ ಒಂದು ಕರುಣಾಜನಕ ಮತ್ತು ವಿಚಿತ್ರ ಘಟನೆ ಬಿಹಾರದ ಮಧುಬನಿ(Bihar Madhubani) ಜೈಲಿನಲ್ಲಿ ನಡೆದಿದೆ(Bihar Jail Wedding). ಜೈಲಿನ ಕೈದಿಯೊಬ್ಬ, ತನ್ನ ಮೇಲೇ ಅತ್ಯಾಚಾರ ಆರೋಪ ಮಾಡಿದ್ದ ಮಹಿಳೆಯನ್ನೇ ಮದುವೆಯಾಗಿದ್ದಾನೆ. ಇದರಲ್ಲಿ ಇನ್ನೊಂದು ವಿಚಿತ್ರ ವಿಷಯ ಏನೆಂದರೆ, ಆ ಮಹಿಳೆ ಬೇರೆ ಯಾರು ಅಲ್ಲ ಆತನ ಸ್ವಂತ ಅತ್ತಿಗೆ! ಇದು ನಂಬಲು ಅಸಾಧ್ಯ ಎನಿಸಿದರು ಇದೇ ಸತ್ಯ.
ಅತ್ತಿಗೆಯನ್ನೇ ಮದುವೆಯಾದ ಖೈದಿ
2022ರಲ್ಲಿ ಆರೋಪಿಯ ಅಣ್ಣ ತೀರಿಕೊಂಡ ನಂತರ, ಆರೋಪಿ ಮತ್ತು ಆತನ ಅತ್ತಿಗೆ ಒಟ್ಟಿಗೆ ವಾಸಿಸಲು ಶುರು ಮಾಡಿದ್ದರು. ಇಬ್ಬರೂ ಆರಂಭದಲ್ಲಿ ಕೆಲವು ಕಾಲ ಜೊತೆಗೆ ಇದ್ದರು. ಜೀವನವು ಸರಾಗವಾಗಿಯೇ ಸಾಗುತ್ತಿತ್ತು ಆದರೆ, ಕೆಲವು ದಿನಗಳ ನಂತರ ಇಬ್ಬರ ನಡುವ ಇದ್ದಕ್ಕಿದ್ದಂತೆ ಭಿನ್ನಾಭಿಪ್ರಾಯಗಳು ಮೂಡಲು ಆರಂಭಿಸಿದವು. ಇದರಿಂದ ಬೇಸರಗೊಂಡ ಅತ್ತಿಗೆ, 2024ರ ಜೂನ್ 29ರಂದು ಪೊಲೀಸರಿಗೆ ಈತ ತನ್ನನ್ನು ಅತ್ಯಾಚಾರ ಮಾಡಿರುವುದಾಗಿ ದೂರು ನೀಡಿದ್ದಳು. ದೂರು ದಾಖಲಿಸಿಕೊಂಡ ಪೊಲೀಸರು ಅತ್ಯಾಚಾರ ಆರೋಪದ ಮೇಲೆ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: Mandya Crime News: ತಂದೆಯನ್ನೇ ಕೆಡ್ಡಕ್ಕೆ ತಳ್ಳಲು ಹೊರಟಿದ್ದ ಮಗ, ಮಗನ ಸಹಿತ 4 ಆರೋಪಿಗಳನ್ನು ಬಂಧಿಸಿದ ಪೊಲೀಸರು
ಆರೋಪಿ ಜಾಮೀನಿಗಾಗಿ ಪಾಟ್ನಾ ಹೈಕೋರ್ಟ್ ಗೆ(Patna High Court) ಹೋದಾಗ, ನ್ಯಾಯಾಲಯ ಒಂದು ವಿಚಿತ್ರವಾದ ಷರತ್ತು ವಿಧಿಸಿತ್ತು. “ನೀವು ಆಕೆಯನ್ನು ಮದುವೆಯಾದರೆ ಮಾತ್ರ ನಿಮಗೆ ಜಾಮೀನು ಸಿಗುತ್ತದೆ. ಮದುವೆಯಾದ ನಂತರ, ಅದರ ಬಗ್ಗೆ ಕೆಳ ನ್ಯಾಯಾಲಯಕ್ಕೆ ತಿಳಿಸಬೇಕು” ಎಂದು ಹೇಳಿದ. ನ್ಯಾಯಾಲಯದ ಈ ಆದೇಶದ ನಂತರ, ಆರೋಪಿಯು ಜೈಲಿನಲ್ಲಿಯೇ ಮದುವೆಯಾಗಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ. ಇದಕ್ಕೆ ನ್ಯಾಯಾಲಯ ಕೂಡ ಅನುಮತಿ ನೀಡಿತ್ತು.
ಜೈಲಿನಲ್ಲಿ ಅದ್ಧೂರಿ ವಿವಾಹ
ನ್ಯಾಯಾಲಯದ ಆದೇಶದ ಮೇರೆಗೆ, ಜೈಲು ಅಧಿಕಾರಿಗಳು ವಧು-ವರರಿಬ್ಬರ ಮದುವೆಗೆ ಅದ್ದೂರಿ ವ್ಯವಸ್ಥೆ ಮಾಡಿದ್ದರು. ಜೈಲಿನ ಸೂಪರಿಂಟೆಂಡಂಟ್(Jail Superintendent) ಓಂ ಪ್ರಕಾಶ್ ಶಾಂತಿ ಭೂಷಣ್ ಅವರೇ ಖುದ್ದಾಗಿ ಈ ವಿವಾಹಕ್ಕ ಸಾಕ್ಷಿಯಾದರು(Bihar Jail Wedding). ಸಂಬಂಧಿಕರ ಬದಲು ಜೈಲಿನ ಸಿಬ್ಬಂದಿ, ಮತ್ತು ಗೆಳೆಯರ ಬದಲು ಸಹ-ಖೈದಿಗಳು ಈ ಮದುವೆಯಲ್ಲಿ ಪಾಲ್ಗೊಂಡಿದ್ದರು. ಇದು ಬಹಳ ಅತ್ಯಪರೂಪದ ಮತ್ತು ವಿಚಿತ್ರ ಘಟನೆ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ. ನ್ಯಾಯಾಲಯದ ಆದೇಶದ ಪ್ರಕಾರವೇ ಈ ಮದುವೆ ನಡೆಸಿದ್ದೇವೆ ಎಂದು ಜೈಲು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ನ್ಯಾಯಾಲಯ(Court) ಏಕೆ ಇಂತಹ ವಿಚಿತ್ರ ನಿರ್ಧಾರ ತೆಗೆದುಕೊಂಡಿತು? ಈ ಮದುವೆಯ ಹಿಂದಿರುವ ಭಾವನಾತ್ಮಕ ಕಥೆ ಏನು? ಕಾನೂನಿನ ದೃಷ್ಟಿಯಲ್ಲಿ ಇದು ಎಷ್ಟರ ಮಟ್ಟಿಗೆ ಸರಿ? ಎಂಬಿತ್ಯಾದಿ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿವೆ.
