Udyam Registration: ಹೌದು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಂದು ವ್ಯಾಪಾರವನ್ನು ಕಟ್ಟಿ ಬೆಳೆಸುವುದು ಸುಲಭದ ಮಾತಲ್ಲ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (MSME) ಬಂಡವಾಳದ ಕೊರತೆ, ಹೆಚ್ಚಿನ ಬಡ್ಡಿ ದರ, ಮತ್ತು ಮಾರುಕಟ್ಟೆಯಲ್ಲಿನ ತೀವ್ರ ಸ್ಪರ್ಧೆ – ಇವೆಲ್ಲವೂ ಸಣ್ಣ ಉದ್ಯಮಿಗಳ ಕನಸನ್ನು ನುಚ್ಚುನುರಿಯಾಗಿಸಬಹುದು. ಆದರೆ, ಈ ಸಮಸ್ಯೆಗಳಿಗೆ ಒಂದು ಉತ್ತಮ ಪರಿಹಾರವಿದೆ. ಅದುವೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಉದ್ಯಮ್ ಪೋರ್ಟಲ್'(Udyam Portal)
ಈ ಪೋರ್ಟಲ್'(Udyam Portal) ಕೇವಲ ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸುವುದಷ್ಟೇ ಅಲ್ಲ, ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಇರುವ ಅಡೆ ತಡೆಗಳನ್ನು ನಿವಾರಿಸುತ್ತದೆ. ಯಾವುದೇ ಶುಲ್ಕವಿಲ್ಲದೆ, ದಾಖಲೆಗಳಿಲ್ಲದೆ, ಸಂಪೂರ್ಣವಾಗಿ ಆನ್ಲೈನ್ನಲ್ಲಿ ನಿಮ್ಮ ವ್ಯವಹಾರವನ್ನು ನೋಂದಾಯಿಸಿ, ಹಲವು ಪ್ರಯೋಜನಗಳನ್ನು ಪಡೆಯಬಹುದು. ಒಮ್ಮೆ ನೋಂದಣಿಯಾದ ನಂತರ, ನಿಮ್ಮ ಕಂಪನಿಯು ಪ್ಯಾನ್(Pan Card), ಜಿಎಸ್ಟಿ(GST) ಮತ್ತು ಐಟಿ (IT) ಯಂತಹ ಸರ್ಕಾರಿ ಡೇಟಾಬೇಸ್ಗಳಲ್ಲಿ(Government Database) ದಾಖಲಾಗುತ್ತದೆ. ಹಾಗಾದರೆ, ಈ ಉದ್ಯಮ್ ನೋಂದಣಿಯಿಂದಾಗುವ ಲಾಭಗಳು ಏನೆಂದು ನೋಡೋಣ.
ಇದನ್ನೂ ಓದಿ: ಮದ್ಯ ಪ್ರಿಯರಿಗೆ ಶಾಕ್: ಗಣೇಶ ವಿಸರ್ಜನೆ ಹಿನ್ನೆಲೆ ಕೆಲವು ಪ್ರದೇಶಗಳಲ್ಲಿ ಬಾರ್ ಬಂದ್
ಉದ್ಯಮ್(Udyam) ನೋಂದಣಿಯಿಂದಾಗುವ ಮುಖ್ಯ ಲಾಭಗಳು
ಕಡಿಮೆ ಬಡ್ಡಿಯಲ್ಲಿ ಸಾಲ: ನಿಮ್ಮ ಕಂಪನಿಯನ್ನು ಉದ್ಯಮ್ ಪೋರ್ಟಲ್ನಲ್ಲಿ(Udyam Portal) ನೋಂದಾಯಿಸಿದರೆ, ಸಾಮಾನ್ಯಕ್ಕಿಂತ ಕಡಿಮೆ ಬಡ್ಡಿಯಲ್ಲಿ ಸಾಲ ಪಡೆಯಬಹುದಾಗಿದೆ. ಉದ್ಯಮ್ ಸರ್ಟಿಫಿಕೇಟ್ ಹೊಂದಿರುವ MSMEಗಳಿಗೆ ಬ್ಯಾಂಕ್ಗಳು ಹೆಚ್ಚಿನ ಆದ್ಯತೆ ನೀಡುತ್ತವೆ. ವಿಶೇಷವಾಗಿ ಎಸ್ಬಿಐ (SBI) ಮತ್ತು ಎಚ್ಡಿಎಫ್ಸಿ (HDFC) ಯಂತಹ ಬ್ಯಾಂಕ್ಗಳು ಒಂದು ಕೋಟಿ ರೂಪಾಯಿವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿವೆ.
ಸರ್ಕಾರಿ ಯೋಜನೆಗಳ ಲಾಭ: ಸರ್ಕಾರವು MSMEಗಳಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಉದ್ಯಮ್ ನೋಂದಣಿ(Udyam Registration) ಮಾಡಿಸುವುದು ಈ ಯೋಜನೆಗಳ ಲಾಭ ಪಡೆಯಲು ಒಂದು ಪ್ರಮುಖ ಸರ್ಟಿಫಿಕೇಟ್ ಇದ್ದಂತೆ. ಪಬ್ಲಿಕ್ ಪ್ರೊಕ್ಯೂರ್ಮೆಂಟ್ ಪಾಲಿಸಿ, ಕ್ಯಾಪಿಟಲ್ ಗ್ಯಾರಂಟಿ ಸ್ಕೀಮ್(Capital Guarantee Skim), ಕ್ರೆಡಿಟ್ ಲಿಂಕ್ಸ್ ಕ್ಯಾಪಿಟಲ್ ಸಬ್ಸಿಡಿ ಸ್ಕೀಮ್(Credit Links Capital Subsidy) ಮತ್ತು ಸಾಲ ಮರುಪಾವತಿ ವಿಳಂಬವಾದಾಗ ರಕ್ಷಣೆ ನೀಡುವಂತಹ ಯೋಜನೆಗಳ ಲಾಭ ಪಡೆಯಲು ಉದ್ಯಮ್ ನೋಂದಣಿ ಕಡ್ಡಾಯ.
ಇದನ್ನೂ ಓದಿ: Property Registration Fees: ಕರ್ನಾಟಕದಲ್ಲಿ ಆಸ್ತಿ ನೋಂದಣಿ ದುಬಾರಿ: ನಾಳೆಯಿಂದಲೇ ನೋಂದಣಿ ಶುಲ್ಕ ಏರಿಕೆ
ವೆಚ್ಚ ಕಡಿತ: ಈ ಲಾಭದ ಬಗ್ಗೆ ಅನೇಕರಿಗೆ ತಿಳಿದಿಲ್ಲ ಉದ್ಯಮ್ ನೋಂದಣಿಯಿಂದಾಗಿ ನಿಮ್ಮ ಕಂಪನಿಯ ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಗೊಳಿಸಬಹುದು. ಹಲವಾರು ರಿಯಾಯಿತಿಗಳು ಮತ್ತು ರಿಯಾಯಿತಿಗಳನ್ನು ಪಡೆಯಲು ಇದು ನಿಮಗೆ ಅವಕಾಶ ನೀಡುತ್ತದೆ.
MAT ಕ್ರೆಡಿಟ್ ವಿಸ್ತರಣೆ: ಉದ್ಯಮ್ ನೋಂದಣಿ ಹೊಂದಿರುವ ಕಂಪನಿಗಳಿಗೆ ಮಿನಿಮಮ್ ಆಲ್ಟರ್ನೇಟಿವ್ ಟ್ಯಾಕ್ಸ್ (MAT) ಕ್ರೆಡಿಟ್ ಅವಧಿಯನ್ನು ಮತ್ತೊಂದು ಐದು ವರ್ಷಗಳ ಕಾಲ ವಿಸ್ತರಿಸಬಹುದು. ಇದು ಮೊದಲು ಹತ್ತು ವರ್ಷಗಳವರೆಗೆ ಇತ್ತು. ಅಂದರೆ, ಒಟ್ಟು 15 ವರ್ಷಗಳವರೆಗೆ ಮ್ಯಾಟ್ ಕ್ರೆಡಿಟ್ ಗಳನ್ನು ಕ್ಯಾರಿ ಮಾಡಬಹುದು.
ಏಕಕಾಲದ ಇತ್ಯರ್ಥ ಯೋಜನೆ (One-Time Settlement Scheme): ಸಾಲ ಮರುಪಾವತಿಯಲ್ಲಿ ತೊಂದರೆ ಎದುರಿಸುತ್ತಿರುವ MSMEಗಳಿಗೆ ಇದು ಒಂದು ದೊಡ್ಡ ಅನುಕೂಲ. ಉದ್ಯಮ್ ನೋಂದಣಿಯೊಂದಿಗೆ, ನೀವು ಒನ್-ಟೈಮ್ ಸೆಟಲ್ಮೆಂಟ್’ ಯೋಜನೆಗೆ ಅರ್ಹರಾಗುತ್ತೀರಿ. ಉದಾಹರಣೆಗೆ, ನಿಮ್ಮ ಆರ್ಥಿಕ ಸ್ಥಿತಿ ಸರಿಯಿಲ್ಲದಿದ್ದರೆ, 20 ಲಕ್ಷದ ಸಾಲವನ್ನು 12 ಲಕ್ಷ ರೂಪಾಯಿಗಳನ್ನು ಒಮ್ಮೆಲೇ ಪಾವತಿಸಿ ಇತ್ಯರ್ಥಪಡಿಸಿಕೊಳ್ಳಬಹುದು.
ಸರ್ಕಾರಿ ಟೆಂಡರ್ಗಳು ಸುಲಭವಾಗಿ ದೊರೆಯುತ್ತವೆ: ಉದ್ಯಮ್ ನಲ್ಲಿ ನೋಂದಾಯಿಸಿದರೆ, ನಿಮ್ಮ MSME ಕಂಪನಿಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರುಕಟ್ಟೆ ವೇದಿಕೆಗಳೊಂದಿಗೆ ಸಂಪರ್ಕ ಸಾಧಿಸುತ್ತದೆ. ಇದರಿಂದಾಗಿ ನಿಮ್ಮ ಕಂಪನಿಗೆ ಸರ್ಕಾರಿ ಟೆಂಡರ್ಗಳು ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.
ಅರ್ಹತೆಗಳು ಮತ್ತು ಬೇಕಾಗಿರುವ ದಾಖಲೆಗಳು
ಉದ್ಯಂ ನೊಂದಣಿ ಮಾಡಿಕೊಳ್ಳಲು ನಿಮ್ಮ ವ್ಯವಹಾರವು ನಿರ್ದಿಷ್ಟ ಬಂಡವಾಳ ಮತ್ತು ವಹಿವಾಟು ಮಿತಿಯೊಳಗೆ ಇರಬೇಕು.
| ಎಂಟರ್ಪ್ರೈಸ್ ಪ್ರಕಾರ | ಹೂಡಿಕೆ ಮಿತಿ | ವಹಿವಾಟು ಮಿತಿ |
| ಸೂಕ್ಷ್ಮ (ಸಣ್ಣ) | 1 ಕೋಟಿ ರೂ. ವರೆಗೆ | 5 ಕೋಟಿ ರೂ. ವರೆಗೆ |
| ಚಿಕ್ಕ | 10 ಕೋಟಿ ರೂ.ಗಳವರೆಗೆ | 75 ಕೋಟಿ ರೂ.ಗಳವರೆಗೆ |
| ಮಧ್ಯಮ (ಮಧ್ಯಮ ಗಾತ್ರದ) | 50 ಕೋಟಿ ರೂ.ಗಳವರೆಗೆ | 250 ಕೋಟಿ ರೂ.ಗಳವರೆಗೆ |
ನೋಂದಣಿಗೆ ಅಗತ್ಯವಿರುವ ದಾಖಲೆಗಳು:
- ಸಂಸ್ಥೆಯ ಪ್ಯಾನ್ ಕಾರ್ಡ್
- ಜಿಎಸ್ಟಿ ಪ್ರಮಾಣಪತ್ರ
- ಸಂಸ್ಥಾಪಕರ ಆಧಾರ್ ಕಾರ್ಡ್ ಪ್ರತಿ
- ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐಎಫ್ಎಸ್ಸಿ ಕೋಡ್
- ಉದ್ಯೋಗಿಗಳ ಸಂಖ್ಯೆ
- ವ್ಯವಹಾರದ ಸ್ವರೂಪ
- ಇತ್ತೀಚಿನ ಆಡಿಟ್ ವರದಿಗಳು
ನೋಂದಣಿ ಪ್ರಕ್ರಿಯೆ:
- ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: udyangstration.gov.in
- ಮುಖಪುಟಕ್ಕೆ ಹೋಗಿ ಹೊಸ ಉದ್ಯಮಿಗಳಿಗಾಗಿ ಇರುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಆಧಾರ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿ OTP ಪಡೆಯಿರಿ.
- ಪಾನ್ ಕಾರ್ಡ್ ವಿವರಗಳು ಮತ್ತು ಜಿಎಸ್ಟಿಐಎನ್ (ಅನ್ವಯಿಸಿದರೆ) ಮಾಹಿತಿ ನೀಡಿ.
- ಎಲ್ಲಾ ವೈಯಕ್ತಿಕ ಮತ್ತು ವ್ಯವಹಾರದ ವಿವರಗಳನ್ನು ನಿಖರವಾಗಿ ನಮೂದಿಸಿ
- ಹೂಡಿಕೆ, ವಹಿವಾಟು, ಮತ್ತು ಉದ್ಯೋಗಿಗಳ ಸಂಖ್ಯೆಯನ್ನು ಭರ್ತಿ ಮಾಡಿ. Validate & Genarate OTP ಬಟನ್ ಮೇಲೆ ಕ್ಲಿಕ್ ಮಾಡಿ.
- ಅಂತಿಮವಾಗಿ, OTPಯನ್ನು ನಮೂದಿಸಿ ನೋಂದಣಿ ಪೂರ್ಣಗೊಳಿಸಿ.
ನೋಂದಣಿ ಪೂರ್ಣಗೊಂಡ ನಂತರ, ನಿಮಗೆ ಹನ್ನೆರಡು ಅಂಕಿಯ ಉದ್ಯಮ್ ನೋಂದಣಿ ಸಂಖ್ಯೆ (URN) ಮತ್ತು QR ಕೋಡ್ ಹೊಂದಿರುವ ಶಾಶ್ವತ ಪ್ರಮಾಣಪತ್ರ ಸಿಗುತ್ತದೆ.
ಗಮನಿಸಬೇಕಾದ ಪ್ರಮುಖ ವಿಷಯಗಳು:
ತಪ್ಪು ಮಾಹಿತಿ ನೀಡಬೇಡಿ: ನೋಂದಣಿ ಮಾಡುವಾಗ ಆಧಾರ್, ಪಾನ್, ಟರ್ನೋವರ್ ಅಥವಾ ಎನ್ಐಸಿ (NIC) ಕೋಡ್ಗಳಲ್ಲಿ ತಪ್ಪುಗಳನ್ನು ಮಾಡಬೇಡಿ. ನಿಖರವಾದ ಮಾಹಿತಿ ನೀಡಿದರೆ ಮಾತ್ರ ಸರಿಯಾದ ವರ್ಗೀಕರಣ ಮತ್ತು ಪ್ರಯೋಜನಗಳು ಲಭಿಸುತ್ತವೆ.
ಉದ್ಯಮ್ ನೋಂದಣಿಯು ಕೇವಲ ಒಂದು ಔಪಚಾರಿಕ ಪ್ರಕ್ರಿಯೆಯಲ್ಲ, ಇದು ನಿಮ್ಮ ವ್ಯವಹಾರದ ಭವಿಷ್ಯಕ್ಕೆ ಹಾಕುವ ಒಂದು ಪ್ರಬಲ ಹೆಜ್ಜೆ. ಸರ್ಕಾರದ ಬೆಂಬಲ, ಕಡಿಮೆ ಬಡ್ಡಿದರಗಳು ಮತ್ತು ಇತರ ಸೌಲಭ್ಯಗಳ ಲಾಭ ಪಡೆದು ನಿಮ್ಮ ಉದ್ಯಮವನ್ನು ಕಟ್ಟಿಕೊಳ್ಳಿ.
