ಮಂಡ್ಯ: ಪ್ರೀತಿಯಿಂದ ಸಾಕಿದ ಮಗನೇ ಆಸ್ತಿಗೆ ಆಸೆಪಟ್ಟು ಕಡೆಗೆ ಜನ್ಮ ಕೊಟ್ಟ ತಂದೆಯನ್ನೇ ಬ್ಲಾಕ್ ಮೇಲ್(blackmail) ಮಾಡಲು ಹೊರಟ ಒಂದು ದುರಂತ ಘಟನೆ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ. ರಿಯಲ್ ಎಸ್ಟೇಟ್(real estate) ಉದ್ಯಮಿಯಾಗಿರುವ ಸತೀಶ್ ಅವರಿಗೆ ಮಗ ಪ್ರಣವ್ ವಾಟ್ಸಾಪ್ ಮೂಲಕ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಹಣಕ್ಕಾಗಿ ಬೆದರಿಕೆ ಹಾಕಿದ್ದಾನೆ ತಾಳ್ಮೆ ಕಳೆದುಕೊಂಡ ತಂದೆ ಕೊನೆಗೆ ಪೊಲೀಸರ ಮೊರೆ ಹೋಗಿದ್ದಾರೆ ಸದ್ಯ ಮಗ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ(Mandya Crime News). ಈ ಘಟನೆ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಸ್ತಿಗಾಗಿ ತಂದೆಗೆ ಬ್ಲಾಕ್ ಮೇಲ್
ಸತೀಶ್ ಅವರು ರಾಜ್ಯದ ವಿವಿಧಡೆ ತಮ್ಮದೇ ಆದ ರಾಣಿ ಐಶ್ವರ್ಯ ಡೆವಲಪರ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ(Real Estate b
Business) ನಡೆಸುತ್ತಾರೆ. ಅವರ ಮಗ ಪ್ರಣಮ್(25) ವಿರೋಧಿಗಳ ಜೊತೆ ಸೇರಿಕೊಂಡು ತಂದೆಯ ವಿರುದ್ಧ ಕಿತೂರಿ ಮಾಡಲು ಯೋಚಿಸಿದ್ದ, ಆತನ ಈ ದುರಾಲೋಚನೆಗೆ ಕೆಲವು ಸ್ನೇಹಿತರು ಸಹ ಕೈಜೋಡಿಸಿದ್ದರು.
ಇದನ್ನೂ ಓದಿ: NIRF 2025: NIRF ರಾಂಕಿಂಗ್ ಬಿಡುಗಡೆ- ಸತತ 7ನೇ ಬಾರಿ ಐಐಟಿ ಮದ್ರಾಸ್ ಗೆ ಅಗ್ರಸ್ಥಾನ ಬೆಂಗಳೂರಿನ IISC ಗೆ 2ನೇ ಸ್ಥಾನ
ಈ ಹಿಂದೆ ಮಗನ ಮೇಲಿನ ಮೋಹಕ್ಕೆ ಕೋಟಿ ಕೋಟಿ ಆಸ್ತಿಯನ್ನು ಸತೀಶ್ ಅವರು ಮಗನ ಹೆಸರಿಗೆ ಮಾಡಿದ್ದರು. ಆದರೆ ಈತ ಈ ಆಸ್ತಿಯನ್ನು ಡಬಲ್ ಮಾಡುವುದನ್ನು ಬಿಟ್ಟು ದ್ವಿಚಟಗಳಿಗೆ ದಾಸನಾಗಿ, ಜೂಜು , ಶೇರ್ ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡಿ ಕೈ ಸುಟ್ಟಿಕೊಂಡಿದ್ದ. ಇಷ್ಟು ಮಾತ್ರವಲ್ಲದೆ ಎರಡು ಕೋಟಿ ಆಸ್ತಿಯನ್ನು ಸಹ ಮಾರಿಬಿಟ್ಟಿದ್ದ. ತಂದೆಗೆ ತನ್ನ ಮಗ ಈ ರೀತಿ ಹಾಳಾಗುತ್ತಿರುವುದನ್ನು ನೋಡಿ ಮಗನ ಹೆಸರಿಗೆ ಮಾಡಿದ್ದ ಆಸ್ತಿಯನ್ನು ಆತ ಯಾರಿಗೂ ಮಾರದಂತೆ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದರು. ಆದರೆ ತಂದೆ ಈ ರೀತಿ ಮಾಡಿದ್ದು ತಿಳಿದು ತಂದೆಯ ಮೇಲೆ ದ್ವೇಷ ಬೆಳೆಸಿಕೊಂಡಿದ್ದ. ಪ್ರಣಮ್ ತಂದೆಗೆ 5 ಕೋಟಿ ಕೊಡುವಂತೆ ಕೇಳಿದ್ದ ಆದರೆ ತಂದೆ ಇದಕ್ಕೆ ಒಪ್ಪದೆ ಹೋದಾಗ ಕೊನೆಗೆ ತಂದೆಯನ್ನೆ ಬ್ಲಾಕ್ ಮೇಲ್ ಮಾಡಲು ಮುಂದಾಗಿದ್ದಾನೆ.
ಯಾವ ತಂದೆಯೂ ಊಹಿಸಿಲಾರದ ರೀತಿ ಈತ ತಂದೆಯ ಭಾವಚಿತ್ರಕ್ಕೆ ಅಶ್ಲೀಲ ಚಿತ್ರಗಳನ್ನು ಮತ್ತು ಅವರ ಧ್ವನಿಹೊಲುವ ಆಡಿಯೋ ಎಡಿಟ್ ಮಾಡಿ ಅದನ್ನು ವಾಟ್ಸಾಪ್ ಗುಂಪಲ್ಲಿ ಹಂಚಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಇದು ಸತೀಶ್ ಅವರಿಗೆ ಬಾರಿ ಬೇಸರತರಿಸಿತ್ತು. ತನ್ನ ವಿರುದ್ಧ ಯಾರೋ ಪಿತೂರಿ ಮಾಡುತ್ತಿದ್ದಾರೆಂದು ಸತೀಶ್ ಅವರು ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಿಸಿದರು.
ಆದರೆ ಸತೀಶ್ ಅವರಿಗೆ ತಮ್ಮ ಮಗನ ಮೇಲೆ ಮೊದಲಿನಿಂದಲೂ ಅನುಮಾನವಿತ್ತು. ಆದರೂ ಇದು ಮಾನಸಿಕ ಹಿಂಸೆಗೆ ಕಾರಣವಾಗಿ ಸತೀಶ್ ಅವರು ರೋಸಿ ಹೋಗಿದ್ದರು. ಕೃತ್ಯಕ್ಕೆ ಪ್ರಚೋದನೆ ನೀಡಿದವರ ವಿರುದ್ಧವೂ ದೂರು ನೀಡಿದ್ದರು. ಮದ್ದೂರು ಪೊಲೀಸರು(Madhur Police) ತಕ್ಷಣ ಕ್ರಮ ಕೈಗೊಂಡು ಆರೋಪಿಗಳಾದ ಪ್ರಣಮ್, ಮಹೇಶ್, ಈಶ್ವರ್ ಮತ್ತು ಪ್ರೀತಮ್ ಎಂಬವರನ್ನು ಬಂಧಿಸಿದ್ದಾರೆ. ಸದ್ಯ ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆಸ್ತಿಗಾಗಿ ಮಗನೊಬ್ಬ ತನ್ನ ತಂದೆಗೆ ಈ ರೀತಿ ಮಾಡಬಹುದಾ ಎಂಬುದು ಎಲ್ಲರನ್ನು ಅಚ್ಚರಿಗೀಡು ಮಾಡಿದೆ.
