ನವದೆಹಲಿ : ಧರ್ಮಸ್ಥಳ ಪ್ರಕರಣದ(Dharmastala Case Update) ಹಿನ್ನೆಲೆಯಲ್ಲಿ ಕರ್ನಾಟಕದ ಸ್ವಾಮೀಜಿಗಳ ನಿಯೋಗ ಅಮಿತ್ ಶಾ ಅವರನ್ನು ಭೇಟಿ ಮಾಡಿ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (NIA) ಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಸ್ವಾಮೀಜಿಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ(Home Minister Amith shah) ಅವರು ದೆಹಲಿಯಲ್ಲಿ ಮಹತ್ವದ ಭರವಸೆ ನೀಡಿದ್ದಾರೆ. “ನಾನೇ ಖುದ್ದಾಗಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಮತ್ತು ಸದ್ಯದಲ್ಲೇ ಕ್ರಮ ಕೈಗೊಳ್ಳುತ್ತೇನೆ,” ಎಂದು ಶಾ(Amith shah) ಸ್ವಾಮೀಜಿಗಳಿಗೆ ಭರವಸೆ ನೀಡಿದ್ದಾರೆ.
ಈ ಹಿಂದೆ, “ಧರ್ಮಸ್ಥಳದಲ್ಲಿ(dharmastala Case Update) ನೂರಾರು ಶವಗಳನ್ನು ಹೂತಿದ್ದೇನೆ” ಎಂದು ಚಿನ್ನಯ್ಯ(Chinnayya) ಮಾಡಿರುವ ಗಂಭೀರ ಆರೋಪಗಳ ತನಿಖೆಯನ್ನು ಎನ್ಐಎಗೆ ವಹಿಸುವಂತೆ ಒತ್ತಾಯಿಸಿ, ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹಾಗೂ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ನೇತೃತ್ವದ ನಿಯೋಗವು ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿತ್ತು.
ಇದನ್ನೂ ಓದಿ: Karnataka weather Report: ವಾರಾಂತ್ಯದವರೆಗೆ ನಗರದಲ್ಲಿ ಗುಡುಗು ಸಹಿತ ಭಾರಿ ಮಳೆ, ಹವಾಮಾನ ಇಲಾಖೆ ಎಚ್ಚರಿಕೆ
ಅಮಿತ್ ಶಾ ಹೇಳಿದ್ದೇನು?
ಒಂದು ಗಂಟೆಗಳ ಕಾಲ ಸ್ವಾಮೀಜಿಗಳೊಂದಿಗೆ ಚರ್ಚೆ ನಡೆಸಿದ ಅಮಿತ್ ಶಾ(Amith shah) ಅವರು, “ಧರ್ಮ ಕ್ಷೇತ್ರಗಳ” ವಿರುದ್ಧ ನಡೆಯುತ್ತಿರುವ ಅಪಪ್ರಚಾರಕ್ಕೆ ಕಡಿವಾಣ ಹಾಕಲು ಹೊಸ ಕಾನೂನು ತರಲು ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ. ನೀವು ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿ,” ಎಂದು ಸ್ವಾಮೀಜಿಗಳಿಗೆ ಸಲಹೆ ನೀಡಿದ್ದಾರೆ.
ಪ್ರಕರಣದ ಇತರೆ ಬೆಳವಣಿಗೆಗಳು
ಚಿನ್ನಯ್ಯನ ವಿಚಾರಣೆ ಮುಂದುವರಿಕೆ: ಮಾಸ್ಟ್ಮ್ಯಾನ್ ಚಿನ್ನಯ್ಯನ 12 ದಿನಗಳ ಎಸ್ಐಟಿ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ, ಬುಧವಾರ ಆತನನ್ನು ಬೆಳ್ತಂಗಡಿ ಕೋರ್ಟ್ಗೆ ಹಾಜರುಪಡಿಸಲಾಯಿತು. ಚಿನ್ನಯ್ಯನನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು ಮತ್ತೊಮ್ಮೆ ಮೂರು ದಿನಗಳ ಕಾಲ ಆತನನ್ನು ಎಸ್ಐಟಿ ವಶಕ್ಕೆ ನೀಡಿದೆ. ಮೂರು ದಿನಗಳ ವಿಚಾರಣೆ ಬಳಿಕ ಚಿನ್ನಯ್ಯನ ಸೆಪ್ಟೆಂಬರ್ 6ರಂದು ಮತ್ತೆ ಕೋರ್ಟಿಗೆ ಹಾಜರುಪಡಿಸುವಂತೆ ಸೂಚಿಸಿದ ಸೂಚಿಸಲಾಗಿದೆ. ಹೀಗಾಗಿ ಮತ್ತೆ ಎಸ್ಐಟಿ ತನಿಖೆ ತೀವ್ರಗೊಂಡಿದೆ.
ಇದನ್ನೂ ಓದಿ: Inspirational Teacher: “ಜ್ಞಾನ ದೀಪದ ಜೊತೆಯಲ್ಲಿ ನಡೆದ ಹಾದಿ”
ಧರ್ಮ ಜಾಗೃತಿ ಸಮಾವೇಶ: ಧರ್ಮಸ್ಥಳದ(Dharmastala Case Update) ವಿರುದ್ಧದ ಅಪಪ್ರಚಾರ ಖಂಡಿಸಿ ಶುಕ್ರವಾರ ಧರ್ಮಸ್ಥಳದಲ್ಲಿ ‘ಧರ್ಮ ಜಾಗೃತಿ ಸಮಾವೇಶ’ ಆಯೋಜಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಮತ್ತು ಕಾಸರಗೋಡು ಜಿಲ್ಲೆಗಳ ದೇವಸ್ಥಾನ, ಬಸದಿಗಳ ಪ್ರಮುಖರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಸಮಾವೇಶವನ್ನು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಯೂಟ್ಯೂಬರ್ಗಳ ವಿಚಾರಣೆ: ಈ ಪ್ರಕರಣದ ಪ್ರಸಾರಕ್ಕೆ ವಿದೇಶಗಳಿಂದ ಹಣ(Foeign Funds) ಹರಿದು ಬಂದಿರುವ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ED) ಈಗಾಗಲೇ ಪ್ರಾಥಮಿಕ ತನಿಖೆ ಆರಂಭಿಸಿದೆ. ಜೊತೆಗೆ, ಎಸ್ಐಟಿ(SIT) ಅಧಿಕಾರಿಗಳು ಯೂಟ್ಯೂಬರ್ ಅಭಿಷೇಕ್(Youtuber Abishek). ಅನ್ನು ತೀವ ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆ ವೇಳೆ, ಕೇವಲ ಲೈಕ್ಸ್ ಹಾಗೂ ವೀವ್ಸ್ ಗಾಗಿ ಸುಳ್ಳು ವಿಡಿಯೋಗಳನ್ನು ಮಾಡಿದ್ದಾಗಿ ಆತ ತಪ್ರೊಪ್ಪಿಕೊಂಡಿದ್ದಾನೆ. ಇನ್ನಷ್ಟು ಯೂಟ್ಯೂಬರ್ಗಳಿಗೂ ನೋಟಿಸ್ ನೀಡಲು ಎಸ್ಐಟಿ ಸಿದ್ಧತೆ ನಡೆಸಿದೆ.
