NEET Success Story: ಕನಸುಗಳನ್ನು ನನಸಾಗಿಸಲು ಬಡತನ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಶುಭಂ ಸಬರ್(Shubham Sabar) ಎಂಬ ವಿದ್ಯಾರ್ಥಿ ಅತ್ಯುತ್ತಮ ಉದಾಹರಣೆ. ಕುಟುಂಬದ ಆರ್ಥಿಕ ಸಂಕಷ್ಟಗಳಿಗೆ ಹೆಗಲು ಕೊಟ್ಟ ಈ ಯುವಕ, ಬದುಕಿಗಾಗಿ ಕೂಲಿ ಕೆಲಸ ಮಾಡುತ್ತಲೇ ವೈದ್ಯನಾಗಬೇಕೆಂಬ ತನ್ನ ಕನಸನ್ನು ಕೈಬಿಡಲಿಲ್ಲ. ಲಕ್ಷಾಂತರ ವಿದ್ಯಾರ್ಥಿಗಳು ಸ್ಪರ್ಧಿಸುವ ನೀಟ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾನೆ(NEET Success Story). ಕಷ್ಟಪಟ್ಟು ಓದಿದರೆ ಎಂತಹ ಕನಸು ಕೂಡ ನನಸಾಗುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ.
ಇದನ್ನೂ ಓದಿ: UDYAM ನೊಂದಣಿ ಮಾಡಿಸಿದ್ದೀರಾ?: ಕಡಿಮೆ ಬಡ್ಡಿಗೆ ಸಾಲ, ಸರ್ಕಾರಿ ಟೆಂಡರ್ ಗಳು ನಿಮ್ಮ ಪಾಲಾಗುತ್ತೆ!
ಕುಟುಂಬವನ್ನು ಸಾಕಲು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಶುಭಂ ಸಬರ್(Shubham Sabar), ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಎಂಬಿಬಿಎಸ್ ಕೋರ್ಸ್ಗೆ ಇದೀಗ ಪ್ರವೇಶ ಪಡೆದಿದ್ದಾನೆ.
ಒಡಿಶಾದ ಖುರ್ದಾ ಜಿಲ್ಲೆಯ ಬನಪುರ್ ತಾಲೂಕಿನ ಮುದುಲಿಧಿಹಾ ಎಂಬ ಹಳ್ಳಿಯ ಬಡ ಕುಟುಂಬದಿಂದ ಬಂದಿರುವ ಶುಭಂ(Shubham Sabar) , ತನ್ನ ಶಿಕ್ಷಕ ಬಸುದೇವ ಮೊಹರಾನ ಅವರಿಂದ ಕರೆ ಬಂದಾಗ ಆಶ್ಚರ್ಯಚಕಿತನಾಗಿದ್ದ. “ನೀನು ಸಿಹಿ ಹಂಚು” ಎಂದು ಶಿಕ್ಷಕರು ಹೇಳಿದಾಗ, ಆಶ್ಚರ್ಯಗೊಂಡ ಶುಭಂ, “ಯಾಕೆ ಸರ್?” ಎಂದು ಕೇಳಿದ್ದಾನೆ. ಅದಕ್ಕೆ, “ನೀನು ನೀಟ್ ಪರೀಕ್ಷೆಯಲ್ಲಿ ವಾಸಾಗಿದ್ದೀಯಾ” ಎಂದು ಶಿಕ್ಷಕರು ತಿಳಿಸಿದ್ದಾರೆ. ಈ ವಿಷಯ ಕೇಳಿದ ಕೂಡಲೇ ಶುಭಂ ಕಣ್ಣಲ್ಲಿ ನೀರು ತುಂಬಿಕೊಂಡಿದೆ. ಆ ಕ್ಷಣಕ್ಕೆ ಆತನ ಖುಷಿಗೆ ಪಾರವೇ ಇರಲಿಲ್ಲ. ತಕ್ಷಣ ತಡ ಮಾಡದೆ ಗುತ್ತಿಗೆದಾರನ ಅನುಮತಿ ಪಡೆದು ಮರುದಿನವೇ ಊರಿಗೆ ಮರಳಿದ್ದಾನೆ.
ಮೂರು ತಿಂಗಳ ಕೆಲಸದಲ್ಲಿ ಶುಭಂ ₹45,000 ಸಂಪಾದಿಸಿದ್ದ. ಅದರಲ್ಲಿ ₹25,000 ಉಳಿತಾಯ ಮಾಡಿದ್ದ. “ನನ್ನ ಕುಟುಂಬಕ್ಕೆ ಸಹಾಯ ಮಾಡುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ. ನೀಟ್ ಪರೀಕ್ಷೆ ಮುಗಿದ ನಂತರ ಏನಾದರೂ ಕೆಲಸ ಮಾಡೋಣ ಎಂದು ನಿರ್ಧರಿಸಿದೆ. ಒಬ್ಬ ಸ್ಥಳೀಯ ಗುತ್ತಿಗೆದಾರರನ್ನು ಸಂಪರ್ಕಿಸಿದೆ. ಅವರು ನನ್ನನ್ನು ಬೆಂಗಳೂರಿಗೆ ಕಳುಹಿಸಿದರು. ನಾನು ಅಲ್ಲಿ ಉಳಿಸಿದ ಹಣವೇ ವೈದ್ಯಕೀಯ ಕಾಲೇಜಿಗೆ ಸೇರಿಕೊಳ್ಳಲು ಸಹಾಯ ಮಾಡಿದೆ” ಎಂದು ಶುಭಂ(Shubham Sabar) ಹೇಳಿದ್ದಾರೆ.
ಇದನ್ನೂ ಓದಿ: ಮದ್ಯ ಪ್ರಿಯರಿಗೆ ಶಾಕ್: ಗಣೇಶ ವಿಸರ್ಜನೆ ಹಿನ್ನೆಲೆ ಕೆಲವು ಪ್ರದೇಶಗಳಲ್ಲಿ ಬಾರ್ ಬಂದ್
ಕಠಿಣ ಪರಿಶ್ರಮ ಮತ್ತು ಕನಸು
ಶುಭಂ ಸರ್ಬ ಮೊದಲಿಗೆ ಪೊಲೀಸ್ ಅಧಿಕಾರಿಯಾಗಬೇಕೆಂದು ಬಯಸಿದ್ದ. ಆದರೆ ಉನ್ನತ ಶಿಕ್ಷಣಕ್ಕಾಗಿ ತಯಾರಿ ಆರಂಭಿಸಿದ ನಂತರ ವೈದ್ಯನಾಗುವ ಕನಸು ಕಾಣಲು ಶುರುಮಾಡಿದ. ಅಂದುಕೊಂಡ ಕನಸ್ಸಿನ ಹಿಂದೆ ಬಿದ್ದು ನನಸಾಗಿಸಿಕೊಂಡಿದ್ದಾನೆ. “ಈಗ ನಾನು ವೈದ್ಯನಾಗುವ ಕನಸಿನ ಹಾದಿಯಲ್ಲಿದ್ದೇನೆ. ಒಡಿಶಾ ಜನರಿಗೆ ಸೇವೆ ಸಲ್ಲಿಸಲು ಇದು ಒಂದು ಅವಕಾಶ” ಎಂದು ಶುಭಂ(Shubham Sabar) ಹೇಳಿದ್ದಾರೆ.
ಶುಭಂ ತಂದೆ ಸಹದೇವ್ ಮತ್ತು ತಾಯಿ ರಂಗಿ ತಮ್ಮ ಮಗನ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ, ‘ಸಣ್ಣ ವಯಸ್ಸಿನಿಂದಲೇ ಅವನು ಬಹಳ ಕಷ್ಟಪಟ್ಟು ಕೆಲಸ ಮಾಡುವ ಸ್ವಭಾವದವನು ಮತ್ತು ಪ್ರತಿಭಾವಂತನಾಗಿದ್ದ. ಅವನು ವೈದ್ಯನಾಗಲು ಬಯಸಿದ್ದ. ಅವನ ಕಠಿಣ ಪರಿಶ್ರಮವೇ ಈ ಯಶಸ್ಸಿಗೆ ಕಾರಣ” ಎಂದು ಶುಭಂ ತಾಯಿ ರಂಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. “ಶುಭಂ ತನ್ನ ಹೆತ್ತವರ ಮತ್ತು ಸಹೋದರ-ಸಹೋದರಿಯರ ಕಷ್ಟವನ್ನು ನೋಡಿಯೇ ಬೆಳೆದಿದ್ದಾನೆ. ಕಷ್ಟಪಟ್ಟು ಕೆಲಸ ಮಾಡುವುದನ್ನು ಅವನು ಕಲಿತಿದ್ದ” ಎಂದು ಅವರು ಭಾವುಕರಾಗಿ ನುಡಿದಿದ್ದಾರೆ.
