ನವದೆಹಲಿ: ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ ನೀಡಲಾಗುವ NIRF 2025ರ(National Institute of Ranking 2025) ರ್ಯಾಂಕಿಂಗ್ ಪಟ್ಟಿಯಲ್ಲಿ ಐಐಟಿ ಮದ್ರಾಸ್(IIT Madras) ಒಟ್ಟಾರೆ ವಿಭಾಗದಲ್ಲಿ ಸತತ 7ನೇ ಬಾರಿ ಅಗ್ರಸ್ಥಾನದಲ್ಲಿದೆ. ಇದು 2016 ರಿಂದಲೂ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜ್ ಆಗಿ ಸತತ ಹತ್ತನೇ ಬಾರಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಇನ್ನು ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್(Indian Institute of Science) ಎರಡನೇ ಸ್ಥಾನದಲ್ಲಿದ್ದರೆ ಐಐಟಿ ಬಾಂಬೆ (IIT Bombay) ಮೂರನೇ ಸ್ಥಾನಗಳಿಸಿದೆ.(NIRF 2025)
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Central Education Minister Dharmendra Pradhan) ಹಾಗೂ ರಾಜ್ಯ ಸಚಿವ ಸುಕಾಂತ್ ಮಜುಂದರ್ ಅವರು ಗುರುವಾರ ಒಟ್ಟು 17 ವಿಭಾಗಗಳ ರ್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಇಂಜಿನಿಯರಿಂಗ್, ಮ್ಯಾನೇಜ್ಮೆಂಟ್, ವೈದ್ಯಕೀಯ ವಿಶ್ವವಿದ್ಯಾಲಯ, ಕಾನೂನು, ಸಂಶೋಧನೆ ಮತ್ತು ಕೃಷಿ ವಿಭಾಗಗಳು ಈ ಪಟ್ಟಿಯಲ್ಲಿ ಸೇರಿವೆ.
ಇದನ್ನೂ ಓದಿ: Dharmastala Case Update: ಧರ್ಮಸ್ಥಳ ಪ್ರಕರಣಕ್ಕೆ ಹೊಸ ತಿರುವು, ಕೇಂದ್ರ ಸರ್ಕಾರದ ಎಂಟ್ರಿ- NIA ತನಿಖೆಗೆ ಅಮಿತ್ ಶಾ ಭರವಸೆ
ಇನ್ನುಳಿದ ಸಂಸ್ಥೆಗಳ ಪೈಕಿ ಐಐಟಿ ರೂರ್ಕಿ ಕಳೆದ ವರ್ಷಕ್ಕಿಂತ ಒಂದು ಸ್ಥಾನ ಮೇಲೇರಿ ಐದನೇ ಸ್ಥಾನಕ್ಕೆ ಬಂದಿದೆ. ಇದರಿಂದ ದೆಹಲಿಯ ಏಮ್ಸ್(AIIMS Delhi) ಆರನೇ ಸ್ಥಾನಕ್ಕೆ ಕುಸಿದಿದೆ. ಆದರೆ ದೆಹಲಿಯ ಜವಾಹರ್ಲಾಲ್ ನೆಹರು ವಿಶ್ವವಿದ್ಯಾಲಯ JNU ಹಾಗೂ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ(Banaras Hindu University) ತಮ್ಮ ರ್ಯಾಂಕಿಂಗ್ಗಳನ್ನು ಸುಧಾರಿಸಿಕೊಂಡು ಕ್ರಮವಾಗಿ 9 ಮತ್ತು 10ನೇ ಸ್ಥಾನಕ್ಕೆ ಏರಿಕೆ ಕಂಡಿವೆ.
ಈ ವರ್ಷದ ರ್ಯಾಂಕ್ ನಲ್ಲಿ ಹೊಸದಾಗಿ ಸೇರಿಸಲಾದ ಸುಸ್ಥಿರ ಅಭಿವೃದ್ಧಿ ಗುರಿಗಳು ಎಂಬ ವಿಭಾಗದಲ್ಲೂ ಐಐಟಿ ಮದ್ರಾಸ್( IIT Madras)ಮೊದಲ ಸ್ಥಾನ ಪಡೆದುಕೊಂಡಿದ್ದಾರೆ ಪರಿಸರ ಸಂರಕ್ಷಣೆ ಮತ್ತು ಹಸಿರು ಉಪಕ್ರಮಗಳ ಆದರದ ಮೇಲೆ ಈ ರ್ಯಾಂಕ್ ಗಳನ್ನು ನೀಡಲಾಗುತ್ತದೆ.
ಇದನ್ನೂ ಓದಿ: Karnataka weather Report: ವಾರಾಂತ್ಯದವರೆಗೆ ನಗರದಲ್ಲಿ ಗುಡುಗು ಸಹಿತ ಭಾರಿ ಮಳೆ, ಹವಾಮಾನ ಇಲಾಖೆ ಎಚ್ಚರಿಕೆ
ಇನ್ನೂ ಪ್ರಮುಖ ವಿಭಾಗಗಳ ಅಗ್ರಸ್ಥಾನಗಳ ಪಟ್ಟಿಯಲ್ಲಿ ಬೆಂಗಳೂರಿನ ಐಐಎಸ್ಸಿ ಅತ್ಯುತ್ತಮ ವಿಶ್ವವಿದ್ಯಾನಿಲಯವಾಗಿ, ದೆಹಲಿಯ ಏನ್ ವೈದ್ಯಕೀಯ ವಿಭಾಗದಲ್ಲಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯ ಯುನಿವರ್ಸಿಟಿ, ಕಾನೂನು ವಿಭಾಗದಲ್ಲಿ ಮತ್ತು ದೆಹಲಿ ವಿಶ್ವವಿದ್ಯಾನಿಲಯದ ಹಿಂದೂ ಕಾಲೇಜ್ ಉತ್ತಮ ಕಾಲೇಜು ಆಗಿ ಗುರುತಿಸಿಕೊಂಡಿದೆ.
